Video: ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಆನೆ

Video: ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಆನೆ


ಆನೆಗಳ (ಆನೆ) ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಾಲೀಕರೊಂದಿಗೆ ಮಗುವಾಗಿ ವರ್ತಿಸುವ ಆನೆಗಳ ವಿಡಿಯೋವನ್ನು ನೀವು ನೋಡುತ್ತೀರಿ. ಆದರೆ ಈ ದೃಶ್ಯವು ಪ್ರಾಣಿಗಳ ಸುಮಧುರ ಗೆಳತನಕ್ಕೆ ಸಾಕ್ಷಿಯಾಗಿದೆ. ತನ್ನ ಸ್ನೇಹಿತನಾದ ಶ್ವಾನದ (ನಾಯಿ) ಜೊತೆಗೆ ಆನೆಯೊಂದು ತುಂಟಾಟ ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುಗ್ಧ ಪ್ರಾಣಿಗಳ ಶುದ್ಧವಾದ ಗೆಳತಿ ಕಂಡು ಬೆರಗಾಗಿದ್ದಾರೆ.

ಈ ಆನೆಯ ತುಂಟಾಟ ನೋಡಿ

ಕರ್ನಾಟಕ ವೈಲ್ಡ್ ಲೈಫ್ (ಕರ್ನಾಟಕ ವನ್ಯಜೀವಿ) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಂಜನ್ ಹಾಗೂ ನಾಯಿಯ ಮಧುರ ಗೆಳತನ ಎಂದು ಶೀರ್ಷಿಕೆ ನೀಡಲಾಗಿದೆ. ಇದು ದುಬಾರೆ ಎಲಿಫೆಂಟ್ ಕ್ಯಾಂಪ್‌ನ ಸುಂದರ ದೃಶ್ಯವಾಗಿದೆ. ಆನೆಯೊಂದು ತನ್ನ ಸೊಂಡಿಲಿನಿಂದ ಶ್ವಾನಕ್ಕೆ ನೀರು ಎರಚುತ್ತಾ ತುಂಟಾಟ ಆಡಿದೆ. ಶ್ವಾನವು ಆನೆಯು ನೀರು ಎರಚುವಂತೆ ಅತ್ತಿಂದ ಇತ್ತ ಹೊರಗೆ ಬರುವುದನ್ನು ನೀವು ನೋಡಬಹದು. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ನನಗೆ ನೀನು, ನಿನಗೆ ನಾನು; ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಸುತ್ತಿದ ವ್ಯಕ್ತಿ

ಈ ವಿಡಿಯೋ ಇದುವರೆಗೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಇವರೂ ಭಗವಂತನ ಮಕ್ಕಳು. ಇತರರು, ಬೆಲೆ ಕಟ್ಟಲಾಗದ ಬಾಂಧವ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಮುದ್ದಾದ ಹೃದಯ ತುಂಟಾಟದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *