
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಸುಮ್ಮನೆ ಯಾವುದೂ ಬರುವುದಿಲ್ಲ, ಅದಕ್ಕೆ ಬೆಲೆ ತೆರವು. ಪದೇ ಪದೇ ನಿಮಗೆ ಈ ದಿನ ನೆನಪಾಗುವ ಮಾತು ಇದಕ್ಕಿಂತ ಹೆಚ್ಚಾಗಿರುತ್ತದೆ. ಪ್ರಭಾವ ಬಳಸಿ ಇಲ್ಲಿಯವರೆಗೆ ಎಟ್ ನಿಮಗಿಂತ ಮುಂದೆ ಸಾಗುತ್ತಿದೆ ಎಂದೆನಿಸಿ, ಈಗ ನೀವು ಅನುಸರಿಸುತ್ತಿರುವ ಸ್ಟ್ರಾಟೆಜಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತೀರಿ. ನಿಮ್ಮಲ್ಲಿ ಕೆಲವರು ಮನೆ ಗಾರ್ಡನಿಂಗ್ ಗಾಗಿ ಸ್ಥಳವನ್ನು ನಿಗದಿಪಡಿಸಿ, ವೃತ್ತಿಪರರಿಂದ ಅಲ್ಲಿ ಕೆಲಸಗಳನ್ನು ಮಾಡಲು ನಿರ್ಧಾರ ತೆಗೆದುಕೊಳ್ಳುವಂತೆ ಆಗಲಿದೆ. ಕಮಾಡಿಟಿ ಮಾರ್ಕೆಟ್‌ನಲ್ಲಿ ಟ್ರೇಡಿಂಗ್ ಮಾಡುತ್ತಾ ಇರುವವರು ಈಗ ಹಾಕಿರುವ ಹೂಡಿಕೆಯನ್ನು ಹಿಂದಕ್ಕೆ ಓದುವಂತೆ ಮಾಡಿದ್ದಾರೆ. ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇಂಥ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಏಕೆಂದರೆ ಇಂಥ ದಾಖಲೆಗಳ ಕೆಲವನ್ನು ಕಳೆದುಕೊಂಡು ಆ ನಂತರ ಪಡಿಪಾಟಲು ಪಡುವಂತೆ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಅಡುಗೆ ಮನೆ ಬಳಕೆ ಮಾಡುವ ಪಾತ್ರೆ-ಪದಾರ್ಥಗಳನ್ನು, ಸ್ಮಾರ್ಟ್ ಡಿವೈಸ್ ಗಳನ್ನು ಖರೀದಿಸಲು ಈ ದಿನದ ಹೆಚ್ಚಿನ ಸಮಯವನ್ನು ಇಡಲಾಗಿದೆ. ಸಂಗಾತಿಯ ಬಹಳ ದಿನದ ಬೇಡಿಕೆಯಾದ ವಸ್ತುಗಳನ್ನು ಖರೀದಿಸಲು ಬ್ರ್ಯಾಂಡೆಡ್ ಮಳಿಗೆಗಳಿಗೆ ತೆರಳಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತೀರಿ ಅಂತಾದಲ್ಲಿ ಖರ್ಚಿನ ಮೇಲೆ ಹಿಡಿತ ಇರಲಿ. ಹೋಟೆಲ್- ರೆಸ್ಟೋರೆಂಟ್ ನಡೆಸುತ್ತಾ ಇರುವ ಈಗಿನ ಆಹಾರ ಪದಾರ್ಥಗಳೊಂದಿಗೆ ಹೊಸದಾಗಿ ಮತ್ತೆ ಕೆಲವನ್ನು ಸೇರಿಸಿದ್ದಾರೆ. ಇದರಿಂದ ನಿಮ್ಮ ಆದಾಯ ಕೂಡ ಹೆಚ್ಚಾಗುವುದಕ್ಕೆ ದಾರಿ ತೆರೆದುಕೊಳ್ಳಲಿದೆ. ನಿಮ್ಮ ಮೊಬೈಲ್ ಫೋನ್ ರೀಚಬಲ್ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಏಕೆಂದರೆ ಉದ್ಯೋಗ- ವೃತ್ತಿಯ ನೆಲೆಗಟ್ಟಿನಲ್ಲಿ ನಿಮಗೆ ಬಹಳ ಮುಖ್ಯವಾದ, ಜೊತೆಗೆ ಅನುಕೂಲ ಆಗುವ ಮೂಲಕ ಫೋನ್ ಮೂಲಕವೇ ಪಡೆಯಲಾಗಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಎಲ್ಲ ಸಂಗತಿಗಳಿಗೆ ಗಂಭೀರ ಧ್ವನಿಯಲ್ಲಿ ಎಚ್ಚರಿಕೆ ನೀಡುವುದರಿಂದಲೋ ಅಥವಾ ಹೆದರಿಕೆ ಹುಟ್ಟಿಸುವುದರಿಂದಲೋ ಪರಿಹಾರ ಸಿಗುವುದಿಲ್ಲ ಎಂಬುದು ನಿಮ್ಮ ಕೆಲವರಿಗೆ ಬಲವಾಗಿ ಅನಿಸುವುದಕ್ಕೆ ಶುರುವಾಗಿದೆ. ಇನ್ನು ಐಟಿ- ಬಿಪಿಯೋ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಮಶೀನ್ ಲರ್ನಿಂಗ್ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಮ್ಮ ಮೇಲಿರುವ ಒತ್ತಡವನ್ನು ಹೇಗಾದರೂ ಕಡಿಮೆ ಮಾಡಿಕೊಳ್ಳಬೇಕು ಎಂಬ ಉದ್ದೇಶವಿರುತ್ತದೆ. ಆದರೆ ಆ ಕಾರಣಕ್ಕೆ ಇತರರ ಮೇಲೆ ಸಿಟ್ಟನ್ನು ಹಾಕಬೇಡಿ. ಇನ್ನು ನಿಮ್ಮಲ್ಲಿ ಯಾರ ಚಿನ್ನದ ಆಭರಣಗಳ ಮಾರಾಟ ವ್ಯವಹಾರದಲ್ಲಿ ಇದ್ದೀರಿ, ಅಂಥವರಿಗೆ ಗಡುವಿನೊಳಗೆ ಒಪ್ಪಿಕೊಂಡ ಕೆಲಸಗಳನ್ನು ಪೂರ್ಣಗೊಳಿಸುವುದು ಮುಖ್ಯ ಅನ್ನುವುದೇನೋ ನಿಜ. ಆದರೆ ವಾಸ್ತವವನ್ನು ನಿಮ್ಮ ಗ್ರಾಹಕರಿಗೆ ತಿಳಿಸಿ. ತಕ್ಷಣಕ್ಕೆ ತಪ್ಪಿಸಿಕೊಂಡರೆ ಸಾಕು ಎಂಬ ಆಲೋಚನೆಯಲ್ಲಿ ಸುಳ್ಳು ಹೇಳಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಯಾರ ಜೊತೆಗೆ ಎಷ್ಟು ಸಲುಗೆ ಎಂಬ ಲಕ್ಷ್ಮಣ ರೇಖೆ ಎಳೆದುಕೊಳ್ಳುವುದು ಈ ದಿನ ತುಂಬ ಮುಖ್ಯ. ಅದರಲ್ಲೂ ನಿಮಗೆ ಬಹಳ ಸಮಯದ ಮೇಲೆ ಭೇಟಿ- ಮಾತುಕತೆಗೆ ಸಿಗುತ್ತಿರುವ ಗೆಳೆಯ/ ಗೆಳತಿಯರ ಜತೆ ಮಾತನಾಡುವಾಗ ಏನೇನು ಬದಲಾವಣೆ ಆಗಿದೆ, ಯಾವ ಧ್ವನಿ- ಪದ ಬಳಕೆ ಸರಿ ಎಂದು ಯೋಚಿಸಿ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವವರು ಕೆಲವು ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ನಿರ್ಧಾರ ತೆಗೆದುಕೊಳ್ಳುತ್ತೀರಿ. ಇನ್ನು ಈಗಾಲೇ ಎಲ್ಲ ಹಂತವನ್ನು ಪೂರ್ಣಗೊಳಿಸಿದರೆ ಹೊರಡಲು ಬೇಕಾದ ತಯಾರಿಗೆ ಹೆಚ್ಚು ಸಮಯ ನೀಡುತ್ತೀರಿ. ಲೇವಾದೇವಿ ವ್ಯವಹಾರ ಮಾಡುವವರಿಗೆ ಸಾಲ ನೀಡಿರುವಂಥ ಕೆಲವು ವ್ಯಕ್ತಿಗಳಿಂದ ಕೂಡಲೇ ವಸೂಲಿ ಮಾಡಿಬಿಡಬೇಕು ಎಂದು ಬಲವಾಗಿ ಅನಿಸಲಿದೆ. ಕುಟುಂಬದ ಜತೆಗೂಡಿ ನಿಮ್ಮಲ್ಲಿ ಕೆಲವರು ಫುಡ್ ಸ್ಟ್ರೀಟ್, ಮಾಲ್ ಗಳಿಗೆ ತೆರಳಿದ್ದಾರೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನವ ವಿವಾಹಿತರಿಗೆ ಬಹಳ ಒಳ್ಳೆಯ ದಿನ ಇದು. ನಿಮ್ಮಲ್ಲಿ ಕೆಲವು ಹೊಸ ಕಾರು ಖರೀದಿಗೆ ನಿರ್ಧಾರ ಮಾಡುವ ಅಥವಾ ಅಡ್ವಾನ್ಸ್ ಎಂದು ನೀಡಿ, ಕಾರು ಬುಕ್ ಮಾಡುವ ಯೋಗ ಇದೆ. ನಿಮ್ಮ ಆಪ್ತರಿಗಾಗಿ ಉಡುಗೊರೆಗಳನ್ನು ನೀಡಿದ್ದೇನೆ. ಶಾಲೆ ಅಥವಾ ಕಾಲೇಜಲ್ಲಿ ಒಟ್ಟಿಗೆ ಓದಿದ ಸ್ನೇಹಿತರನ್ನು ಮತ್ತೆ ಒಟ್ಟು ಸೇರಿಸುವ ಕಾರ್ಯಕ್ರಮದ ಮುಂದಾಳತ್ವವನ್ನು ನೀವು ವಹಿಸುವಂತೆ ಕೇಳಿಕೊಳ್ಳಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ಅಥವಾ ವೇತನದ ಬಗ್ಗೆ ಸ್ನೇಹಿತರ ಮೂಲಕ ಮಾಹಿತಿ ದೊರೆಯಬಹುದು. ಹೊಸ ತಂತ್ರಜ್ಞಾನಗಳನ್ನು ಕಲಿಯುವ ಕಡೆಗೆ ನಿಮ್ಮಲ್ಲಿ ಕೆಲವರ ಆಸಕ್ತಿ ಕುದುರಲಿದೆ. ನಿಮ್ಮಲ್ಲಿ ಕೆಲವರು ಈ ಹಿಂದೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು ಎಂಬ ಕಾರಣಕ್ಕೆ ಪ್ರತೀಕಾರ ಹೇಳಬೇಕು ಎಂಬ ಆಲೋಚನೆ ಈ ದಿನ ನಿಮ್ಮನ್ನು ಬಹುವಾಗಿ ಕಾಡಲಿದೆ. ಕೆಲವು ಕೆಲಸಗಳನ್ನು ಏಕಾಗ್ರತೆಯಿಂದ ಮಾಡುವುದು ಸಹ ಕಷ್ಟಸಾಧ್ಯ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಸಾಲೆ ಆಹಾರ ಪದಾರ್ಥಗಳಿಂದ ಈ ದಿನ ದೂರವಿದ್ದಷ್ಟು ಒಳ್ಳೆಯದು. ನಿಮ್ಮಲ್ಲಿ ಕೆಲವರಿಗೆ ವಿಪರೀತ ಎದೆಯುರಿ, ಹೊಟ್ಟೆಯುಬ್ಬರ, ಹುಳಿತೇಗು ಈ ರೀತಿ ಸಮಸ್ಯೆಗಳು ತೀವ್ರವಾಗಿ ಕಾಡಲಿದೆ. ಮನೆಯ ಆಹಾರ ಪದಾರ್ಥಗಳ ಸೇವನೆಯಷ್ಟೇ ಮಾಡುವುದಕ್ಕೆ ಆದ್ಯತೆ ನೀಡಿ. ಇನ್ನು ಹೊಸದಾಗಿ ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡಬೇಕು ಎಂದುಕೊಂಡಿರುವವರು ನಿರ್ಧಾರವನ್ನು ಕೆಲವು ದಿನಗಳ ಕಾಲ ಮುಂದಕ್ಕೆ ಹಾಕುವುದು ಒಳ್ಳೆಯದು. ಆರ್.ಡಿ., ಪಿಪಿಎಫ್, ಸುಕನ್ಯಾ ಸಮೃದ್ಧಿ ಇಂತಹ ಉಳಿತಾಯ ಯೋಜನೆಗಳಿಗೆ ಹಣ ಹಾಕುವುದಕ್ಕೆ ನಿರ್ಧಾರ ಕೈಗೊಳ್ಳುವ ಯೋಗ ಇದ್ದು, ಕುಟುಂಬದಲ್ಲಿನ ಕೆಲವು ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸ ಬಟ್ಟೆ, ಶೂ, ವಾಚ್ ಇಂಥವುಗಳನ್ನು ಖರೀದಿಸಲು ನಿಮ್ಮಲ್ಲಿ ಕೆಲವರು ಹಣವನ್ನು ಖರ್ಚು ಮಾಡಿದ್ದಾರೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಹಠಮಾರಿ ಧೋರಣೆಯಿಂದಾಗಿ ತಿಕ್ಕಾಟ ಮಾಡಿಕೊಳ್ಳುವಂತೆ ಆಗಲಿದೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಅನ್ನೋ ಮಾತಿದೆಯಲ್ಲ, ಆ ರೀತಿಯಲ್ಲಿ ಸಣ್ಣ- ಪುಟ್ಟ ವಿಷಯಗಳ ಬಗ್ಗೆ ದೂರು ನೀಡುವುದು, ಜಗಳ ಆಡುವುದು ಇಂಥದ್ದನ್ನು ಮಾಡಿಕೊಳ್ಳಬೇಕು. ಈ ದಿನ ನಿಮಗೆ ಕೆಲವು ಸಮಾರಂಭ- ಕಾರ್ಯಕ್ರಮಗಳಿಗೆ ಆಹ್ವಾನ ದೊರೆಯಲಿದೆ, ಅಲ್ಲಿಗೆ- ತಿಂಡಿ ಬಹಳ ಸಂತೋಷವನ್ನು ನೀಡಲಿದೆ. ಅಬ್ಬರ- ಅದ್ಧೂರಿಯಿಂದ ಮಾಡಬೇಕು ಅಂದುಕೊಂಡಿದ್ದ ನಿಮ್ಮ ಮನೆಯ ಸಮಾರಂಭವನ್ನು ಸರಳವಾಗಿ ಮಾಡಿ ಮುಗಿಸಲು ಕುಟುಂಬ ಸದಸ್ಯರೆಲ್ಲ ಸೇರಿ ನಿರ್ಧಾರ ಮಾಡಲಿದೆ. ಉದ್ಯೋಗ ಅಥವಾ ವೃತ್ತಿ ಮಾಡುವ ಸ್ಥಳದಲ್ಲಿ ನಿಮಗೆ ಪೂರಕವಾದ ವಾತಾವರಣ ಇರುವುದಿಲ್ಲ. ಆದ್ದರಿಂದ ನಿಮ್ಮ ಅಭಿಪ್ರಾಯವನ್ನು ಕೇಳುವ ತನಕ ನೀವಾಗಿಯೇ ಏನನ್ನೂ ಹೇಳುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಅದೃಷ್ಟ ಈ ದಿನ ನಿಮ್ಮ ಪಾಲಿಗೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ- ಕಾರ್ಯಗಳು ಪೂರ್ಣಗೊಳ್ಳಲಿವೆ. ಅದರಲ್ಲೂ ಮನೆಯಲ್ಲಿ ಆಗಬೇಕಿದ್ದ ಸಣ್ಣ- ಪುಟ್ಟ ಸಿವಿಲ್ ಕೆಲಸಗಳನ್ನು ಮುಗಿಸಲು ನೀವು ಹುಡುಕುತ್ತಿದ್ದಂಥ ಕೆಲಸಗಾರರು ದೊರೆಯಲಿದ್ದಾರೆ. ಸುಲಭಕ್ಕೆ ಆಗಲಾರದು ಎಂದು ಭಾವಿಸಿದ್ದ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಸುಲಭವಾಗಿ ಮುಗಿಯುವುದಕ್ಕೆ ಪ್ರಭಾವಿಗಳು ನಿಮ್ಮ ಪರವಾಗಿ ನಿಲ್ಲಲಿದ್ದಾರೆ. ನಿಮ್ಮಲ್ಲಿ ಯಾರು ಆರ್ಟಿಕಲ್ ಆಗಿದ್ದಾರೆ ಹಾಗೂ ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ, ಅಂಥವರಿಗೆ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಆಗುವಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಸಂಗಾತಿಯ ಆರೋಗ್ಯ ಸ್ವಲ್ಪ ಮಟ್ಟಿಗೆ ಏರುಪೇರು ಆಗಬಹುದು. ಆದರೆ ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯೋಪಚಾರ ದೊರೆತಿದೆ ನಿಮ್ಮ ಆತಂಕ ದೂರ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಇಡೀ ದಿನ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡೇ ಇರುವ ಪರಿಸ್ಥಿತಿ ಇರುತ್ತದೆ. ನಿಮಗೆ ಅನುಕೂಲಕರವಾದ ವಾತಾವರಣ ಇಲ್ಲದ ಕಡೆ ಫಲಿತಾಂಶ ತರಲೇಬೇಕು ಎಂಬ ಒತ್ತಡ ನಿಮ್ಮ ಮೇಲೆ ಇರಲಿದೆ. ಅಶಕ್ತರು, ದುರ್ಬಲರಿಗೆ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ನಿಮ್ಮಲ್ಲಿ ಕೆಲವು ಹಣದ ಸಂಗ್ರಹಕ್ಕೆ ಸಹ ಮುಂದಾಗುವ ಸಾಧ್ಯತೆಯಿದೆ. ನಿಮ್ಮಲ್ಲಿ ಕೆಲವರು ಟೂ ವ್ಹೀಲರ್ ನಲ್ಲಿ ಲಾಂಗ್ ಡ್ರೈವ್ ಗೆ ತೆರಳುವ ಯೋಗ ಇದೆ. ಸಹೋದ್ಯೋಗಿಗಳು ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ನಿಮ್ಮ ಸಹಾಯ ಕೇಳಿಕೊಂಡು ಬರಲಿದ್ದಾರೆ. ಹಣಕಾಸು ವಿಚಾರಕ್ಕೆ ನಿಮ್ಮಲ್ಲಿ ಕೆಲವರಿಗೆ ಆಪ್ತರ ಜೊತೆಗೆ ಅಭಿಪ್ರಾಯ ಭೇದಗಳು ಸೃಷ್ಟಿ ಆಗಲಿವೆ. ನಿಮ್ಮ ವಿಚಾರವನ್ನು ಮಂಡಿಸಲು ಎದುರಿಗೆ ಇರುವವರು ಏನು ಹೇಳುತ್ತಾರೆಂದು ಸಂಪೂರ್ಣವಾಗಿ ಕೇಳಿಸಿಕೊಂಡ ನಂತರ ಮಾತನಾಡುವುದು ಒಳ್ಳೆಯದು.
ಲೇಖನ- ಎನ್.ಕೆ.ಸ್ವಾತಿ