ಮಂಡ್ಯ, ನವೆಂಬರ್ 23: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಫೈಟ್ ವಿಚಾರ ಸಂಬಂಧ ಬಿಜೆಪಿಅವರು ಗಿಳಿ ಶಾಸ್ತ್ರ ಕೇಳಲಿ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಎಂದು ಬಿಜೆಪಿಗರು ಗಿಳಿ ಶಾಸ್ತ್ರ ಕೇಳಿದ್ದು,ಈ ವೇಳೆ ಗಿಳಿ ಚಂಬು ಇರುವ ಕಾರ್ಡ್ ತೆಗೆದಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚಂಬು ಎಂದು ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಮುಂದುವರೆದ ಸಿಎಂ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದ್ದು, ಈ ವೇಳೆ ಗಿಳಿ ಹೂ ಇರುವ ಕಾರ್ಡ್ ತೆಗೆದಿದೆ. ಹೀಗಾಗಿ ಬಿಜೆಪಿಗರು ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಎಂದು ವಿಡಂಬನೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.