ಸಹ ಸ್ಪರ್ಧಿಯ ಬಗ್ಗೆ ಸಂಜನಾ ಹೇಳಿಕೆ, ಒಡೆದು ಇಬ್ಭಾಗವಾದ ಬಿಗ್​​ಬಾಸ್ ಮನೆ

ಸಹ ಸ್ಪರ್ಧಿಯ ಬಗ್ಗೆ ಸಂಜನಾ ಹೇಳಿಕೆ, ಒಡೆದು ಇಬ್ಭಾಗವಾದ ಬಿಗ್​​ಬಾಸ್ ಮನೆ


ಸಂಜನಾ ಗಲ್ರಾನಿ (ಸಂಜನಾ ಗಲ್ರಾನಿ) ಬಿಗ್ಬಾಸ್ ತೆಲುಗು ಸೀಸನ್ 9 ರಲ್ಲಿ ಸ್ಪರ್ಧಿಯಾಗಿದ್ದಾರೆ. ಆರಂಭದಲ್ಲಿ ಕೇವಲ 19ನೇ ದಿನಕ್ಕೆ ಸಹ ಸ್ಪರ್ಧಿಗಳಿಂದ ಎಲಿಮಿನೇಟ್ ಆಗಿದ್ದ ಸಂಜನಾ, ಕೇವಲ ಒಂದೇ ದಿನಕ್ಕೆ ವಾಪಸ್ಸಾದರು. ಕಳೆದ 11 ವಾರದಿಂದಲೂ ಮನೆಯಲ್ಲಿರುವ ಸಂಜನಾ ಗಲ್ರಾನಿ ತಮ್ಮ ಭಿನ್ನ ರೀತಿಯ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ತಮಾಷೆಯ ಜೊತೆಗೆ ಜಗಳ ಮಾಡುತ್ತಾ, ಪರಸ್ಪರರ ಬಗ್ಗೆ ದೂರುಗಳನ್ನು ಹೇಳುತ್ತಾ, ಟಾಸ್ಕ್ ಆಡುತ್ತಾ ಬರುತ್ತಿದ್ದಾರೆ ಸಂಜನಾ. ಬಿಗ್ಬಾಸ್ ಮನೆಯಲ್ಲಿ ಫಿಲ್ಟರ್ ಇಲ್ಲದೆ ಮಾತನಾಡುವ ಸಂಜನಾ ಗಲ್ರಾನಿ, ಇದೀಗ ಸಹ ಸ್ಪರ್ಧಿಗಳ ಬಗ್ಗೆ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ನಾಮನಿರ್ದೇಶನದ ವೇಳೆ ಸಂಜನಾ, ಸಹ ಸ್ಪರ್ಧಿ ರೀತು ಹಾಗೂ ಡೀಮನ್ ಪವನ್ ಬಗ್ಗೆ ಡ್ಯಾಮೆಜಿಂಗ್ ಹೇಳಿಕೆ ನೀಡಿದ್ದಾರೆ. ರಿತು ಮತ್ತು ನಾಮಿನೇಟ್ ಮಾಡುವಾಗ, ‘ರೀತು ಮತ್ತು ಡಿಮನ್ ಪವನ್ ರಾತ್ರಿ ಏನೇನು ಮಾಡುತ್ತಾರೆ ಎಂಬುದು ಗೊತ್ತಿದೆ. ಅವರು ಮಾಡುವುದನ್ನು ನನ್ನ ಕಣ್ಣಿನಿಂದ ನೋಡಲು ಸಹ ಆಗದು, ಅದನ್ನು ಬಾಯಿ ಬಿಟ್ಟು ಹೇಳಲು ಸಹ ಆಗದು, ಕೊಳಕಾಗಿ ಅವರು ವರ್ತಿಸುತ್ತಾರೆ’ ಎಂದೆಲ್ಲ ಸಂಜನಾ ಗಲ್ರಾನಿ ಹೇಳಿದರು.

ಇದರಿಂದ ರೀತು ಮತ್ತು ಡಿಮನ್ ಪವನ್ ಸಂಜನಾ ಮೇಲೆ ಉರಿದು ಬಿದ್ದಿದ್ದಾರೆ. ಕೆಲ ಮನೆ ಮಂದಿ ಸಹ ಸಂಜನಾರ ಹೇಳಿಕೆ ವಿರುದ್ಧ ಮಾತನಾಡಿದ್ದಾರೆ. ಸಂಜನಾ ಹೇಳಿಕೆ ಕುರಿತು ಮನೆಯಲ್ಲಿ ಜೋರಾದ ಜಗಳ ನಡೆದಿದೆ. ಕೆಲ ಮನೆ ಮಂದಿ, ಸಂಜನಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಸಂಜನಾಗೆ ಆತ್ಮೀಯರಾಗಿರುವವರು ಸಹ ಸಂಜನಾ ಬಳಿ, ಹೇಳಿಕೆ ಹಿಂಪಡೆಯುವಂತೆ ಕೇಳಿ ಕೊಂಡಿದ್ದಾರೆ. ಆದರೆ ಸಂಜನಾ, ತಾನು ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಪ್ರೇಕ್ಷಕರಿಗೆ ಸ್ಪರ್ಧಿಗಳ ಕುಟುಂಬಕ್ಕೂ ಸಂಜನಾ ಫೇವರೇಟ್

ಇದೀಗ ಈ ವಿವಾದ ವೀಕೆಂಡ್ ಎಪಿಸೋಡ್ ನಲ್ಲೇ ಬಗೆಹರಿಯಲಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಸಂಜನಾ ಅವರು ರೀತು ಮತ್ತು ಪವನ್ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಯಿದೆ.

ಕನ್ನಡ ಬಿಗ್‌ಬಾಸ್ ಮೊದಲ ಸೀಸನ್ ನಡೆದಾಗ ಸಂಜನಾ ಗಲ್ರಾನಿ ಆ ಶೋನ ಸ್ಪರ್ಧಿಯಾಗಿ ಭಾಗಿ ಆಗಿದ್ದರು. ಅದಾದ ಬಳಿಕ ಈಗ 9ನೇ ಸೀಸನ್ ನಲ್ಲಿ ತೆಲುಗು ಬಿಗ್ಬಾಸ್ ನಲ್ಲಿ ಸ್ಪರ್ಧಿಯಾಗಿದ್ದಾರೆ. ಅಂದಹಾಗೆ ಸಂಜನಾ ಮಾತ್ರವೇ ಅಲ್ಲದೆ, ಮತ್ತೊಬ್ಬ ಕನ್ನಡತಿಯೂ ಬಿಗ್ಬಾಸ್ ಮನೆಯಲ್ಲಿದ್ದಾರೆ. ತನುಜಾ ಪುಟ್ಟಸ್ವಾಮಿ ಅವರು ತೆಲುಗು ಬಿಗ್ಬಾಸ್ ನಲ್ಲಿದ್ದು, ಅವರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಅವರು ಫಿನಾಲೆಗೆ ಹೋಗುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *