Headlines

ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ

ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ


ಬೆಂಗಳೂರು, ನವೆಂಬರ್ 23: ನಗರದ ಹೃದಯಭಾಗದಲ್ಲೇ ಮತ್ತೊಂದು ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಬಿಜೆಪಿ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ್ದ ಐ ಲವ್ ಬೆಂಗಳೂರು ಎಂಬ ವಾಟರ್ ಫೌಂಟೆನ್ (ನೀರಿನ ಕಾರಂಜಿ) ಹಾಳಾಗಿದೆ. ಆ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ನಡೆದ ಕಾಮಗಾರಿ ಇದೀಗ ನೀರಿನಲ್ಲಿ ಹೋಮ ಮಾಡಿ.

ಹಾಳಾದ ವಾಟರ್ ಫೌಂಟೆನ್

ಕೆಆರ್ ಸರ್ಕಲ್ ಜಂಕ್ಷನ್ ಬೆಂಗಳೂರು ನಗರದ ಹೃದಯಭಾಗ. ಈ ಜಂಕ್ಷನ್‌ನಲ್ಲಿ ನಿರ್ಮಾಣ ಮಾಡಿದ್ದು ಐ ಲವ್ ಬೆಂಗಳೂರು ಅನ್ನೋ ವಾಟರ್ ಫೌಂಟೆನ್ ಹತ್ತಿರ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೆ ಈಗ ಅದು ಹಾಳಾಗಿದೆ.

ಇದನ್ನೂ ಓದಿ: ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್?

2021ರ ವೇಳೆ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವಧಿಯಲ್ಲಿ ಕೆಆರ್ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಮಾಡಲಾಗಿದೆ. ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ಕೊಟ್ಟು ಕೆಲಸ ಮಾಡಿಸಿದ ಅಂದಿನ ಬಿಬಿಎಂಪಿ ನಂತರ ಆ ಕಂಪನಿ ನಿರ್ವಹಣೆ ಮಾಡುತ್ತಿದೆಯಾ ಇಲ್ಲವಾ ಎನ್ನುವುದನ್ನು ನೋಡುವುದನ್ನೇ ಮರೆತಿದೆ. ಕಾಬೂಲ್ ಶಿಲೆ, ಸರ್ಕಲ್ ವಿನ್ಯಾಸ, ಡಿಸ್ಕೋ ಲೈಟಿಂಗ್ ಹಾಗೂ ಕಾರಂಜಿ ಈಗ ಹಾಳಾಗಿದೆ. ಈ ಬಗ್ಗೆ ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕಾರಂಜಿ, ಲೈಟಿಂಗ್ ಹಾಕಿದ್ದ ವಿದ್ಯುತ್ ಡಿಪಿ ಬಾಕ್ಸ್ ಹಾಳಾಗಿದೆ. ಜೊತೆಗೆ ಬೆಸ್ಕಾಂ ಕೇಂದ್ರ ಕಚೇರಿ ಎದುರೇ ಈ ರೀತಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾರೂ ಗಮನಹರಿಸಿಲ್ಲ. ಒಂದು ವೇಳೆ ಮಳೆ ಬಂದು ವಿದ್ಯುತ್ ತಂತಿ ಯಾರಿಗಾದರೂ ತಾಕಿದರೆ ಯಾರು ಹೊಣೆ. ಇನ್ನಾದರೂ ಬೆಸ್ಕಾಂ ಹಾಗೂ ಜಿಬಿಎ ಎಚ್ಚೆತ್ತುಕೊಳ್ಳಬೇಕಿದೆ ಎಂದು ಗೋಪಾಲಕೃಷ್ಣ ಎನ್ನುವವರು ಹೇಳಿದ್ದಾರೆ.

ಇದನ್ನೂ ಓದಿ: 30 ವರ್ಷದ ಹಿಂದಿನ ಒಂದು ವ್ಯವಹಾರ

ನಮ್ಮ ಜಿಬಿಎ ಅಧಿಕಾರಿಗಳು ನಡೆಸುವ, ಉದ್ಘಾಟನೆ ಮಾಡುವಾಗ ಇರುವ ಉತ್ಸಾಹ ಅದನ್ನು ನಿರ್ವಹಣೆ ಮಾಡದಿದ್ದರೆ ಈ ಕಾಮಗಾರಿ ಉತ್ತಮ ಉದಾಹರಣೆ ಎನ್ನಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *