
ಬೆಂಗಳೂರು, ನವೆಂಬರ್ 24: ಬೊಮ್ಮನಹಳ್ಳಿ ಹೊಸೂರು ರಸ್ತೆಯ ಉಬರ್ ಹೆಡ್‌ಆಫೀಸ್ ಮುಂದೆ ಸಾವಿರಾರು ಕ್ಯಾಬ್ ಚಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಉಬರ್ ಅಧಿಕಾರಿಗಳು ಕರ್ನಾಟಕದ ಚಾಲಕರಿಗೆ ಡ್ಯೂಟಿ ನೀಡದೆ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿದ್ದಾರೆ. ಬಾಂಗ್ಲಾದೇಶ ಮೂಲದ ಡಿಎಲ್ ಇಲ್ಲದವರಿಗೆ ಕೆಲಸ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.ಅಷ್ಟೇ ಇರುವ ಸ್ವಂತ ಕಾರುಗಳಿಗೆ ಮಾತ್ರ ಬಾಡಿಗೆ ಬುಕ್ಕಿಂಗ್ ನೀಡಿ, ಅಟ್ಯಾಚ್ ಮಾಡಿದ ವಾಹನಗಳಿಗೆ ಡ್ಯೂಟಿ ನೀಡುತ್ತಿಲ್ಲ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಚಾಲಕರು ಕಬ್ಬಿಣದ ರಾಡ್ನಿಂದ ಉಬರ್ ಕಂಪನಿ ಬಾಗಿಲು ತೆರೆಯಲು ಮುಂದಾಗಿದ್ದಾರೆ, ಉಬರ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದಿನ ಬಾಗಿಲಿನಿಂದ ಹೊರ ಹೋಗಿದ್ದಾರೆ.
ಇತ್ತ ಬಾಡಿಗೆಯು ಇಲ್ಲ, ಅತ್ತ ಮಾಡಿರುವ ಸಾಲ ತೀರಿಸಲು ಆಗದೆ ಪರದಾಡಿದೆ. ಒನ್ ಸಿಟಿ ಓನ್ ಫೇರ್ ಜಾರಿಯಲ್ಲಿದ್ದರೂ ಉಬರ್ ಕಂಪನಿ ಮಾತ್ರ ಪ್ರಯಾಣಿಕರಿಂದ ಅನಧಿಕೃತವಾಗಿ ದುಪ್ಪಟ್ಟು ದರ ಪಡೆಯುತ್ತಿದೆ. ಪೀಕ್ ಅವರಲ್ಲಿ ಒಂದು ದರ, ನಾರ್ಮಲ್ ಅವರ ಒಂದು ದರ, ಮಳೆ ಬಂದಾಗ ಒಂದು ದರ ಎಂದು ಮನ ಬಂದಂತೆ ಹಣ ಪಡೆಯುತ್ತಿದ್ದಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆ ಉಬರ್ ಅಧಿಕಾರಿಯೊಂದಿಗೆ ಮಾತುಕತೆ ನಡೆಸುವಂತೆ ಚಾಲಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.