Viral Post: ‘ನನ್ನನ್ನು ಭಯ್ಯಾ ಎಂದು ಕರೆಯಬೇಡಿ’: ಕ್ಯಾಬ್‌ನಲ್ಲಿ ಕಠಿಣ ನಿಯಮಾವಳಿ ರೂಪಿಸಿದ ಡ್ರೈವರ್

Viral Post: ‘ನನ್ನನ್ನು ಭಯ್ಯಾ ಎಂದು ಕರೆಯಬೇಡಿ’: ಕ್ಯಾಬ್‌ನಲ್ಲಿ ಕಠಿಣ ನಿಯಮಾವಳಿ ರೂಪಿಸಿದ ಡ್ರೈವರ್


ಬೆಂಗಳೂರಿನ ಪ್ರಯಾಣಿಕರು ಕ್ಯಾಬ್ನ ಡ್ರೈವರ್ ಸೀಟ್ ಹಿಂದೆ ಅಂಟಿಸಿರುವ ಪೋಸ್ಟರ್ ಬಗ್ಗೆ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಕೂಡ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಕ್ಯಾಬ್ ಡ್ರೈವರ್ ಪ್ರಯಾಣಿಕರಿಗೆ ನಿಯಮಗಳು (ಬೆಂಗಳೂರು ಕ್ಯಾಬ್ ನಿಯಮಗಳು) ಪಾಲಿಸುವಂತೆ ಖಡಕ್ ಆಗಿ ಹೇಳಿದ್ದಾರೆ. ಈ ನಿಯಮಗಳನ್ನು ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ. ಇಂತಹ ನಿಯಮಗಳು ಕ್ಯಾಬ್ ನಲ್ಲಿ ಬೇಕು ಎಂದು ಹೇಳಿದ್ದಾರೆ. ಈ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

ಇದರಲ್ಲಿ 7 ನಿಮಯಗಳಿವೆ. ಚಾಲಕನ ಸೀಟಿನ ಹಿಂದೆ ಈ ನೋಟಿಸ್ ಅನ್ನು ಹಂಚಿಕೊಳ್ಳಲಾಗಿದೆ. ಮೂಲಕ ಪ್ರಯಾಣಿಕರಿಗೆ ಖಡಕ್ ಆಗಿ ಸೂಚಿಸಲಾಗಿದೆ. ಇದು ಡ್ರೈವರ್‌ಗಳು ದಿನನಿತ್ಯ ಎದುರಿಸುವ ಸಮಸ್ಯೆಯಾಗಿದೆ. ಆ 7 ನಿಯಮಗಳೇನು ಇಲ್ಲಿ ಹೇಳಲಾಗಿದೆ.

ಇಲ್ಲಿದೆ ನೋಡಿ ಪೋಸ್ಟ್:

ಇದು ನಿನ್ನೆ ನನ್ನ ಕ್ಯಾಬ್‌ನಲ್ಲಿ ಕಂಡುಬಂದಿದೆ byu/CluelessFounder_ inbangalore

ಏಳು ನಿಯಮಗಳು ಇಲ್ಲಿದೆ:

1.ನೀವು ಕ್ಯಾಬ್ನ ಇದೆಲ್ಲ

2.ಕ್ಯಾಬ್ ಚಾಲನೆ ಮಾಡುವ ವ್ಯಕ್ತಿಯೇ ಕ್ಯಾಬ್ನ ಮಾಲೀಕ

3.ಸಭ್ಯವಾಗಿ ಮಾತನಾಡಿ ಗೌರವದಿಂದ ನಡೆದುಕೊಳ್ಳಿ

4.ನಿಧಾನವಾಗಿ ಕ್ಯಾಬ್ ಬಾಗಿಲನ್ನು ಮುಚ್ಚಿ

5.ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ ಏಕೆಂದರೆ ನೀವು ನಮಗೆ ಹೆಚ್ಚು ಹಣ ನೀಡುತ್ತಿಲ್ಲ

6.ನನ್ನನ್ನು ಭಯ್ಯಾ ಅಂತ ಕರೆಯಬೇಡ.

7.ವೇಗವಾಗಿ ಓಡಿಸು ಎಂದು ಹೇಳಬೇಡಿ.

ಇದನ್ನೂ ಓದಿ: ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ

ಈ ಪೋಸ್ಟ್ ಗೆ ನೆಟ್ಟಿಗರು ಹೇಳಿದ್ದೇನು?

ಒಬ್ಬ ನೆಟ್ಟಿಗ ನಾನು ಈ ಪೋಸ್ಟ್ ಅನ್ನು ಬೆಂಬಲಿಸುತ್ತೇನೆ. ಕೆಲವು ಪ್ರಯಾಣಿಕರ ಕ್ಯಾಬ್‌ಗಳನ್ನು ತಮ್ಮ ಸ್ವಂತದ್ದು ಎಂಬಂತೆ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. ಇತರರು, ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಈ ಸಾಲು ನೋಡಿದಾಗ ತುಂಬಾ ನಗು ಬಂತು. ಇದು ಕಠಿಣವಾಗಿದ್ದರು, ಪ್ರಾಮಾಣಿಕವಾಗಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರು ವೇಗವಾಗಿ ಹೋಗಿ, ಶಾರ್ಟ್‌ಕಟ್‌ ಇಲ್ವಾ? ಎಂದು ಕೇಳುವವರಿಗೆ ಪೋಸ್ಟ್ ಸರಿಯಾಗಿದೆ ಎಂದು ಒಬ್ಬರು ಈ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲ ಓಕೆ ಆದರೆ ಈ ಭಯ್ಯಾ ಎಂದು ಯಾಕೆ ಕರೆಯಬಾರದು ಎಂಬುದು ನನಗೆ ಅರ್ಥವಾಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *