ತುಮಕೂರು, ನವೆಂಬರ್ 23: ತುಮಕೂರಿಗೆ ಮೆಟ್ರೋ ಕಾರ್ಯಯೋಜನೆ ರೂಪುಗೊಂಡ ಬೆನ್ನಲ್ಲೇ ವಿಮಾನ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ವಸಂತ ನರಸಾಪುರ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಒತ್ತಾಯಿಸಿ ಸಿಎಂ ಮತ್ತು ಕೇಂದ್ರ ಸಚಿವರಿಗೆ ಮಾಜಿ ಸಂಸದ ಬಸವರಾಜು ಪತ್ರ ಬರೆದಿದ್ದಾರೆ. ಕನಕಪುರ-ನೆಲಮಂಗಲ ಬಳಿ ವಿಮಾನ ನಿಲ್ದಾಣಕ್ಕೆ ಭೂಮಿಯಿಲ್ಲ. ನೆಲಮಂಗಲ-ಕುಣಿಗಲ್ ರಸ್ತೆಯ ಪ್ರಸ್ತಾವನೆ ಕೈಬಿಡಲಾಗಿದೆ. ಆದರೆ, ತುಮಕೂರಿನ ವಸಂತನರಸಾಪುರದ ಬಳಿ 3,500 ಜಮೀನು ಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ-48 ಸಮೀಪವೇ ಖಾಲಿ ಜಮೀನಿದ್ದು, ತುಮಕೂರು ಬಳಿ ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಗಳ 21 ಜನರಿಗೆ ಅನುಕೂಲವಾಗಿದೆ. ತುಮಕೂರಿಗೆ ಮೆಟ್ರೋ ತರಲು ಉದ್ದೇಶಿಸಲಾಗಿತ್ತು, ಈ ಹಿನ್ನೆಲೆ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರೆ ಜನರಿಗೆ ಓಡಾಟಕ್ಕೆ ಅನುಕೂಲ ಎಂದು ಪತ್ರದ ಮೂಲಕ ಬಸವರಾಜು ಮನವಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.