Headlines

Bigg Boss ಶೋನ ಅರ್ಧ ಜರ್ನಿ ಮುಗೀತು, ಈ ವಾರ ಮನೆಯಿಂದ ಹೊರಗಡೆ ಬರೋ ಘಟಾನುಘಟಿ ಯಾರು? | Bigg Boss Kannada Season 12 Show 7th Week Elimination Who Is Out

Bigg Boss ಶೋನ ಅರ್ಧ ಜರ್ನಿ ಮುಗೀತು, ಈ ವಾರ ಮನೆಯಿಂದ ಹೊರಗಡೆ ಬರೋ ಘಟಾನುಘಟಿ ಯಾರು? | Bigg Boss Kannada Season 12 Show 7th Week Elimination Who Is Out


15

 ಕಿಚ್ಚನ ಪಂಚಾಯಿತಿ ನಡೆದಿದೆ

Image Credit : colors kannada facebook

ಕಿಚ್ಚನ ಪಂಚಾಯಿತಿ ನಡೆದಿದೆ

ಅಂದಹಾಗೆ ಈ ವಾರ ಶುಕ್ರವಾರವೇ ಕಿಚ್ಚ ಸುದೀಪ್‌ ಅವರ ಕಿಚ್ಚನ ಪಂಚಾಯಿತಿ ಶೂಟಿಂಗ್‌ ನಡೆದಿದೆ. ಶನಿವಾರ ಬೆಳ್ಳಂಬೆಳಗ್ಗೆ ಎಪಿಸೋಡ್‌ ಪ್ರೋಮೋ ಔಟ್‌ ಆಗಿದೆ. ಅಶ್ವಿನಿ ಗೌಡ ಅವರ ವುಮೆನ್‌ ಕಾರ್ಡ್‌ ಡ್ರಾಮಾಕ್ಕೆ ಸುದೀಪ್‌ ಬೆಂಡೆತ್ತಿದ್ದಾರೆ.

25

ನಾಮಿನೇಟ್‌ ಆದವರು ಯಾರು?

Image Credit : colors kannada facebook

ನಾಮಿನೇಟ್‌ ಆದವರು ಯಾರು?

ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ, ಅಭಿಷೇಕ್‌ ಶ್ರೀಕಾಂತ್‌ ಅವರು ಈ ವಾರ ನಾಮಿನೇಟ್‌ ಆಗಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಗಡೆ ಹೋಗೋದು ಪಕ್ಕಾ.

35

ಎಲಿಮಿನೇಶನ್‌ನಲ್ಲಿ ಚಮಕ್‌ ಕೊಟ್ರು

Image Credit : colors kannada facebook

ಎಲಿಮಿನೇಶನ್‌ನಲ್ಲಿ ಚಮಕ್‌ ಕೊಟ್ರು

ಒಮ್ಮೊಮ್ಮೆ ಎಲಿಮಿನೇಶನ್‌ ಎಂದು ಬಿಗ್‌ ಬಾಸ್‌ ಚಮಕ್‌ ಕೊಡ್ತಾರೆ. ಇನ್ನೊಮೆ ಡಬಲ್‌ ಎಲಿಮಿನೇಶನ್‌ ಕೂಡ ಆಗುವುದು. ಇನ್ನೊಮ್ಮೆ ಮಿಡ್‌ ವೀಕ್‌ ಎಲಿಮಿನೇಶನ್‌ ಕೂಡ ಇರುವುದು. ರಾತ್ರಿ ಮಲಗಿದ್ದವರನ್ನು ಎಬ್ಬಿಸಿ ಮನೆಗೆ ಕಳಿಸಿದ್ದೂ ಇದೆ. ಈ ವಾರ ಎಲಿಮಿನೇಶನ್‌ ಅಂತೂ ಆಗಿದೆ ಎನ್ನಲಾಗುತ್ತಿದೆ.

45

14 ಸದಸ್ಯರಿದ್ದಾರೆ

Image Credit : colors kannada facebook

14 ಸದಸ್ಯರಿದ್ದಾರೆ

ಇನ್ನು 55 ದಿನಗಳು ಉಳಿದಿವೆ. ಈಗ ಇರುವ 14 ಸದಸ್ಯರಲ್ಲಿ ಫಿನಾಲೆಯಲ್ಲಿ ಐವರು ಇರುತ್ತಾರೆ. ಹೀಗಾಗಿ ಎಲಿಮಿನೇಶನ್‌ ಆಗಲೇಬೇಕಿದೆ. ಸದ್ಯ ಘಟಾನುಘಟಿಗಳೇ ಬಿಗ್‌ ಬಾಸ್‌ ಮನೆಯಲ್ಲಿದ್ದಾರೆ. ಹೀಗಾಗಿ ಯಾರು ಔಟ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ.

55

ಯಾರು ಎಲಿಮಿನೇಟ್‌ ಆಗ್ತಾರೆ?

Image Credit : colors kannada facebook

ಯಾರು ಎಲಿಮಿನೇಟ್‌ ಆಗ್ತಾರೆ?

ಅಭಿಷೇಕ್‌ ಶ್ರೀಕಾಂತ್‌ ಕ್ಯಾಪ್ಟನ್‌ ಆಗಿರೋದಿಕ್ಕೆ ಅವರು ಎಲಿಮಿನೇಶನ್‌ನಿಂದ ಪಾರಾಗಿದ್ದಾರೆ. ಸದ್ಯಕ್ಕಂತೂ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌, ರಾಶಿಕಾ ಶೆಟ್ಟಿ ಅವರು ಹೊರಗಡೆ ಬರೋದಿಲ್ಲ. ಹಾಗಾದರೆ ಉಳಿದವರಲ್ಲಿ ಒಬ್ಬರು ಎಲಿಮಿನೇಟ್‌ ಆಗ್ತಾರೆ. ಜನರಿಗೆ ಯಾರು ಇಷ್ಟ ಆಗೋದಿಲ್ಲವೋ ಅವರು ಹೊರಬರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *