ಬ್ಯಾಂಕ್​ಗಳ​ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್​; ಹಣ, ಬಂಗಾರ ಸೀಜ್​

ಬ್ಯಾಂಕ್​ಗಳ​ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್​; ಹಣ, ಬಂಗಾರ ಸೀಜ್​


ಪೊಲೀಸರು ವಶಪಡಿಸಿಕೊಂಡಿರುವ ಹಣ ಮತ್ತು ಬಂಗಾರ.

ಬಾಗಲಕೋಟೆ/ ಬೆಂಗಳೂರು, ನವೆಂಬರ್ 25: ಕಾಕನೂರು ಗ್ರಾಮದಲ್ಲಿ ಎಸ್ ಬಿಐ ದರೋಡೆ ಮತ್ತು ಕುಳಗೇರಿ ವೀರಪುಲಿಕೇಶಿ ಬ್ಯಾಂಕ್ ಕಳ್ಳತನ ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಪ್ರದೇಶದ ಕಕ್ರಾಳ ಗ್ರಾಮದ ಮಹಮ್ಮದ ನವಾನ್ ಹಾಗೂ ಕಮರುಲ್ಖಾನ್ ಬಂಧಿತ ಆರೋಪಿಗಳಾಗಿದ್ದು, ಹಣ ಮತ್ತು ಆಭರಣವನ್ನು ಜಪ್ತಿ ಮಾಡಲಾಯಿತು.

2025ರ ಸೆಪ್ಟಂಬರ್ 2 ರಂದು ಕಾಕನೂರು ಗ್ರಾಮದಲ್ಲಿ ಎಸ್ ಬಿಐ ದರೋಡೆ ನಡೆದಿತ್ತು.ಗ್ಯಾಸ್ ಕಟರದಿಂದ ಲಾಕರ್ ಮುರಿದು, ಚಿನ್ನಾಭರಣ ಕದ್ದು ಊವರ ಗ್ಯಾಂಗ್ ಎಸ್ಕೇಪ್ ಆಗುತ್ತಿದೆ. ಸಿಸಿ ಕ್ಯಾಮರಾಗಳಿಗೆ ಬ್ಲ್ಯಾಕ್ ಸ್ಪ್ರೇ ಹೊಡೆದು, ವೈರ್ ಕಟ್ ಮಾಡಿ ಆರೋಪಿಗಳು ಚಾಲಾಕಿತನ ಮೆರೆದಿದ್ದರು. ಕುಳಗೇರಿಯ ವೀರಪುಲಿಕೇಶಿ ಬ್ಯಾಂಕ್ ನಲ್ಲೂ ದರೋಡೆ ನಡೆದಿತ್ತು. ಪ್ರಕರಣಗಳ ಸಂಬಂಧ 1,55,000 ರೂ. ನಗದು ಸೇರಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ಬಾದಾಮಿ ಹಾಗೂ ಕೆರೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 7.11 ಕೋಟಿ ದರೋಡೆ ಕೇಸ್; ಮತ್ತೆ 42 ಲಕ್ಷ ರೂ. ಜಪ್ತಿ, ಈವರೆಗೆ ಕವರಿಯಾದ ಹಣವೆಷ್ಟು?

23 ಕೆಜಿ ಬೆಳ್ಳಿ ಕದ್ದ ಕಳ್ಳ ಒಂದೇ ಗಂಟೆಯಲ್ಲಿ ಅರೆಸ್ಟ್

Bng ಬೆಳ್ಳಿ ಕಳ್ಳತನ

ಆಯಾಜಿ ಚೌಧರಿ

23 ಕೆಜಿ ಬೆಳ್ಳಿ ಕದ್ದಿದ್ದ ಖತರ್ನಾಕ್ ಕಳ್ಳನನ್ನು ಒಂದು ಗಂಟೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಯಾಜಿ ಚೌಧರಿ (43) ಬಂಧಿತ ಆರೋಪಿ ಸಿಕ್ಕಿಬಿದ್ದ, ನವೆಂಬರ್ 23 ರಂದು ಸಂಜೆ 7 ಗಂಟೆ ಸುಮಾರಿಗೆ ಕಳ್ಳತನಿತ್ತು. ಕೆಲಸಗಾರ ಆ್ಯಕ್ಟೀವಾದಲ್ಲಿ ಬೆಳ್ಳಿ ತರುತ್ತಿದ್ದ ವೇಳೆ ಆರೋಪಿ ಬೆಳ್ಳಿ ಕದ್ದು ಎಸ್ಕೇಪ್ ಆಗಿದ್ದ. ಸಿಬ್ಬಂದಿ ಆಯಕ್ಟೀವಾ ಡಿಕ್ಕಿಯಲ್ಲಿ ಮತ್ತು ಮುಂಭಾಗ ಇಟ್ಟಿದ್ದ ಬ್ಯಾಗ್‌ಗಳ ಮೇಲ್ಗಡೆ ಮುಂಭಾಗವಿದ್ದ ಬ್ಯಾಗ್‌ನಲ್ಲಿ 36 ಲಕ್ಷ ಮೌಲ್ಯದ 23 ಕೆ.ಜಿ. ಬೆಳ್ಳಿ ಕದ್ದು ಆಜಿಯಾ ಪರಾರಿ. ವೇಳೆ ಆರೋಪಿ ಕಾಟನ್ ಪೇಟೆ ಠಾಣೆ ರೌಡಿಶೀಟರ್, ಈತನ ಮೇಲೆ 50 ಪ್ರಕರಣಗಳಿವೆ ಅನ್ನೋದು ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:37 pm, ಮಂಗಳವಾರ, 25 ನವೆಂಬರ್ 25



Source link

Leave a Reply

Your email address will not be published. Required fields are marked *