ಬೆಂಗಳೂರು, ನವೆಂಬರ್ 24: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕಾಶಿಯಿಂದ ಆಗಮಿಸಿದ್ದ ನಾಗಸಾಧು ವೇದಗಿರಿ ನಾಗಬಾಬಾ ಅವರನ್ನು ಭೇಟಿ ಮಾಡಿ ಆಶೀರ್ವಾದ ನೀಡಿದರು. ಭೇಟಿಯ ಬಳಿಕ ಮಾತನಾಡಿದ ನಾಗಸಾಧು ವೇದಗಿರಿ ನಾಗಬಾಬಾ, ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ನಾನು ಆಶೀರ್ವಾದ ಮಾಡಿದ್ದೇನೆ. ಅವರು ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಭಕ್ತಿ ಹೆಚ್ಚಾದಂತೆ ಅಭಿವೃದ್ಧಿಯಾಗುತ್ತದೆ. ಪರಮಾತ್ಮನ ಹಾಗೂ ಸಂತ ಆಶೀರ್ವಾದ ಡಿ.ಕೆ. ಶಿವಕುಮಾರ್ ಅವರ ಮೇಲಿದೆ ಎಂದ ಅವರು. ಸ್ಥಾನಕ್ಕಾಗಿ ಡಿಕೆಶಿ ಪ್ರಯತ್ನ ನಡೆಸುತ್ತಿರುವ ನಡುವೆ ನಾಗಸಾಧು ನೀಡಿರುವ ಹೇಳಿಕೆ ಮಹತ್ವದ್ದಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.