Headlines

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್​​ ಚುನಾವಣೆ ಗೊಂದಲ ನಿವಾರಿಸಿದ ಹೈಕೋರ್ಟ್​​​, ಎಲೆಕ್ಷನ್ ಯಾವಾಗ?

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್​​ ಚುನಾವಣೆ ಗೊಂದಲ ನಿವಾರಿಸಿದ ಹೈಕೋರ್ಟ್​​​, ಎಲೆಕ್ಷನ್ ಯಾವಾಗ?


ಬೆಂಗಳೂರು, (ನವೆಂಬರ್ 21): ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(KSCA) ಚುನಾವಣೆಯನ್ನು ಡಿಸೆಂಬರ್ 7ಕ್ಕೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಡಿಸೆಂಬರ್ 30 ರಂದು ಚುನಾವಣೆಗೆ ಚುನಾವಣಾಧಿಕಾರಿ ಬರೆದಿರುವ ಪತ್ರ ಪ್ರಶ್ನಿಸಿ ಕೆಎಸ್‌ಸಿಎ, ಬಿ.ಕೆ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಾಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ಡಿಸೆಂಬರ್ 7ರಂದು ಕೆಎಸ್‌ಎಸ್‌ಸಿ ಚುನಾವಣೆಗೆ ನಿರ್ದೇಶನ ನೀಡಿದೆ. ಬೈಲಾ, ಸೂಚಕ ತೀರ್ಪಿನ ಪ್ರಕಾರವೇ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

ಹಾಲಿ ಬೈಲಾ, ನ್ಯಾಯಮೂರ್ತಿ ತೀರ್ಪಿನ ಪ್ರಕಾರ ಚುನಾವಣೆ ನಡೆಸಲು ಸೂಚಿಸಿದ್ದು, ನಿವೃತ್ತ ಸುಭಾಷ್ ಬಿ.ಆಡಿ ಉಸ್ತುವಾರಿಯಲ್ಲಿ ಚುನಾವಣೆ ನಡೆಸಲು ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ನಾಮನಿರ್ದೇಶನ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ ಇಲ್ಲ. 7ರಂದೇ ಬೆಳಿಗ್ಗೆ ಡಿಸೆಂಬರ್ 11 ರಿಂದ ಸಂಜೆ 7 ರವರೆಗೆ ಮತದಾನ. ನಂತರ ಫಲಿತಾಂಶ ಪ್ರಕಟ.

ಕೋರ್ಟ್ ನಿರ್ದೇಶನದಂತೆ ನಾಮಿನೇಷನ್ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ ಇಲ್ಲ. ನವೆಂಬರ್ 24 ರಂದು ಸಂಜೆ 4 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ, ನ.26ರಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ. ಇನ್ನು ನವೆಂಬರ್ 26ರ ಸಂಜೆ 5 ಗಂಟೆಗೆ ಅಭ್ಯರ್ಥಿಗಳ ಅಂತಿಮಪಟ್ಟಿ ಪ್ರಕಟ. ಇನ್ನು ಡಿಸೆಂಬರ್ 7 ರಂದು ಮತದಾನ ನಡೆಯಲಿದೆ, ಅದೇ ಫಲಿತಾಂಶ ಪ್ರಕಟ.

ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್‌ಎಸ್‌ಎ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಬಣ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. 12 ವರ್ಷಗಳ ಬಳಿಕ ವೆಂಕಟೇಶ್‌ ಮತ್ತೆ ಕೆಎಸ್‌ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ವೆಂಕಟೇಶ್ ಈ ಹಿಂದೆ 2010 ರಿಂದ 2013 ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್‌ ಕುಂಬ್ಳೆ ಅಧ್ಯಕ್ಷರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು.



Source link

Leave a Reply

Your email address will not be published. Required fields are marked *