ಅಜ್ಜಿ ಮೊಮ್ಮಗಳ ಬಾಂಧವ್ಯಚಿತ್ರ ಕ್ರೆಡಿಟ್ ಮೂಲ: Instagram
ಪುಟಾಣಿ (ಚಿಕ್ಕ ಮಕ್ಕಳು) ಏನೇ ಮಾಡಿದ್ರು ನೋಡೋದಕ್ಕೆ ಚಂದ. ತನ್ನೊಂದಿಗೆ ಯಾರು ಆತ್ಮೀಯರಾಗಿರುತ್ತಾರೋ, ಪ್ರೀತಿ ತೋರುತ್ತಾರೋ ಅವರನ್ನು ಅತಿಯಾಗಿ ಹಚ್ಚಿಕೊಂಡು ಬಿಡುತ್ತಾರೆ. ಇನ್ನು ಅಜ್ಜಿಯಂದಿರೆಂದರೆ ಮೊಮ್ಮಕ್ಕಳಿಗೆ ಇಷ್ಟ. ಈ ಹಿರಿಜೀವಗಳ ಜೊತೆಗೆ ಮೊಮಕ್ಕಳ ಬಾಂಧವ್ಯ ಸಾರುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಇದು ಎರಡು ಮುಗ್ಧ ಮನಸ್ಸುಗಳ ಶುದ್ಧ ಪ್ರೀತಿಯ ಪ್ರತೀಕವಾಗಿದೆ. ಅಜ್ಜಿಯೊಬ್ಬರು (ಅಜ್ಜಿ) ಮೊಮ್ಮಗಳ ಕೈ ತುತ್ತಿನ ರುಚಿಯನ್ನು ಸವಿದು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಾಂಧವ್ಯ ಹೀಗೆ ಇರಲಿ.
shivdhanush143 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ಪ್ರೀತಿಯ ಅಜ್ಜಿಗೆ ಕೈ ತುತ್ತು ನೀಡುವ ಹೃದಯ ಸ್ಪರ್ಶಿ ದೃಶ್ಯವನ್ನು ನೋಡಬಹುದು. ಎರಡು ಶುದ್ಧ ಮನಸ್ಸು ನಿಷ್ಕಲ್ಮಶ ಪ್ರೀತಿಯನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ ಪೂರ್ವ ಜನ್ಮದ ಪುಣ್ಯವಿರಬೇಕು. ಇತರರು, ಇದು ನಮ್ಮ ಸಂಸ್ಕೃತಿ ಎಂದು ಮೆಚ್ಚಿದ್ದಾರೆ. ಮತ್ತೊಬ್ಬ ಬಳಕೆದಾರ, ಅಜ್ಜಿ ಮೊಮ್ಮಗಳು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ