Headlines

ಕಾಂಗ್ರೆಸ್​ ನಾಯಕರ ಬಗ್ಗೆ ಛಲವಾದಿ ಬಿಗ್​​ ಬಾಂಬ್​: ಸಿಎಂ ಸ್ಥಾನಕ್ಕಾಗಿ ‘ಕೈ’ ಪಾಳಯದಲ್ಲಿ ಕುದುರೆ ವ್ಯಾಪಾರ?

ಕಾಂಗ್ರೆಸ್​ ನಾಯಕರ ಬಗ್ಗೆ ಛಲವಾದಿ ಬಿಗ್​​ ಬಾಂಬ್​: ಸಿಎಂ ಸ್ಥಾನಕ್ಕಾಗಿ ‘ಕೈ’ ಪಾಳಯದಲ್ಲಿ ಕುದುರೆ ವ್ಯಾಪಾರ?


ಬೆಂಗಳೂರು, ನವೆಂಬರ್ 23: ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಮಂತ್ರಿ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್ ಮಾಡಲಾಗುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೊದಲು 50 ಕೋಟಿ ರೂಪಾಯಿ, ನಂತರ 75 ರಿಂದ 100 ಕೋಟಿ ರೂಪಾಯಿ ನೀಡಿ ಶಾಸಕರನ್ನು ಖರೀದಿಸಲಾಗುತ್ತಿದೆ . ಪಕ್ಷದ ಶಾಸಕರನ್ನು ಖರೀದಿಸುವ ಸ್ಥಿತಿ ಕಾಂಗ್ರೆಸ್‌ನಲ್ಲಿದೆ ಎಂದು ಅವರು ಹೇಳಿದ್ದಾರೆ. ಮಂತ್ರಿ ಸ್ಥಾನ ಬೇಕಾದವರಿಗೆ ಎಸಿಸಿ ನಾಯಕ ಸುರ್ಜೇವಾಲಾ 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಸಹ ಆರೋಪಿಸಿರುವ ಅವರು, ರವೀಂದ್ರ ಪಪ್ಪಿ ಅವರು ಮುಂಗಡ ಹಣ ನೀಡಿ ಬಂಧಿತರಾಗಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ, ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡೋದಾಗಿ ಛಲವಾದಿ ನಾರಾಯಣಸ್ವಾಮಿ ದಿನಾಂಕ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *