ಬಿಗ್ ಬಾಸ್ ಮನೆ ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರು ಬಣ್ಣ ಬದಲಾಯಿಸುತ್ತಾರೆ. ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರ ಎದುರಿನಲ್ಲಿ ವಿನಯದಿಂದ ಮಾತನಾಡುವ ಅಶ್ವಿನಿ ಗೌಡ, ವಾರದ ದಿನಗಳಲ್ಲಿ ಬೇರೆ ರೀತಿ ಇರುತ್ತಾರೆ. ವಾರಾಂತ್ಯದಲ್ಲಿ ಕ್ಷಮೆ ಕೇಳುವ ಅವರು ಸೋಮವಾರದಿಂದ ಶುಕ್ರವಾರದವರೆಗೆ ಮತ್ತೆ ತಪ್ಪು ಮಾಡುತ್ತಾರೆ. ಇದು ಹಲವು ಬಾರಿ ಮರುಕಳಿಸಿದೆ. ಈ ವಿಷಯವನ್ನು ನವೆಂಬರ್ 23 ರ ಸಂಚಿಕೆಯಲ್ಲಿ ಸುದೀಪ್ ಅವರು ಪ್ರಸ್ತಾಪಿಸಿದ್ದಾರೆ. ಅಶ್ವಿನಿ ಗೌಡ ಅವರು ಹೇಗೆಲ್ಲ ಬಣ್ಣವನ್ನು ಬದಲಾಯಿಸುತ್ತಾರೆ ಗಿಲ್ಲಿ ನಟ (ಗಿಲ್ಲಿ ನಟ) ಅಭಿನಯಿಸಿ ತೋರಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಅಶ್ವಿನಿ ಗೌಡ ಅವರು ವುಮನ್ ಕಾರ್ಡ್ ಬಳಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಸುದೀಪ್ ಅವರಿಗೆ ಅವಕಾಶ ನೀಡಿಲ್ಲ. ‘ನೀವು ಬೇರೆಯವರಿಂದ ಗೌರವ ನಿರೀಕ್ಷಿಸಿದರೆ ಮೊದಲು ನಿಮಗೆ ಬೇರೆಯವರಿಗೆ ಗೌರವ ಕೊಡಬೇಕು’ ಎಂಬ ಪಾಠವನ್ನು ಸುದೀಪ್ ಹೇಳಿದ್ದಾರೆ. ಇನ್ನಾದರೂ ಅಶ್ವಿನಿ ಗೌಡ ಬದಲಾಗುತ್ತಾರೋ ಇಲ್ಲವೋ ಎಂದು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.