ಮದ್ವೆಯಾಗ್ತಿದ್ದಂತೆಯೇ ನಟಿ ರಜಿನಿಗೆ ಹುಚ್ಚುನಾಯಿ ಕಚ್ಚಿತಂತೆ! ಹೀಗೆ ಮಾಡೋದಾ ಗಂಡ? | Actress Rajini Funny Reels With Husband Arun Venkatesh Suc

ಮದ್ವೆಯಾಗ್ತಿದ್ದಂತೆಯೇ ನಟಿ ರಜಿನಿಗೆ ಹುಚ್ಚುನಾಯಿ ಕಚ್ಚಿತಂತೆ! ಹೀಗೆ ಮಾಡೋದಾ ಗಂಡ? | Actress Rajini Funny Reels With Husband Arun Venkatesh Suc


18

ರಜಿನಿ ಅರುಣ್​ ವೆಂಕಟೇಶ್​

Image Credit : Instagram

ರಜಿನಿ- ಅರುಣ್​ ವೆಂಕಟೇಶ್​

ಅಮೃತವರ್ಷಿಣಿ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ರಜಿನಿ ಅವರು ಇದೀಗ ಮದ್ವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ‘ನಾಬಿಬ್ಬರೂ ಗಂಡ-ಹೆಂಡತಿ ಅಲ್ಲ. ವಿಡಿಯೋ ಪಾರ್ಟನರ್​ ಅಷ್ಟೇ ಎಂದು ಕೊನೆಯವರೆಗೂ ಹೇಳುತ್ತಲೇ ಇದೀಗ ದಿಢೀರ್​ ಎಂದು ಅವರ ಜೊತೆನೇ ಮದುವೆಯಾಗಿ ಎಲ್ಲರಿಗೂ ಸರ್​ಪ್ರೈಸ್​ ನೀಡಿದ್ದಾರೆ ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ರಜಿನಿ. ಇವರು ಜಿಮ್​ ಟ್ರೈನರ್​ ಅರುಣ್ ವೆಂಕಟೇಶ್ (Arun Venkatesh) ಜೊತೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

28

ನಿರಾಕರಿಸಿ ಮದುವೆ

Image Credit : Instagram

ನಿರಾಕರಿಸಿ ಮದುವೆ

ಇವರಿಬ್ಬರೂ ಹಲವಾರು ವಿಡಿಯೋಗಳನ್ನು, ರೀಲ್ಸ್​ಗಳನ್ನು ಹಲವು ತಿಂಗಳುಗಳಿಂದ ಒಟ್ಟಿಗೇ ಮಾಡುತ್ತಿದ್ದರು. ಆಗ ಮದುವೆಯ ಪ್ರಶ್ನೆ ಎದುರಾಗಿತ್ತು. ಅದನ್ನು ನಟಿ ನಿರಾಕರಿಸಿದ್ದರು. ಆದರೂ, ಗೆಳೆಯನ ಮದುವೆ ಆದರೂ ತಪ್ಪಿಲ್ಲ. ಅವರು ಹಲವು ವರ್ಷಗಳಿಂದ ನಮ್ಮ ಜೊತೆ ಇದ್ದಿರುತ್ತಾರೆ. ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅದೇ ರೀತಿ ಬೇರೆಯವರನ್ನು ಮದುವೆ ಆದರೂ ತಪ್ಪಿಲ್ಲ ಎಂದು ಹಿಂಟ್ ಕೂಡ ನೀಡಿದ್ದರು.

38

ಹುಚ್ಚುನಾಯಿ ಕಚ್ಚಿದೆ

Image Credit : Instagram

ಹುಚ್ಚುನಾಯಿ ಕಚ್ಚಿದೆ

ಇದೀಗ ಅವರು ಇನ್ನೊಂದು ರೀಲ್ಸ್​ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರ ಪತಿ ಅರುಣ್​, ವೈದ್ಯರಿಗೆ ಕರೆ ಮಾಡಿ ನನ್ನ ಹೆಂಡತಿಗೆ ಹುಚ್ಚುನಾಯಿ ಕಚ್ಚಿದೆ ಎಂದಿದ್ದಾರೆ.

48

ನಾಯಿಗೆ ಹುಚ್ಚು

Image Credit : Instagram

ನಾಯಿಗೆ ಹುಚ್ಚು

ಕೊನೆಗೆ ನನ್ನ ಹೆಂಡತಿಗೆ ಏನೂ ಆಗಲಿಲ್ಲ, ಆದರೆ ಆ ನಾಯಿ ಯಾಕೋ ಹುಚ್ಚುಚ್ಚಾಗಿ ಆಡ್ತಿದೆ ಎಂದಿದ್ದಾರೆ! ನಾಯಿಗೆ ಗಂಡಾಂತರ ಇದೆ ಎನ್ನುತ್ತಲೇ ರಜಿನಿ ಅವರು ಗಂಡನಿಗೆ ಚೆನ್ನಾಗಿ ಹೊಡೆದಿದ್ದಾರೆ.

58

ಅಭಿಮಾನಿಗಳ ಹಾರೈಕೆ

Image Credit : actress rajini instagram

ಅಭಿಮಾನಿಗಳ ಹಾರೈಕೆ

ಮೊದಲಿಗೆ ಸ್ನೇಹಿತರಾಗಿ, ಈಗ ಪತಿ-ಪತ್ನಿಯಾಗಿ ಮಾಡ್ತಿರೋ ರೀಲ್ಸ್​ ನೋಡಿ ಅವರ ಅಭಿಮಾನಿಗಳು ಹೀಗೆಯೇ ನೂರುಕಾಲ ಚೆನ್ನಾಗಿ ಇರಿ ಎಂದು ಹಾರೈಸುತ್ತಿದ್ದಾರೆ.

68

ಏಳು ವರ್ಷಗಳ ಸ್ನೇಹ

Image Credit : Asianet News

ಏಳು ವರ್ಷಗಳ ಸ್ನೇಹ

ಇನ್ನು ಇವರಿಬ್ಬರ ಲವ್​ ಸ್ಟೋರಿ ಬಗ್ಗೆ ಹೇಳುವುದಾದರೆ, ರಜಿನಿ ಮತ್ತು ಅರುಣ್ ಪರಿಚಯ ಶುರುವಾಗಿದ್ದು ಜಿಮ್‌ನಲ್ಲಿ. ಏಳು ವರ್ಷಗಳ ಕಾಲ ಗೆಳೆಯರಾಗಿದ್ದರು. ಆರಂಭದಲ್ಲಿ ಅವರು ಕೇವಲ ಫಿಟ್ನೆಸ್ ಪಾರ್ಟನರ್​ ಆಗಿದ್ದರು. ಬಳಿಕ ಲವ್ ಶುರುವಾಗಿ ಮದುವೆಯಾಗಿದೆ.

78

ಸೀರಿಯಲ್​, ಸಿನಿಮಾಗಳಲ್ಲಿ ನಟನೆ

Image Credit : Asianet News

ಸೀರಿಯಲ್​, ಸಿನಿಮಾಗಳಲ್ಲಿ ನಟನೆ

ರಜಿನಿ ‘ಅಮೃತವರ್ಷಿಣಿ’ ಜೊತೆಗೆ ‘ಹಿಟ್ಲರ್ ಕಲ್ಯಾಣ’ದಿಂದಲೂ ಫೇಮಸ್​. ಅವರು ರಿಯಾಲಿಟಿ ಶೋಗಳು ಮತ್ತು ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

88

ಜಿಮ್​ ಟ್ರೈನರ್​

Image Credit : Asianet News

ಜಿಮ್​ ಟ್ರೈನರ್​

ರಜಿನಿ ಅವರ ಪತಿ ಅರುಣ್ ವೆಂಕಟೇಶ್ (Arun Venktesh) ಅವರು ಜಿಮ್ ಟ್ರೈನರ್ ಆಗಿದ್ದಾರೆ. ಅವರು ಒಬ್ಬ ಬಾಡಿ ಬಿಲ್ಡರ್ ಕೂಡ ಹೌದು. ಅರುಣ್ ಅವರ ಫಿಟ್ನೆಸ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *