ಬೆಂಗಳೂರು, ನವೆಂಬರ್ 21): 18 ವರ್ಷ ತುಂಬಿದ ಅಪ್ರಾಪ್ತ ಮಕ್ಕಳ ವಾಹನಗಳನ್ನು ಓಡಿಸಲು ಸಾಕಷ್ಟು ಅಪಘಾತಗಳು ಸಂಭವಿಸಿವೆ.ಹಾಲು, ನೀರು ತರಲು ಅಂಗಡಿಗೆ ಹೋಗಲು, ಸ್ಕೂಲ್, ಕಾಲೇಜಿಗೆ ಹೀಗೆ ಕೆಲವು ಕಾರ್ಯಗಳಿಗೆ ಮಕ್ಕಳ ಕೈಯಲ್ಲಿ ಬೈಕ್ ಮತ್ತು ಕಾರು ಚಲಾಯಿಸಲು, ಹದಿಹರಿಯ ವಯಸ್ಸಿನ ಮಕ್ಕಳು ಜೋಷ್ನಲ್ಲಿ ವೇಗವಾಗಿ ಓಡುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ನಿಯಮ ಜಾರಿಗೆ ತರಲು ಮುಂದಾಗಿದ್ದು, ಮಕ್ಕಳು ವಾಹನ ಚಲಾಯಿಸಿದರೆ 25 ಸಾವಿರ ರೂ. ದಂಡ ಮತ್ತು ಜೈಲು ಶಿಕ್ಷೆ.
ಸಣ್ಣ ಮಕ್ಕಳಿಗೆ ವಾಹನ ಚಲಾಯಿಸಲು ಕೊಡದಂತೆ ಸಾರಿಗೆ ಇಲಾಖೆ ಪೋಷರಿಗೆ ಎಚ್ಚರಿಕೆ ನೀಡಲು ಮುಂದಾಗಿದೆ. ಸಣ್ಣ ಮಕ್ಕಳು ಜೋಷ್ ನಲ್ಲಿ ವಿಪರೀತ ವೇಗವಾಗಿ ವಾಹನಗಳನ್ನು ಓಡಿಸಲು ಎಕ್ಸಿಡೆಂಟ್ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆಕ್ಸಿಡೆಂಟ್ಗಳು ಹೆಚ್ಚಾಗಿ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಕೈ ಕಾಲು ಮುರಿದು ಕೊಳ್ಳುತ್ತಿದ್ದರೆ, ಇದನ್ನು ತಪ್ಪಿಸುವ ರಾಜ್ಯ ಸಾರಿಗೆ ಇಲಾಖೆ ಸಣ್ಣ ಮಕ್ಕಳು ವಾಹನಗಳನ್ನು ಚಲಾಯಿಸಬಾರದೆಂದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸ್ವಾಗತಿಸಿದ್ದು, ಡಿಎಲ್ ಇಲ್ಲದ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಗನಿಗೆ ಬೈಕ್ ಕೊಟ್ಟ ತಂದೆಗೆ ಜೈಲು ಶಿಕ್ಷೆ: ಅಪ್ರಾಪ್ತರಿಗೆ ವಾಹನ ಕೊಡುವ ಮುನ್ನ ಹುಷಾರ್
ಈ ಬಗ್ಗೆ ಸರ್ಕಾರಕ್ಕೆ ಕೋರ್ಟ್ ಖಡಕ್ ಸೂಚನೆ
ಮೊನ್ನೆ ಅಷ್ಟೇ ಈ ಸಂಬಂಧ ಕರ್ನಾಟಕ ಮಹತ್ವದ ನಿರ್ದೇಶನ ನೀಡಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವ ಮಕ್ಕಳ ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳು ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138ರ ಅನುಷ್ಟಾನಕ್ಕೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿದೆ.
ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಅರ್ಚನಾ ಭಟ್ ಕೆ. ಎಂಬವರು 2023ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ, ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಜೊತೆಗೆ, ಕೇಂದ್ರ ಮೋಟಾರು ವಾಹನ ನಿಯಮಗಳು ಜಾರಿಗೆ ತರುವಲ್ಲಿ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡರೂ, ವಾಸ್ತವವಾಗಿ ಜಾರಿಗೆ ಬಂದಿಲ್ಲ. ಈ ರೀತಿಯ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.