
ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್ ಹೆಸರನ್ನು ಅನೇಕರು ಕೇಳುತ್ತಿರುತ್ತೀರಿ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಆ್ಯಕ್ಷನ್ ವೈರಲ್ ಆಗಿದೆ. ಯಾವುದೋ ಸಿನಿಮಾ ಈವೆಂಟ್ ನಲ್ಲಿ ಅವರು ಭಾಗಿ ಆಗಿದ್ದರು. ಆರಂಭದಲ್ಲಿ ಸಿಟ್ಟಾಗೋ ಅವರು ನಂತರ ಏಕಾಕಿ ಮುಖಭಾವ ಬದಲಿಸಿಕೊಂಡು ನಗುವಿನಿಂದ ಮಾತನಾಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಮೀಮ್ ಗಾಗಿ ಬಳಸಲಾಗಿದೆ. ಈಗ ಅವರ ಸಿನಿಮಾಗಳಿಗೆ ತೊಂದರೆ ಉಂಟಾಗಿದೆ. ಹಾಗಂತ ಅವರ ಆ್ಯಕ್ಷನ್ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ವೆಟ್ರಿಮಾರನ್ ಅವರು 2007ರಲ್ಲಿ ನಿರ್ದೇಶನಕ್ಕೆ ಬಂದರು. ಆ ಬಳಿಕ ಸಾಲು ಸಾಲು ಹಿಟ್ ಸಿನಿಮಾ. ‘ವಿಡುದಲೈ ಭಾಗ 1’ ಹಾಗೂ ‘ವಿಡುದಲೈ ಭಾಗ 2’ ಅವರ ನಿರ್ದೇಶನದ ಕೊನೆಯ ಸಿನಿಮಾಗಳು. ಅವರ ಬಳಿ ಇರೋ ಸಿನಿಮಾಗಳೆಲ್ಲ ನಿಂತು ಹೋಗುತ್ತಿವೆ ಎಂದು ಹೇಳಲಾಗುತ್ತಿದೆ.
ಈ ಮೊದಲು ಅವರು ಸೂರ್ಯ ಜೊತೆ ಸಿನಿಮಾ ಮಾಡಬೇಕಿತ್ತು. ಇದಕ್ಕೆ ‘ವಡಿವಾಸಲ್’ ಎಂದು ಟೈಟಲ್ ಇಡಲಾಗಿದೆ. ಆದರೆ ಸಿನಿಮಾ ನಿಂತಿತು. ಆ ಬಳಿಕ ಅವರು ಧನುಷ್ ಜೊತೆ ‘ವಾಡಾ ಚೆನೈ 2’ ಮಾಡಬೇಕಿತ್ತು. ಆದರೆ, ಇದು ವಿಳಂಬವಾಗಿದೆ. ಹೀಗಾಗಿ, ಸಿಂಬು ಜೊತೆ ಸಿನಿಮಾ ಮಾಡಲು ಅವರು ಮುಂದಾದರು.
‘ಅರಸನ್’ ಎಂಬುದು ಈ ಚಿತ್ರದ ಶೀರ್ಷಿಕೆ. ಈ ಸಿನಿಮಾ ಸೆಟ್ಟೇರಿಲ್ಲ. ಆಗಲೇ ಚಿತ್ರಕ್ಕೆ ಸಾಕಷ್ಟು ತೊಂದರೆ ಎದುರಾಗಿದೆ. ಸಿಂಬು ಹಾಗೂ ನಿರ್ಮಾಣ ಸಂಸ್ಥೆ ಮಧ್ಯೆ ಕಿರಿಕ್ಯಂತೆ ಆಗಿದೆ. ಹೀಗಾಗಿ ಅಂದುಕೊಂಡಂತೆ ಸಿನಿಮಾ ಸೆಟ್ಟೇರುತ್ತಿಲ್ಲ. ಸದ್ಯಕ್ಕೆ ಈ ಸಿನಿಮಾ ನಿಲ್ಲಿಸಲಾಗಿದೆಯಂತೆ. ಈ ಕೆಲಸ ಆರಂಭ ಆಗಲು ನಿರ್ಮಾಪಕರೇ ಮನಸ್ಸು ಮಾಡಬೇಕಿದೆ.
ಇದನ್ನೂ ಓದಿ: ಉತ್ತರ ಚೆನ್ನೈನಿಂದ ಮತ್ತೊಂದು ರಕ್ತ ಸಿಕ್ತ ಕತೆ ಹೊತ್ತು ತಂದ ವೆಟ್ರಿಮಾರನ್
ವೆಟ್ರಿಮಾರನ್ ಅವರು ಪ್ರತಿಭಾನ್ವಿತ ನಿರ್ದೇಶಕ. ಅವರ ಬಳಿ ಸಾಕಷ್ಟು ಟ್ಯಾಲೆಂಟ್ ಇದೆ. ಆದರೆ, ಈ ರೀತಿ ಸಿನಿಮಾ ಅರ್ಧಕ್ಕೆ ನಿಲ್ಲುವುದರಿಂದ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಹಿನ್ನಡೆ ಉಂಟಾಗುತ್ತಿದೆ ಎಂದು ಹೇಳಬಹುದು. ಜೊತೆಗೆ, ಸ್ಕ್ರಿಪ್ಟ್ಗಳಿಗೆ ಅವರು ಹಾಕಿದ ಶ್ರಮ ಕೂಡ ಸಾಕಷ್ಟು ವ್ಯರ್ಥವಾಗುತ್ತಿದೆ. ಈ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.