Headlines

ವಂದೇ ಭಾರತ್​​ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?

ವಂದೇ ಭಾರತ್​​ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?


ನೆಲಮಂಗಲ, ನವೆಂಬರ್ 24: ಅವರಿಬ್ಬರು ಉನ್ನತ ಶಿಕ್ಷಣಕ್ಕಾಗಿ ದೂರದ ಬೇರೆ ರಾಜ್ಯದಿಂದ ಬಂದಿದ್ದರು. ಜೋಡಿ ಹಕ್ಕಿತರ ಹಿಡಿದ ಪ್ರೇಮಿಗಳು (ಪ್ರೇಮಿಗಳು) ಮದುವೆಯಾಗುವ ಯೋಜನೆ ಕೂಡ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ ಎಂದಿನಂತೆ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮುಗಿಸಿ ಪಿಜಿಗೆ ತೆರಳಲು. ಆದರೆ ಅದೇನಾಯಿತು ಏನೋ ಹಳಿ ಮೇಲೆ ಇಬ್ಬರ ದೇಹ ಛಿದ್ರ ಛಿದ್ರವಾಗಿ (ಸಾವು) ಬಿದ್ದಿತ್ತು.

ವಂದೇ ಭಾರತ್ ರೈಲಿಗೆ ಸಿಲುಕಿ ಆತ್ಮಹತ್ಯೆ

19 ವರ್ಷದ ಸ್ಟೆರ್ಲಿನ್ ಎಲಿಜ ಶಾಜಿ ಮತ್ತು 20 ವರ್ಷದ ಜಸ್ಟಿನ್ ಮೃತ ಪ್ರೇಮಿಗಳು. ಎರಡು ಸಹ ಕೇರಳ ಮೂಲದವರು. ಚಿಕ್ಕಬಾಣವರ ಬಳಿ ಇರುವ ಖಾಸಗಿ ಕಾಲೇಜ್ ಒಂದರಲ್ಲಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಗೊತ್ತಿಲ್ಲ, ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ವಂದೇ ಭಾರತ್ ರೈಲಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಯುವತಿಯನ್ನ ಸ್ನೇಹಿತೆ ರೂಮಿಗೆ ಕರೆದೊಯ್ದು ಕೊಲೆಗೈದ ಯುವಕ, ಆಗಿದ್ದೇನು?

ಈ ಘಟನೆಯ ಸಂದರ್ಭದಲ್ಲಿ ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ಸಾಕಷ್ಟು ಅನುಮಾನವನ್ನು ಸೃಷ್ಟಿಸಿತ್ತು. ವಂದೇ ಭಾರತ್ ಎಕ್ಸಪ್ರೆಸ್ ನ ಸಿಸಿಟಿವಿ ಗಮನಿಸಿದ ಅಧಿಕಾರಿಗಳು, ಈ ವೇಳೆ ಇಬ್ಬರು ಹಳಿ ಮೇಲೆ ನಿಂತಿರುವುದು ಸ್ಪಷ್ಟವಾಗಿದೆ. ಅಲ್ಲಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ನಿಂತಿರುವುದು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆದರೆ ಅದು ನಿಜನಾ, ಸುಳ್ಳಾ ಎಂಬುವುದು ಅಧಿಕೃತ ಮಾಹಿತಿಯಿಂದ ತಿಳಿಯಲಿದೆ.

ಈ ಘಟನೆ ನಡೆಯುತ್ತಿಲ್ಲ ಎಂದು ಕೆಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ನಿನ್ನೆ ಭಾನುವಾರ ಇಬ್ಬರು ಚರ್ಚ್‌ಗೆ ಹೋಗಿದ್ದರು. ಪ್ರೇಯರ್ ಮುಗಿಸಿ ನಂತರ ವಾಪಸ್ ಆಗುವ ವೇಳೆ ಘಟನೆ ನಡೆದಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: ದಂಪತಿ ಮಧ್ಯೆ ಗಲಾಟೆ: ಕಾಲುವೆಗೆ ಹಾರಿದ್ದ ಪತ್ನಿಯನ್ನ ರಕ್ಷಿಸಲು ಹೋಗಿ ಕೊಚ್ಚಿಹೋದ ಪತಿ ಸಾವು

ಸದ್ಯ ತನಿಖೆ ನಡೆಸುತ್ತಿರುವ ಮೊಬೈಲ್, ಘಟನೆ ಸಂಬಂಧವವರನ್ನು ಪರಿಶಿಲಿಸಲು ಮುಂದಾಗಿದ್ದಾರೆ. ಆದರೆ ರೈಲಿಗೆ ಸಿಕ್ಕಿ ಮೊಬೈಲ್ ಕೂಡ ಛಿದ್ರವಾಗಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿಯಬೇಕಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:53 pm, ಸೋಮ, 24 ನವೆಂಬರ್ 25



Source link

Leave a Reply

Your email address will not be published. Required fields are marked *