ದೆಹಲಿ, ನ.24: ದೆಹಲಿಯಲ್ಲಿ ಭಾನುವಾರದಂದು (ನ.23) ವಾಯು ಮಾಲಿನ್ಯದ ವಿರುದ್ಧ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆಯಲ್ಲಿ (ನ.23)ದೆಹಲಿ ಪ್ರತಿಭಟನೆ) ಆಂಧ್ರಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಅವರನ್ನು ಬೆಂಬಲಿಸುವ ಪೋಸ್ಟರ್ಗಳು ಮತ್ತು ಘೋಷಣೆಗಳು ಕಾಣಿಸಿಕೊಂಡವು. ಪ್ರತಿಭಟನಾಕಾರರ ಗುಂಪೊಂದು ಮಾದ್ವಿದ್ವಿ ಹಿಡ್ಮಾ ಚಿರಾಯುವಾಗಲಿ ಎಂಬ ಪೋಷಣೆಯನ್ನು ಪ್ರತಿಭಟನೆಯ ವೇಳೆ ಕೂಗಿದ್ದು, ಇದೀಗ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನಾಕಾರರು “ಬಿರ್ಸಾ ಮುಂಡಾದಿಂದ ಮದ್ವಿ ಹಿಡ್ಮಾವರೆಗೆ, ನಮ್ಮ ಕಾಡುಗಳು ಮತ್ತು ಪರಿಸರದ ಹೋರಾಟ ಮುಂದುವರಿಯುತ್ತದೆ” ಎಂಬ ಪೋಸ್ಟರ್ಗಳನ್ನು ಹಿಡಿದುಕೊಂಡರು.
ಈ ಪ್ರತಿಭಟನೆಗೆ ಎನ್ ಐ ವಿಡಿಯೋ ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ದೆಹಲಿ ಪೊಲೀಸರು ಈ ಪೋಸ್ಟರ್ ಹಾಗೂ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘೋಷಣೆಗಳನ್ನು ಕೂಗಿದವರನ್ನು ಗುರುತಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
#ವೀಕ್ಷಿಸಿ | ದೆಹಲಿ: ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಕುರಿತು ಪ್ರತಿಭಟನಾಕಾರರ ಗುಂಪು ಇಂಡಿಯಾ ಗೇಟ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಬಳಿಕ ಅವರನ್ನು ಪೊಲೀಸ್ ಸಿಬ್ಬಂದಿ ಸ್ಥಳದಿಂದ ಹೊರ ಹಾಕಿದರು pic.twitter.com/DBEZTeET0U
– ANI (@ANI) ನವೆಂಬರ್ 23, 2025
ಮಾದ್ವಿ ಹಿಡ್ಮಾ ಹಿನ್ನಲೆ:
ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ 26 ಸಶಸ್ತ್ರ ದಾಳಿಗಳಿಗೆ ಕಾರಣವಾಗಿದ್ದ ಹಿಡ್ಮಾ, ನವೆಂಬರ್ 18 ರಂದು ನಡೆದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ. 1981ರಲ್ಲಿ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ನಾಯಕ. ಅಲ್ಲಿಂದ ಸಿಪಿಐ ಮಾವೋವಾದಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಕೇಂದ್ರ ಸಮಿತಿಯ ಕಿರಿಯ ಸದಸ್ಯರಾದರು. ಕೇಂದ್ರ ಸಮಿತಿಯಲ್ಲಿ ನೇಮಕಗೊಂಡ ಮೊದಲ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯರಾಗಿದ್ದರು. 2010ರಲ್ಲಿ ದಾಂತೇವಾಡದಲ್ಲಿ ನಡೆದ ದಾಳಿಯಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. 2013ರಲ್ಲಿ ಜಿರಾಮ್ ಘಾಟಿಯಲ್ಲಿ ನಡೆದ ದಾಳಿಯಲ್ಲಿ ಕಾಂಗ್ರೆಸ್ನ ನಾಯಕರು ಸೇರಿದಂತೆ 27 ಜನರನ್ನು ಬಲಿ ತೆಗೆದುಕೊಂಡಿದ್ದರು. 2021 ರಲ್ಲಿ ಸುಕ್ಮಾ-ಬಿಜಾಪುರದಲ್ಲಿ ನಡೆದ ದಾಳಿಯಲ್ಲಿಯೂ ಹಿಡ್ಮಾ ಪ್ರಮುಖ ಪಾತ್ರ ವಹಿಸಿದ್ದು, ಇದರಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಎಲ್ಲ ಕೃತ್ಯಗಳ ಪ್ರಕರಣವನ್ನು ದಾಖಲಿಸಿಕೊಂಡು ಮಾದ್ವಿಡ್ಮಾ ಅವರಿಗೆ ಎನ್ಕೌಂಟರ್ಗೆ ಸರ್ಕಾರ ಆದೇಶ ನೀಡಿತ್ತು ಹಾಗೂ ಅವರ ತಂಡವನ್ನು ಪತ್ತೆ ಮಾಡಿದವರಿಗೆ 50 ಲಕ್ಷ ಬಹುಮಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತು.
ಇದನ್ನೂ ಓದಿ: ನರರಕ್ಷಕರೋ, ನರಹಂತಕರೋ..! ರಕ್ಕಸ ಕಾರ್ಯಕ್ಕೆ ಉಗ್ರ ವೈದ್ಯರ ಜಾಲ ನಿರ್ಮಾಣಗೊಂಡ ಕಥೆ
ದೆಹಲಿ ವಾಯು ಮಾಲಿನ್ಯ ವಿರೋಧಿಸಿ ಪ್ರತಿಭಟನೆ
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ವಿರುದ್ಧ ಭಾನುವಾರ ಸಂಜೆ ದೆಹಲಿಯ ಇಂಡಿಯಾ ಗೇಟ್ನಲ್ಲಿ ನಾಗರಿಕರು ಪ್ರತಿಭಟನೆಯನ್ನು ನಡೆಸಿದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ದೊಡ್ಡ ಗಲಭೆಯೇ ಉಂಟಾಗಿತ್ತು. ಕೆಲವು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದು, ಮೂರರಿಂದ ನಾಲ್ಕು ಪೊಲೀಸ್ ಸಿಬ್ಬಂದಿಗೆ ಗಾಯ ಆಸ್ಪತ್ರೆಯಲ್ಲಿ, ಇದೀಗ ಅವರು ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ