“ಮುಂದಿನ ಡಿಸೆಂಬರ್ 26 ರ ನಂತರ ಜನವರಿ 14 ನೇ ತಾರೀಕಿನ ನಡುವೆ ಇಡೀ ಜಗತ್ತಿಗೆ ನಾನಾ ರೀತಿಯ ಸಂಕಷ್ಟಗಳು ಎದುರಾಗಲಿವೆ. ಮುಖ್ಯವಾಗಿ ಅಮಾಯಕರ ಸಾವು-ನೋವು ಸಂಭವಿಸುತ್ತದೆ. ಇದಕ್ಕೆ ವೈಯಕ್ತಿಕ ನೆಲೆಯಲ್ಲಿ ಮುಂಜಾಗ್ರತೆ ವಹಿಸುವುದೇ ವಿನಾ ಬೇರೆ ರೀತಿಯಲ್ಲಿ ತಪ್ಪಿಸಿಕೊಳ್ಳುವುದು ಅಸಾಧ್ಯ” ಎಂದು ನಿಶ್ಚಿತವಾದ ಧ್ವನಿಯಲ್ಲಿ ಹೇಳಿದರು ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ (ಪ್ರಕಾಶ್ ಅಮ್ಮಣ್ಣಾಯ) ಅವರು ಹೀಗೆ ಭವಿಷ್ಯ ನುಡಿಯಲು ಕಾರಣ ಏನೆಂದು ತಿಳಿಯುವುದು ನಮ್ಮ ಪ್ರಶ್ನೆಯಾಗಿತ್ತು. ಯಾವ ಗ್ರಹಗತಿಯಿಂದ ಹೀಗಾಗಲಿದೆ ಮತ್ತು ಏನು ಅನಾಹುತಗಳು ಸಂಭವಿಸುತ್ತವೆ, ಏನು ಮುಂಜಾಗ್ರತೆ ಮಾಡಬಹುದು – ಹೀಗೆ ಹಲವು ಪ್ರಶ್ನೆಗಳನ್ನು ಅವರ ಮುಂದೆ ಇಟ್ಟ ಮೇಲೆ ಅಮ್ಮಣ್ಣಾಯ ಅವರು ಹೇಳಿದ್ದು ಹೀಗೆ:
“ಡಿಸೆಂಬರ್ ಇಪ್ಪತ್ತಾರನೇ ತಾರೀಕಿನಂದು ಧನುಸ್ಸು ರಾಶಿಯಲ್ಲಿ ಕುಜ-ಶುಕ್ರ ಇದ್ದು, ಅದನ್ನು ಭೃಗು-ಅಂಗಾರಕ ಯೋಗ ಎನ್ನುವುದಿಲ್ಲ. ಅಲ್ಲಿಂದ ಈ ಮೂರು ದಿನಕ್ಕೆ ಬುಧ ಗ್ರಹ ಕೂಡ ಅದೇ ರಾಶಿಗೆ ಬರುತ್ತದೆ. ಆದರೆ ಅದಕ್ಕಿಂತ ಬಹಳ ಮುಂಚೆಯೇ ರವಿ ಗ್ರಹ ಧನುಸ್ಸು ರಾಶಿಯಲ್ಲಿದೆ. ಅಲ್ಲಿಂದ ನಾಲ್ಕನೇ ಕಾಲು ಭಾಗದ ದೃಷ್ಟಿ ಮೀನ ರಾಶಿಯಲ್ಲಿ ಇರುವಂಥ ಶನಿ ಗ್ರಹದ ದರ್ಶನವಾಗುತ್ತದೆ. ಸ್ಥಿತಿಗೆ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಗುರು ಗ್ರಹದ ಪೂರ್ಣ ವೀಕ್ಷಣೆ ಆಗುತ್ತದೆ.
“ಧನುಸ್ಸು ರಾಶಿಯಲ್ಲಿ ಇರುವಂತಹ ಕುಜ ಗ್ರಹದ ಪೂರ್ಣ ನಾಲ್ಕನೆಯ ದೃಷ್ಟಿಯು ಶನಿಯ ಮೇಲೆ ಇರುತ್ತದೆ.
“ಜಾಗತಿಕ ಮಟ್ಟದ ಪ್ರಮುಖ ನಾಯಕರೊಬ್ಬರ ಹತ್ಯೆ ಸಹ ಆಗಬಹುದು. ಭಯೋತ್ಪಾದಕರಿಂದ ತೀಕ್ಷ್ಣ- ತೀವ್ರ ದಾಳಿಗಳಲ್ಲಿ ಅಮಾಯಕರ ಸಾವು- ನೋವು ಆಗಲಿದೆ. ಈ ಅವಧಿಯಲ್ಲಿ ಹೊಸ ವರ್ಷಾಚರಣೆಯಿಂದ ನೋವು ಸಂಭವಿಸಿದರೆ ಭಾರೀ ಸಾವು-ನೋವುಗಳು ಸಂಭವಿಸುತ್ತವೆ.
ಇದನ್ನೂ ಓದಿ: ಕುಜ-ಶುಕ್ರ ಸಂಯೋಗದಿಂದ ಈ ರಾಶಿಯ ಪ್ರೇಮ ಸಂಬಂಧದಲ್ಲಿ ಪ್ರಮುಖ ಬದಲಾವಣೆ
“ಭಾರೀ ಭೂಕಂಪಗಳು, ಸುನಾಮಿ, ಚಂಡಮಾರುತ ಇಂತಹ ವೈಪರೀತ್ಯಗಳಿಂದಲೂ ಭಾರೀ ಸಾವು- ನೋವು ಸಂಭವಿಸಬಹುದು. ಕಳೆದುಕೊಳ್ಳುವಂತೆ ಆಗಲಿದೆ.
“ಜನವರಿ ಹದಿನಾಲ್ಕನೇ ತಾರೀಕಿನಂದು ರವಿ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಅದು ಬಿಡುಗಡೆಯಾಗುತ್ತದೆ. ಆದರೆ ಬೆಂಕಿ ಅವಘಡ, ವಿದ್ಯುತ್ ಅವಘಡ, ಭಾರೀ ಪ್ರಮಾಣದ ಭೂಕಂಪನ ಇವುಗಳನ್ನು ಕೇಳಿ ಜನ ಗಾಬರಿ ಬೀಳುವಷ್ಟು ವಿಕೋಪಕ್ಕೆ ಹೋಗುತ್ತಾರೆ. ಅನಾಹುತಗಳು ನಡೆಯುತ್ತವೆ.
“ಜಾಗತಿಕ ಮಟ್ಟದಲ್ಲಿ ತುಂಬ ಶಕ್ತಿಶಾಲಿ ನಾಯಕ ಹಾಗೂ ಪ್ರಭಾವಶಾಲಿ ಎಂದು ಚಲಾವಣೆಯಲ್ಲಿರುವ ನಾಯಕರಿಗೆ ಜೀವಕ್ಕೆ ತೊಂದರೆ ಆಗಬಹುದು. ಹತ್ಯಾ ಯತ್ನಗಳಂತೂ ತಳ್ಳಿ ಹಾಕುವಂತೆ ಇಲ್ಲ. ಹಲವಾರು ಕಡೆಗಳಲ್ಲಿ ಗುಪ್ತಚರ ವೈಫಲ್ಯಗಳು ಭಾರೀ ಅನಾಹುತಗಳಿಗೆ ದಾರಿ ಮಾಡಿಕೊಡುತ್ತವೆ. ಆತಂಕಗಳು ಸೃಷ್ಟಿಸುತ್ತವೆ.
“ಈ ವಿಚಾರಗಳನ್ನು ಅಧ್ಯಯನ ಮತ್ತು ಅನುಭವದ ಆಧಾರದಲ್ಲಿ ತಿಳಿಸಲಾಗಿದೆ. ಮೀನ ರಾಶಿಯಲ್ಲಿ ಇರುವ ಶನಿ ಗ್ರಹಕ್ಕೆ ರವಿಯು ಬಲ ತುಂಬುವುದರಿಂದ ಅದು ಭೀಕರವಾದ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವ ಪ್ರದೇಶಗಳಿಗೆ, ಕಾರ್ಯಕ್ರಮಗಳಿಗೆ ಹೋಗುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಒಳ್ಳೆಯದು.”
ಲೇಖನ- ಪ್ರಕಾಶ್ ಅಮ್ಮಣ್ಣಾಯ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ