Headlines

ಅಧಿಕಾರ ಹಂಚಿಕೆ ಕದನದ ಹೊತ್ತಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡೆ ನಿಗೂಢ! ಏನಿದರ ಗುಟ್ಟು?

ಅಧಿಕಾರ ಹಂಚಿಕೆ ಕದನದ ಹೊತ್ತಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡೆ ನಿಗೂಢ! ಏನಿದರ ಗುಟ್ಟು?


ಬೆಂಗಳೂರು, ನವೆಂಬರ್ 25: ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ನಡುವೆ ತೆರೆ ಮರೆಯ ಬಾಂಧವ್ಯ ಹೇಗಿದೆ ಬಿಡಿಸಿ ಹೇಳಬೇಕಿಲ್ಲ. ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಹೊರಗಿನ ಕೆಮೆಸ್ಟ್ರಿ ಮಾತ್ರ ಎಲ್ಲರನ್ನೂ ಹುಬ್ಬೇರುವಂತೆ ಮಾಡುತ್ತಿದ್ದಾರೆ. ಅದಕ್ಕೆ ಅನೇಕ ಸ್ಪಷ್ಟ ಉದಾಹರಣೆಗಳನ್ನು ಕಾಣಬಹುದಾಗಿದೆ.

ಬದಲಾವಣೆ ಕಿಡಿ ಸೋಕಿದಾಗಲೇ ದೆಹಲಿಯಲ್ಲಿ ಒಟ್ಟಿಗೆ ಕುಳಿತು ಊಟ!

ಬಿಹಾರ ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ, ನವೆಂಬರ್ 15ರಂದು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಯಾಗಿದ್ದರು ಸಿದ್ದರಾಮಯ್ಯ. ಅಲ್ಲಿಂದಲೇ ಪಟ್ಟದ ಆಟ ಕಿಡಿ ಹೊತ್ತುಕೊಂಡಿತ್ತು. ಇದಾದ ಬೆನ್ನಲ್ಲೇ ಖರ್ಗೆ ಅವರನ್ನು ಭೇಟಿ ಮಾಡಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಆಗಿದ್ದರು. ಹೀಗಾಗಿ ಬದಲಾವಣೆ ಕಿಡಿ ಸೋಕಿದಾಗಲೇ, ಅಂದರೆ ನವೆಂಬರ್ 17ರಂದು ತೆರಳಿದ್ದ ಖರ್ಗೆ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ್ದರು. ಖರ್ಗೆ ಭೇಟಿಗೂ ಮುನ್ನವೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಮುಖಾಮುಖಿಯಾಗಿದ್ದರು. ಒಟ್ಟಿಗೆ ಕೂತು ಊಟ ಮಾಡಿದರು. ಒಟ್ಟಿಗೆ ಕಾಣಿಸಿಕೊಂಡರೂ ಡಿಕೆ ಶಿವಕುಮಾರ್, ‘ನಾನು ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ಹೈಕಮಾಂಡ್ ನಾಲ್ಕೈದು ತಿಂಗಳ ಹಿಂದೆಯೇ ಒಪ್ಪಿತ್ತು ಎಂದಿದ್ದರು.

ಮತ್ಸ್ಯಮೇಳದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆಯಲ್ಲೇ ಹೆಜ್ಜೆ!

ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದಂತೆಯೇ, ಪವರ್ ಶೇರಿಂಗ್ ಫೈಟ್ ಕಿಡಿ ಜ್ವಾಲೆ ಆಗುತ್ತಿದೆ. ಶುಕ್ರವಾರ ಡಿಕೆಶಿ ಬಣದ ಶಾಸಕರ ತಂಡ ದೆಹಲಿಗೆ ಹೋಗಿ ಖರ್ಗೆ ಅವರನ್ನು ಭೇಟಿ ಮಾಡಲಾಗಿತ್ತು. ಶನಿವಾರ ಖರ್ಗೆ ಬೆಂಗಳೂರಿಗೆ ಬಂದಿದ್ದರು. ಇತ್ತ ಡಿಕೆಶಿ ಪರಪ್ಪನ ಅಗ್ರಹಾರ ಜೈಲಿಗೂ ಶಾಸಕರಾದ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿ ಅವರನ್ನ ಭೇಟಿಯಾಗಿದ್ದರು. ಇದೇ ವೇಳೆ ಸಹಿ ಸಂಗ್ರವನ್ನೂ ಮಾಡಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಬೆಂಗಳೂರಿನಲ್ಲಿ ನಡೆದ ಮತ್ಸ್ಯ ಮೇಳದಲ್ಲಿ ಡಿಸಿಎಂ ಡಿಕೆಶಿ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಭಾಗವಹಿಸಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲೇ ನಿಂತು ಮಾರ್ಮಿಕವಾಗಿ ಮಾತನಾಡಿದ್ದ ಡಿಕೆ, ನಾನು ಮೀನುಗಳಿಗೆ ಗಾಳ ಹಾಕುತ್ತಿದ್ದೆ. ಮೀನು ಹಿಡಿಯಲು ತಾಳ್ಮೆ ಬೇಕು ಎಂದಿದ್ದರು.

ಕಾಂಗ್ರೆಸ್ ನಲ್ಲಿ ಕಾಂತ್ರಿಯ ಕಿಚ್ಚು ಧಗಧಗಿಸುವಾಗಲೇ ಸಿಎಂ, ಡಿಸಿಎಂ ಸೋಮವಾರ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಜೊತೆಯಾಗಿಯೇ ಶಂಕು ಸ್ಥಾಪನೆ ನೆರವೇರಿಸಿದರು. ಜೊತೆಯಾಗಿ ಕುಳಿತು ಗುಸು ಗುಸು ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಿಕೆಶಿ, ಕೊಟ್ಟು ಹೋಗುವ ಮತ್ತು ಬಿಟ್ಟು ಹೋಗುವ ಮಾತನ್ನು ಹೇಳಿದ್ದಾರೆ.

ದೇವರು ನಮಗೆ ಕೊಟ್ಟಿರುವುದು ಎರಡು ಆಯ್ಕೆ; ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಹಾಗೇ ಇವತ್ತು ಏನೇನ್ ಕೊಡಬೇಕೋ ಕೊಟ್ಟು ಹೋಗ್ತಾ ಇದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ ಬಿಟ್ಟು ಸಹ ಹೋಗ್ತಾ ಇದ್ದೇವೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಡಿಕೆಶಿ ಹೇಳಿದ್ದಾರೆ.

ಹೈಕಮಾಂಡ್ ಹೇಳಿದರೆ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ! ಸಿದ್ದರಾಮಯ್ಯ ಪಕ್ಷದ ಆಸ್ತಿ ಎಂದ ಡಿಕೆಶಿ

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಎಲ್ಲರೂ ಕೇಳಬೇಕು. ಡಿಕೆಶಿನೂ ಕೇಳ್ಬೇಕು. ಆ ಮೂಲಕ ಹೈಕಮಾಂಡ್‌ನತ್ತ ಚೆಂಡು ಎಸೆದಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿ, ಅವರು ಹೇಳಿದ ವೇದ ವಾಕ್ಯ, ಅವರು ಹೇಳಿದ್ದಕ್ಕೆ ತಕರಾರಿಲ್ಲ, ಸಿದ್ದರಾಮಯ್ಯ ನಮ್ಮ ಪಕ್ಷದ ಆಸ್ತಿ.

ಇದನ್ನೂ ಓದಿ: ಪಟ್ಟದ ಫೈಟ್ ನಡುವೆ ಸ್ಫೋಟಕ ಭವಿಷ್ಯ ನುಡಿದ ಹುಲಿಗೆಮ್ಮ ಜೋಗತಿ: ಡಿಕೆಶಿಗೆ ಇದ್ಯಾ ಸಿಎಂ ಯೋಗ?

ನವೆಂಬರ್ ಮುಗಿಯಲು ಇನ್ನು ಕೇವಲ ಐದೇ ಐದು ದಿನ ಬಾಕಿ ಇದೆ. ಸದ್ಯ ತೆರೆ ಮೇಲೆ ಒಟ್ಟೊಟ್ಟಿಗೆ ವಿಜೃಂಭಿಸುವ ಸಿದ್ದು, ಡಿಕೆಶಿ ತೆರೆಯ ಹಿಂದೆ ಪಟ್ಟಕ್ಕಾಗಿ ತಂತ್ರಗಳನ್ನು ಕತ್ತಿ ಝಳಪಿಸುತ್ತಲೇ ಇದ್ದಾರೆ. ಹೀಗಾಗಿ ಕಾಂಗ್ರೆಸ್ ನ ನವೆಂಬರ್ ಕ್ರಾಂತಿ ಕಿಚ್ಚು ಏನಾಗಲಿದೆ ಎಂಬುದೇ ಕುತೂಹಲವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *