ಬೆಂಗಳೂರು, (ನವೆಂಬರ್ 21): ಆರು ತಿಂಗಳಿಂದ್ಲೂ ಸಿಎಂ ಕುರ್ಚಿಗಾಗಿ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಈ ಬೆಳವಣಿಗೆ ಸದ್ಯ ತೀವ್ರ ಸ್ವರೂಪ ಪಡೆದಿದೆ. ಹೌದು…ನಾಯಕರ ಸಿಎಂ ಪಟ್ಟದ ಆಟ ಬರೀ ಮಾತುಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಸನ್ನೆ ಹಾಗೂ ಸೂಚನೆ ಮೂಲಕವೂ ಚುರುಕಾಗಿದೆ. ಡಿಸಿಎಂ ಡಿಕೆ ಬೆಂಬಲಿಗರು ದೆಹಲಿಯಿಂದ್ಲೇ ದಾಳ ಉರುಳಿಸಿದ್ರೆ, ಸಿದ್ದರಾಮಯ್ಯ ಆಪ್ತರು, ಔತಣಕೂಟ ನೆಪದಲ್ಲಿ ಪ್ರತಿದಾಳ ಉರುಳಿಸಿದ್ದಾರೆ. ಇನ್ನು ಸಿದ್ದರಾಮಯ್ಯ, ಡಿಕೆಶಿ ಮಾಧ್ಯಮಗಳ ಮುಂದೆ ಬಂದು ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡೋದಕ್ಕೆ ಶುರು ಮಾಡಿದ್ದು, ಶಿವಕುಮಾರ್ ಅದನ್ನು ದಾಟಿಯಲ್ಲಿ, ತೆಗೆದುಕೊಂಡ ತಂತ್ರದ ಮಾತುಗಳನ್ನ ಆಡ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದಿಢೀರ್ ಬೆಂಗಳೂರಿನ ಅಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.
ಹೌದು… ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಧಾರವಾಡ ಕೈ ಶಾಸಕ ವಿನಯ್ ಕುಲಕರ್ಣಿ ಹಾಗೂ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಡಿಕೆಶಿ ಶಿವಕುಮಾರ್ ಭೇಟಿ ನೀಡಿದ್ದಾರೆ. ಈ ಮೂಲಕ ಅವರ ವಿಶ್ವಾಸ ಪಡೆದುಕೊಳ್ಳಲು ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿಗಾಗಿ ನಂಬರ್ ಗೇಮ್ ಏನಾದರು ಮುನ್ನೆಚ್ಚರಿಕೆಗೆ ಬಂದರೆ ಸಹಾಯಕ ಎಂಬ ಲೆಕ್ಕಾಚಾರದೊಂದಿಗೆ ಇಬ್ಬರು ಶಾಸರಕರನ್ನು ಭೇಟಿ ಮಾಡಲಾಗಿದೆ.