ರಿಲಯನ್ಸ್ ಜಿಯೋ 2GB ದೈನಂದಿನ ಡೇಟಾ, 100 SMS ಮತ್ತು 12ಕ್ಕೂ ಹೆಚ್ಚು ಒಟಿಟಿ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆ ನೀಡುತ್ತಿದೆ. ಜಿಯೋದ ಈ ಆಕರ್ಷಕ ಆಫರ್ ಗ್ರಾಹಕರಿಗೆ ಹೆಚ್ಚಿನ ಮನರಂಜನೆಯನ್ನು ಒದಗಿಸುತ್ತದೆ.

ರಿಲಯನ್ಸ್ ಜಿಯೋ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ವಿಶೇಷ ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ. ರಿಲಯನ್ಸ್ ಜಿಯೋ 47 ಕೋಟಿಗೂ ಬಳಕೆದಾರರನ್ನು ಹೊಂದಿದೆ.

ಜಿಯೋ ಬಳಕೆದಾರರಿಗೆ ಸಾಮಾನ್ಯವಾಗಿ ಜಿಯೋ ಕ್ಲೌಡ್ ಸೇರಿದಂತೆ ವಿವಿಧ ಆಪ್ಗಳ ಆಕ್ಸೆಸ್ ಲಭ್ಯವಾಗುತ್ತದೆ. ಜಿಯೋದ ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೂ ಗ್ರಾಹಕರಿಗೆ ಪ್ರತಿದಿನ 100 ಎಸ್ಎಂಎಸ್ ಮತ್ತು ಯಾವುದೇ ನೆಟ್ವರ್ಕ್ಗೆ ಅನಿಯಮಿತವಾಗಿ ಕರೆ ಮಾಡಬಹುದು.

ಜಿಯೋ 1 ದಿನದಿಂದ 365 ದಿನಗಳವರೆಗಿನ ಪ್ಲಾನ್ ನೀಡುತ್ತವೆ. ಇಂದು ನಾವು ಹೇಳುತ್ತಿರುವ ಪ್ಲಾನ್ನಲ್ಲಿ ನಿಮಗೆ 10ಕ್ಕೂ ಅಧಿಕ ಒಟಿಟಿ ಪ್ಲಾನ್ಗಳ ಆಕ್ಸೆಸ್ ಲಭ್ಯವಾಗುತ್ತದೆ. ಇದು Jio ನ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ.

ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಸಿಗುತ್ತದೆ. ಹಾಗೆಯೇ ಉಚಿತವಾಗಿ 100 ಎಸ್ಎಂಎಸ್ ಕಳುಹಿಸಬಹುದು. ಇದರ ಜೊತೆಯಲ್ಲಿ ಈ ಪ್ಲಾನ್ ಹಲವು ಆಫರ್ಗಳನ್ನು ಹೊಂದಿದೆ. ಈ ಪ್ಲಾನ್ ಬೆಲೆ, ವ್ಯಾಲಿಡಿಟಿ ಎಷ್ಟು ಎಂದು ನೋಡೋಣ ಬನ್ನಿ.

ಈ ಪ್ರಿಪೇಯ್ಡ್ ಪ್ಲಾನ್ ಬೆಲೆ 445 ರೂಪಾಯಿ ಆಗಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 2GB ಡೇಟಾ, 100 ಎಸ್ಎಂಎಸ್, 12ಕ್ಕೂ ಹೆಚ್ಚು ಒಟಿಟಿ ಅಪ್ಲಿಕೇಶನ್ಗಳ ಫ್ರೀ ಸಬ್ಸ್ಕ್ರಿಪ್ಷನ್ ಸಹ ಸಿಗುತ್ತದೆ.

ಇದರಲ್ಲಿ ನೀವು JioHotstar ಚಂದಾದಾರಿಕೆ, Sony LIV, ZEE5, Liongate Play, Discovery+, Sun NXT, Kanchha Lannka, Planet Marathi, Chaupal, FanCode, Hoichoi, JioTV, JioAICloud ನಂತಹ ಅಪ್ಲಿಕೇಶನ್ಗಳ ಆಕ್ಸೆಸ್ ಸಿಗುತ್ತದೆ. ದೇಶಾದ್ಯಂತ ಅನಿಯಮಿತ ಕರೆಗಳನ್ನು ಮಾಡಬಹುದು. ಪ್ರತಿದಿನ ಎಸ್ಎಂಎಸ್ ಚಾಟ್ ಮಾಡೋರಿಗೆ ಈ ಪ್ಲಾಕ್ ಉಪಯುಕ್ತವಾಗುತ್ತದೆ.

Source link
12+ OTT ಪ್ಲಾಟ್ಫಾರ್ಮ್ಗಳಿಗೆ ಫ್ರೀ ಆಕ್ಸೆಸ್ ಸಿಗುವ ಜಿಯೋದ ಸೀಕ್ರೆಟ್ ಪ್ಲಾನ್ ; 56GB ಡೇಟಾ ಉಚಿತ