15

Image Credit : our own
ಕಿಡಿಗೇಡಿಗಳ ವಿರುದ್ಧ ಕಿಡಿ
ಸ್ಯಾಂಡಲ್‌ವುಡ್ ನಟಿ, ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು ಹೆಣ್ಣು ಮಕ್ಕಳ ಕೆಟ್ಟ ವೀಡಿಯೋ ಮಾಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದಾರೆ.
25
Image Credit : our own
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಬ್ಯಾಕ್‌ಲೆಸ್ ಡೀಪ್ ಕಟ್ ಗೌನ್ ಧರಿಸಿ ಬಂದಿದ್ದರು. ಅದನ್ನು ಕಿಡಿಗೇಡಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ. ಇದು ವೈರಲ್ ಆಗಿತ್ತು.
35
Image Credit : Instagram
ತರಾಟೆಗೆ ತೆಗೆದುಕೊಂಡ ನಿಶ್ವಿಕಾ
ಇದರಿಂದ ಸಿಟ್ಟಿಗೆದ್ದ ನಟಿ ನಿಶ್ವಿಕಾ ನಾಯ್ಡು ವೀಡಿಯೋ ಹರಿಯಬಿಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಟೀಕೆ ಮಾಡಲು ನಿಮಗೆ ನಾಚಿಕೆಯಾಗಬೇಕು.
45
Image Credit : Instagram
ಯಾವ ಥರ ಬಟ್ಟೆ ಹಾಕಬೇಕು
ಹೆಣ್ಣು ಬೆತ್ತಲೆಯಾಗಿ ನಿಂತಿದ್ದರೂ ಆಕೆಯ ಅನುಮತಿ ಇಲ್ಲದೆ ನೀವು ಅವರನ್ನು ಕಣ್ಣೆತ್ತಿ ನೋಡುವಂತಿಲ್ಲ. ಮಹಿಳೆಯರು ಯಾವ ಥರ ಬಟ್ಟೆ ಹಾಕಬೇಕು ಅನ್ನುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ.
55
Image Credit : Instagram
ಮೊದಲು ಮಾನ ಮುಚ್ಚಿಕೊಳ್ಳಿ
ಪಬ್ಲಿಕ್‌ನಲ್ಲೇ ಜಿಪ್ ಓಪನ್ ಮಾಡಿ ರಾಜಾರೋಷವಾಗಿ ಮೂತ್ರ ವಿಸರ್ಜನೆ ಮಾಡುವ ನೀವು ಮೊದಲು ಮಾನ ಮುಚ್ಚಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಶ್ವಿಕಾ ಅವರ ಮಾತು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.