Headlines

BBK 12: ಕೊನೆಗೂ ಅಶ್ವಿನಿ ಗೌಡ ನಡೆದು ಬಂದ ಹಾದಿ ಹಿಡಿದ ಗಿಲ್ಲಿ ನಟ; ಎಲ್ಲರಿಗೂ ಶಾಕ್ | Bigg Boss Kannada Season 12 Gilli Nata Did Ashwini Gowda Mimicri

BBK 12: ಕೊನೆಗೂ ಅಶ್ವಿನಿ ಗೌಡ ನಡೆದು ಬಂದ ಹಾದಿ ಹಿಡಿದ ಗಿಲ್ಲಿ ನಟ; ಎಲ್ಲರಿಗೂ ಶಾಕ್ | Bigg Boss Kannada Season 12 Gilli Nata Did Ashwini Gowda Mimicri


15

ವೀಕೆಂಡ್‌ನಲ್ಲಿ ಅಣ್ಣಾ.. ಅಣ್ಣಾ..

Image Credit : colors kannada

ವೀಕೆಂಡ್‌ನಲ್ಲಿ ಅಣ್ಣಾ.. ಅಣ್ಣಾ..

ವೀಕ್‌ ಡೇಗಳಲ್ಲಿ ಎಲ್ಲರ ಜೊತೆ ಜಗಳ ಆಡಿ, ಗೌರವ, ಪ್ರತಿಷ್ಠೆ, ಪ್ರೌಢಿಮೆ, ಘನತೆ, ಅನುಭವ, ವಯಸ್ಸು ಎಂದು ಮಾತನಾಡುತ್ತ, ಜಗಳ ಆಡುವ ಅಶ್ವಿನಿ ಗೌಡ ಅವರು ವೀಕೆಂಡ್‌ನಲ್ಲಿ ಅಣ್ಣಾ ಅಣ್ಣಾ ಎಂದು ಸಮಾಧಾನದಿಂದ, ಸಾವಧಾನವಾಗಿ ಮಾತನಾಡುತ್ತಾರೆ.

25

ಅಶ್ವಿನಿ ಗೌಡ ಮಿಮಿಕ್ರಿ

Image Credit : colors kannada

ಅಶ್ವಿನಿ ಗೌಡ ಮಿಮಿಕ್ರಿ

ಅಶ್ವಿನಿ ಗೌಡ ಅವರು ವೀಕ್‌ ಡೇನಲ್ಲಿ, ವೀಕೆಂಡ್‌ ಎಪಿಸೋಡ್‌ನಲ್ಲಿ ಹೇಗೆ ಇರುತ್ತಾರೆ ಎಂದು ಮಿಮಿಕ್ರಿ ಮಾಡಿ ತೋರಿಸಿ ಎಂದು ಕಿಚ್ಚ ಸುದೀಪ್‌ ಅವರು ಗಿಲ್ಲಿ ನಟನಿಗೆ ಹೇಳಿದ್ದರು. ಅದನ್ನು ಅವರು ಮಾಡಿ ತೋರಿಸಿದ್ದು, ಅಶ್ವಿನಿ ಗೌಡ ಅವರೇ ನಕ್ಕಿದ್ದಾರೆ.

35

ಎಲ್ಲಿ ಎಡವಿದ್ದೀನಿ ಎಂದು ಗೊತ್ತಾಗ್ತಿಲ್ಲ

Image Credit : colors kannada

ಎಲ್ಲಿ ಎಡವಿದ್ದೀನಿ ಎಂದು ಗೊತ್ತಾಗ್ತಿಲ್ಲ

ಕಿಚ್ಚ ಸುದೀಪ್‌ ಅವರು ವೀಕೆಂಡ್‌ ಎಪಿಸೋಡ್‌ ಎಂದಾಗ “ಅಣ್ಣ, ನಾನು ಹೇಳೋದು ಏನೆಂದರೆ ಸುಸಂಸ್ಕೃತವಾಗಿ, ಸುಲಲಿತವಾಗಿ, ಸುಲೋಚನೆಯಿಂದ ಯೋಚನೆ ಮಾಡಿದಾಗ ನಾನು ಕರೆಕ್ಟ್‌ ಆಗಿ ಮಾತನಾಡಿದ್ದೀನಿ, ಎಲ್ಲಿ ಎಡವಿದ್ದೀನಿ ಎಂದು ಗೊತ್ತಾಗ್ತಿಲ್ಲ. ತಪ್ಪು ಸಹಜ, ತಪ್ಪು ತಿದ್ದಿಕೊಂಡು ಮುಂದೆ ಹೋಗೋದು ದೊಡ್ಡದು” ಎಂದು ಗಿಲ್ಲಿ ನಟ ಹೇಳಿದ್ದಾರೆ.

45

ರಘು ನೀ ಯಾವನೋ

Image Credit : colors kannada

ರಘು ನೀ ಯಾವನೋ

ಕಿಚ್ಚ ಸುದೀಪ್‌ ಅವರು ವೀಕ್‌ ಡೇ ಎಂದಾಗ ಗಿಲ್ಲಿ ನಟ ಅವರು, “ರಘು ನೀ ಯಾವನೋ, ಲೇ ನೀ ಯಾವನೋ, ನೀ ನನಗಿಂತ ಮೇಲಾ? ಹೋಗೋಲೋ” ಎಂದು ಮಿಮಿಕ್ರಿ ಮಾಡಿದ್ದಾರೆ.

55

ಆ ಶೋನಲ್ಲಿರೋರು ಸೋತವರು.

Image Credit : colors kannada

ಆ ಶೋನಲ್ಲಿರೋರು ಸೋತವರು.

ಬಿಗ್‌ ಬಾಸ್‌ ಶೋ ಮುಗಿದ ಬಳಿಕ ಅಶ್ವಿನಿ ಗೌಡ ಅವರು ಹೇಗೆ ಮಾತಾಡ್ತಾರೆ ಎಂದು ಕೂಡ ಗಿಲ್ಲಿ ನಟ ತೋರಿಸಿದ್ದಾರೆ. “ಆ ಶೋನಲ್ಲಿರೋರು ಸೋತವರು. ಆ ಶೋ ನನಗೆ ಅಲ್ಲ, ಆ ಶೋ ನನಗೆ ಫಿಟ್‌ ಅಲ್ಲ” ಎಂದು ಗಿಲ್ಲಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *