17

Image Credit : tanisha kuppanda instagram
ಬಿಗ್‌ಬಾಸ್ 10ರ ವರ್ತೂರು ಸಂತೋಷ್
ಬಿಗ್‌ಬಾಸ್ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್ ಒಬ್ಬರು. ನಾಲ್ಕನೆಯ ರನ್ನರ್ ಅಪ್ ಆಗಿ ಹೊರಬಂದವರು ಇವರು. ಆದರೆ ವರ್ತೂರು ಧರಿಸಿದ್ದ ಹುಲಿಯ ಉರುಗಿನ ಪೆಂಡೆಂಟ್ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಬಿಗ್‌ಬಾಸ್ 10ರ ಟಿಆರ್ಪಿ ಕೂಡ ಹೆಚ್ಚಿಸಿದ್ದವರಲ್ಲಿ ಇವರೂ ಒಬ್ಬರಾಗಿದ್ದರು! ಕಾನೂನು ಮೀರಿ ಹುಲಿಯ ಉಗುರು ಧರಿಸಿದ್ದು ಗಲಾಟೆಗೆ ಕಾರಣವಾಗಿ ಕೊನೆಗೆ ಏನೇನೋ ತಿರುವುಗಳನ್ನೂ ಪಡೆದುಕೊಂಡು ಜೈಲಿಗೂ ಹೋಗಿ ಬಂದರು ವರ್ತೂರು.
27
Image Credit : tanisha kuppanda instagram
ವೈಯಕ್ತಿಕವಾಗಿಯೂ ಚರ್ಚೆ
ವರ್ತೂರು ಫೇಮಸ್ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.
37
Image Credit : our own
ವಿವಾದದಲ್ಲಿ ವರ್ತೂರು
ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.
47
Image Credit : our own
ಬಿಗ್‌ಬಾಸ್ 12ರ ರನ್ನರ್ ಅಪ್‌ಗೆ ಗಿಫ್ಟ್
ಈ ಬಾರಿಯ ಬಿಗ್ಬಾಸ್ನ ಅರ್ಥಾತ್ ಬಿಗ್‌ಬಾಸ್ 12ನೇ ಸಂಚಿಕೆಯ ರನ್ನರ್ ಅಪ್‌ಗೆ 10 ಲಕ್ಷ ಘೋಷಣೆಯನ್ನು ಇದಾಗಲೇ ವರ್ತೂರು ಸಂತೋಷ್ ಮಾಡಿದ್ದಾರೆ. ಆದರೆ ಇದೀಗ ಅದಕ್ಕೊಂದು ಷರತ್ತನ್ನೂ ವಿಧಿಸಿದ್ದಾರೆ. ಅದೇನೆಂದರೆ, 2ನೇ ರನ್ನರ್ ಅಪ್‌ಗೆ ತಾವು ಈ ಬಹುಮಾನವನ್ನು ಕೊಡುವುದಾಗಿ ವರ್ತೂರು ಹೇಳಿದ್ದಾರೆ.
57
Image Credit : our own
ವರ್ತೂರು ಹೇಳಿದ್ದೇನು?
ಯಶಸ್ ಟಾಕೀಸ್ ಚಾನೆಲ್ನಲ್ಲಿ ಮಾತನಾಡಿರುವ ವರ್ತೂರು ಸಂತೋಷ್ (Bigg Boss varthur santhosh), ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ 2ನೇ ರನ್ನರ್ ಅಪ್‌ಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ ಎಂದಿದ್ದಾರೆ.
67
Image Credit : Instagram
ಷರತ್ತೇನು?
ಆದರೆ ಇದಕ್ಕೊಂದು ಷರತ್ತನ್ನೂ ಅವರು ವಿಧಿಸಿದ್ದಾರೆ. ಅದೇನೆಂದರೆ, ಬಿಗ್‌ಬಾಸ್ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿಯೇ 2ನೇ ರನ್ನರ್ ಅಪ್‌ಗೆ ಹಣವನ್ನು ನೀಡುತ್ತೇನೆ. ಒಂದು ವೇಳೆ ಬಿಗ್‌ಬಾಸ್ ವೇದಿಕೆ ಮೇಲೆ ನನ್ನನ್ನು ಕರೆದಿಲ್ಲ ಎಂತಾದರೆ, ರನ್ನರ್ ಅಪ್‌ಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎನ್ನುವ ಮೂಲಕ, ವೇದಿಕೆಯ ಮೇಲೆ ಕರೆದರಷ್ಟೇ ಹಣವನ್ನು ಕೊಡುವುದಾಗಿ ಹೇಳಿದ್ದಾರೆ.
77
Image Credit : our own
ನೆಟ್ಟಿಗರ ಅಸಮಾಧಾನ
Bigg Bossನಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಸಾಕಷ್ಟು ಹಣವನ್ನು ನೀಡುತ್ತಾರೆ, ಜೊತೆಗೆ ಅವರಿಗೆ ಹಲವು ಸೌಲಭ್ಯಗಳೂ ಸಿಗುತ್ತವೆ. ಹಾಗಿರುವಾಗ ಪ್ರಚಾರಕ್ಕಾಗಿ ಹೀಗೆ ಮಾಡುವ ಬದಲು ಅದೇ 10 ಲಕ್ಷ ರೂಪಾಯಿಗಳನ್ನು ಬಡವರ ಮಕ್ಕಳ ಶಿಕ್ಷಣಕ್ಕೋ ಅಥವಾ ಇನ್ನಾವುದಕ್ಕಾದರೂ ಕೊಟ್ಟು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಹಲವು ಕಮೆಂಟಿಗರು ತಿಳಿಸಿದ್ದಾರೆ. ಇಂಥ ಕೆಲಸ ಮಾಡಿದರೆ ಪುಣ್ಯ ಬರುತ್ತದೆ, ಅದನ್ನು ಬಿಟ್ಟು ಹಣ ಗಳಿಸುವವರಿಗೇ ಮತ್ತೆ ಹಣ ಕೊಡುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.