ನಂದಮೂರಿ ಬಾಲಕೃಷ್ಣ ಅವರು ಆ್ಯಕ್ಷನ್ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಮೊದಲು ತೆರೆಗೆ ಬಂದ ‘ಅಖಂಡ’ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅವರು ‘ಅಖಂಡ 2’ ಸಿನಿಮಾ ಮಾಡಿದ್ದಾರೆ. ಡಿಸೆಂಬರ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ಲಾಂಚ್ ಈ ವೆಂಟ್ ನವೆಂಬರ್ 21 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಬಾಲಯ್ಯ ಅವರು ವೇದಿಕೆಯ ಮೇಲೆ ಒಂದು ಅಚ್ಚರಿಯ ವಿಷಯ ಹೇಳಿದ್ದಾರೆ.
ಶಿವಣ್ಣ ಹಾಗೂ ಬಾಲಯ್ಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣದಿಂದಲೇ ಈವೆಂಟ್ಗೆ ಅತಿಥಿಯಾಗಿ ತೆರಳಲು ಶಿವಣ್ಣ ಒಪ್ಪಿಕೊಂಡರು. ವೇದಿಕೆಯ ಮೇಲೆ ಇಬ್ಬರೂ ತಮ್ಮ ನಡುವೆ ಎಂತಹ ಆತ್ಮೀಯತೆ ಇದೆ ಎಂದು ತೋರಿಸಿದರು. ಶಿವರಾಜ್ ಕುಮಾರ್ ಅವರ ಎದುರು ಬಾಲಯ್ಯ ಒಂದು ವಿಶೇಷ ಮಾಹಿತಿ ತೆರೆದಿಟ್ಟರು.
2023ರಲ್ಲಿ ಬಂದ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ಬಾಲಯ್ಯ ಲುಂಗಿ ಉಟ್ಟು, ಕಪ್ಪು ಶರ್ಟ್ ಹಾಕಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದವರಿಗೆ ಶಿವರಾಜ್ ಕುಮಾರ್ ಅವರ ‘ಮಫ್ತಿ’ ಸಿನಿಮಾ ನೆನಪಾಗಿದೆ. ಇದು ಮಫ್ತಿ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ ಎಂದು ಬಾಲಯ್ಯ ಕೂಡ ಒಪ್ಪಿಕೊಂಡರು.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಾಲಯ್ಯ ಮಗಳು ತೇಜಸ್ವಿನಿ
‘ವೀರ ಸಿಂಹ ರೆಡ್ಡಿ ಸಿನಿಮಾ ಮಫ್ತಿ ಸಿನಿಮಾದ ಗೆಟಪ್ ನ ಕಾಪಿ ಮಾಡಿದ್ದೇನೆ. ಕಲಾವಿದರನ್ನು ನೋಡಿದಾಗ ನಾವು ಸ್ಫೂರ್ತಿ ಪಡೆಯುತ್ತೇವೆ’ ಎಂದು ಬಾಲಯ್ಯ ಒಪ್ಪಿಕೊಂಡರು. ಆ ಬಳಿಕ ಶಿವರಾಜ್ ಕುಮಾರ್ ಅವರು ಕನ್ನಡದ ಒಂದಷ್ಟು ಡೈಲಾಗ್ ಹೇಳಿದರು. ನಂತರ ಬಾಲಯ್ಯ ಅವರು ತಮ್ಮ ಸ್ಟೈಲ್ ನಲ್ಲಿ ಡೈಲಾಗ್ ಬಿಟ್ಟರು. ಇದು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.