‘ರಕ್ಕಸಪುರದೋಳ್’ನಲ್ಲಿ ಆಕ್ರೋಶಿತ ಪೊಲೀಸ್‌: ರಾಜ್‌ ಬಿ ಶೆಟ್ಟಿ ಬೆಂಕಿ ಲುಕ್‌ ರಿವೀಲ್

‘ರಕ್ಕಸಪುರದೋಳ್’ನಲ್ಲಿ ಆಕ್ರೋಶಿತ ಪೊಲೀಸ್‌: ರಾಜ್‌ ಬಿ ಶೆಟ್ಟಿ ಬೆಂಕಿ ಲುಕ್‌ ರಿವೀಲ್

‘ರಕ್ಕಸಪುರದೋಳ್‌’ ಸಿನಿಮಾದ ಲುಕ್‌ ಬಿಡುಗಡೆಯಾಗಿದೆ. ಹೊತ್ತಿ ಉರಿಯುವ ಬೆಂಕಿಯಲ್ಲಿ ಕ್ರೋಧ ಭರಿತ ಲುಕ್‌ನಲ್ಲಿ ರಾಜ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ರಾಜ್‌ ಬಿ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಅವರ ನಟನೆಯ ‘ರಕ್ಕಸಪುರದೋಳ್‌’ ಸಿನಿಮಾದ ಲುಕ್‌ ಬಿಡುಗಡೆಯಾಗಿದೆ. ಹೊತ್ತಿ ಉರಿಯುವ ಬೆಂಕಿಯಲ್ಲಿ ಕ್ರೋಧ ಭರಿತ ಲುಕ್‌ನಲ್ಲಿ ರಾಜ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

‘ಬೀದಿ ಬೀದಿಗಳಲ್ಲಿ ಭಯ ಕಾರ್ಯಭಾರ ಮಾಡುವಾಗ ಅವನು ರೋಷದಲ್ಲಿ ಮುನ್ನುಗ್ಗುತ್ತಾನೆ’ ಎಂಬ ಟ್ಯಾಗ್‌ಲೈನ್‌ ಅನ್ನೂ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ರಾಜ್‌ ಶೆಟ್ಟಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರವಿ ಸಾರಂಗ ನಿರ್ದೇಶನದ ಈ ಸಿನಿಮಾವನ್ನು ಸಾಹಸ ನಿರ್ದೇಶಕ ಡಾ ರವಿವರ್ಮ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾತಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ ನಾಯಕಿಯರು. ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನವಿದೆ.

ರಕ್ಕಸಪುರದೋಳ್ ಚಿತ್ರದ ಕಥೆ ಬಹಳ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ರೆಡಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಇದರಲ್ಲಿದೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.

ನಿರ್ದೇಶಕ ರವಿ ಸಾರಂಗ ಮಾತನಾಡಿ, ಕಳೆದ 10 ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ ಎಂದರು.

Source link

Leave a Reply

Your email address will not be published. Required fields are marked *