ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ

ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ


ಜನವರಿ, ನವೆಂಬರ್ 23: ಕೋವಿಡ್ ಬಂದಾಗ ಅತ್ಯಂತ ದೊಡ್ಡ ಕುಸಿತ ಕಂಡ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಆದರೆ, ಕೋವಿಡ್ ಬಳಿಕ ಅತಿ ವೇಗವಾಗಿ ತಿರುಗಿ ನಿಂತ ಆರ್ಥಿಕತೆ (ಜಿಡಿಪಿ) ಎಂದರೆ ಭಾರತವೇ ಎಂದು ಅನೇಕ ಆರ್ಥಿಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಯ ಆರ್ಥಿಕವಾಗಿ ಜೇಸನ್ ಫರ್ ಅವರು ಪ್ರಮುಖ ಆರ್ಥಿಕ ಬೆಳವಣಿಗೆಯ ಚಿತ್ರಣವನ್ನು ಗ್ರಾಫಿಕ್ಸ್ ರೂಪದಲ್ಲಿ ತೆರೆದಿದ್ದಾರೆ.

ಹಾರ್ವರ್ಡ್ ಪ್ರೊಫೆಸರ್ ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಪ್ರಸ್ತುತಪಡಿಸಿರುವ ಗ್ರೋಟ್ ಚಾರ್ಟ್ ನಿಜವಾಗಿಯೂ ಕುತೂಹಲ ಕೆರಳಿಸುತ್ತದೆ. ಕೋವಿಡ್ ಪೂರ್ವದಿಂದ ಭಾರತ, ರಷ್ಯಾ, ಚೀನಾ, ಯೂರೋಪ್ ಮತ್ತು ಅಮೆರಿಕದ ದೇಶಗಳ ಆರ್ಥಿಕ ಬೆಳವಣಿಗೆ ಹೇಗೆ ಸಾಗಿದೆ ಈ ಗ್ರಾಫಿಕ್ಸ್ ಕಣ್ಣಿಗೆ ಕಟ್ಟುವಂತೆ ವ್ಯಕ್ತಪಡಿಸುತ್ತದೆ.

ಇದನ್ನೂ ಓದಿ: ಅತೀ ಕಡಿಮೆ ರೂಪಾಯಿ ಮೌಲ್ಯ; ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ

ಭಾರತ ಬಿಟ್ಟು ಉಳಿದ ಈ ಪ್ರಮುಖ ಆರ್ಥಿಕತೆಗಳು ಕೋವಿಡ್ ಪೂರ್ವದ ಪ್ರತಿ ದಾಟಲು ತೊಡರಾಡುತ್ತಿವೆ. ಆಧಾರ, ಭಾರತ ಮಾತ್ರ ಅಮೋಘವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಇದು ತೋರಿಸುತ್ತದೆ.

ಜೇಸನ್ ಅವರ ಎಕ್ಸ್ ಪೋಸ್ಟ್

ಕುತೂಹಲ ಎಂದರೆ, ಈ ಐದು ದೊಡ್ಡ ಆರ್ಥಿಕತೆಗಳ ಮೇಲೆ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟವಾದ 2020 ರಲ್ಲಿ ಭಾರತವೇ ಅತಿಹೆಚ್ಚು ಆರ್ಥಿಕ ಕುಸಿತ ಕಂಡಿದೆ. 2022ರ ನಂತರ ಭಾರತವು ಎಲ್ಲರನ್ನೂ ಮೀರಿಸಿ ಬೆಳೆಯುತ್ತಿದೆ. 2024ರಲ್ಲಿ ಕೋವಿಡ್ ಮಟ್ಟಕ್ಕಿಂತ ಶೇ. 3ರಷ್ಟು ಮೇಲೆ ಹೋಗಿದೆ. 2025 ಸೆಪ್ಟೆಂಬರ್ ಮೂರನೇ ಕ್ವಾರ್ಟರ್ ಅಂತ್ಯವಾದ ರಿಯಲ್ ಜಿಡಿಪಿ ದರ ಕೋವಿಡ್ ಮಟ್ಟಕ್ಕಿಂತ ಶೇ. 5ರಷ್ಟು ಹೆಚ್ಚಿತ್ತು.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಜೇಸನ್ ಫರ್ಮನ್ ಅವರು ಭಾರತದ ಮುಂದಿನ ಆರ್ಥಿಕ ಹಾದಿ ಇದೇ ರೀತಿ ಸುಗಮ ಎಂದು ನಿರೀಕ್ಷಿಸಿದ್ದಾರೆ. ಹಲವು ಏಜೆನ್ಸಿಗಳೂ ಕೂಡ ಇದೆ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಮೂಡೀಸ್, ಐಸಿಆರ್‌ಎ ಮೊದಲಾದ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತದ ಜಿಡಿಪಿ ದರ ಶೇ. 7 ದಾಟಬಹುದು ಎಂದು ಅಂದಾಜು ಮಾಡಿವೆ. ಆರ್ಬಿಐ ಮೊದಲಾದ ಸಂಸ್ಥೆಗಳು ಕೂಡ ಶೇ. 7ರ ಆಸುಪಾಸಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *