Headlines

ಎಲ್ಲರಿಗೂ ಸ್ವಂತ ಮನೆ, ಕಾರು, ಬೈಕು: ದಳಪತಿ ವಿಜಯ್ ಭರವಸೆ

ಎಲ್ಲರಿಗೂ ಸ್ವಂತ ಮನೆ, ಕಾರು, ಬೈಕು: ದಳಪತಿ ವಿಜಯ್ ಭರವಸೆ


ದಳಪತಿ ವಿಜಯ್ (ತಲಪತಿ ವಿಜಯ್) ತಮಿಳುನಾಡಿನ ಸ್ಟಾರ್ ನಟ. ಅವರ ಸಿನಿಮಾಗಳು ಮೊದಲ ದಿನವೇ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತವೆ. ವಿಜಯ್ ಅವರ ಕೆಟ್ಟ ಸಿನಿಮಾಗಳೂ ಸಹ 200 ರಿಂದ 300 ಕೋಟಿ ಗಳಿಸುತ್ತವೆ. ಆದರೆ ವಿಜಯ್ ಅವರು ಇದೀಗ ಸಿನಿಮಾಕ್ಕೆ ಗುಡ್‌ಬೈ ಹೇಳಿದ್ದಾರೆ. ಈಗ ಅವರು ನಟಿಸುತ್ತಿರುವ ‘ಜನ ನಾಯಕನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಿದ್ದು, ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಅದಕ್ಕಾಗಿ ಅವರು ಜನರಿಗೆ ಭರ್ಜರಿ ಭರವಸೆಯನ್ನೇ ನೀಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿರುವ ತಮ್ಮ ವಿಜಯ್ ಅವರು ಇತ್ತೀಚೆಗೆ ಮಾತನಾಡುತ್ತಾ ತಮಿಳಗ ವೆಟ್ರಿ ಕಳಗಂ ಪಕ್ಷದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪ್ರಣಾಳಿಕೆಯನ್ನು ತಯಾರು ಮಾಡುತ್ತಿದ್ದಾರೆ ಮುಂದಿನ ವರ್ಷ ಅದನ್ನು ಬಿಡುಗಡೆ ಮಾಡುವುದಾಗಿ ವಿಜಯ್ ಹೇಳಿದರು. ಆದರೆ ಕೆಲವು ಪ್ರಣಾಳಿಕೆಯಲ್ಲಿ ಇರಬಹುದಾದ ವಿಷಯಗಳನ್ನು ಪ್ರಸ್ತಾಪಿಸಿ ಅವರು ಹಂಚಿಕೊಂಡರು.

‘ನಾವು ಅಧಿಕಾರಕ್ಕೆ ಬಂದರೆ, ಖಂಡಿತ ಬರುತ್ತೇವೆ, ಜನ, ಜನರಿಗಾಗಿ ನಮ್ಮನ್ನು ಅಧಿಕಾರಕ್ಕೆ ತರಲಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದರೆಲ್ಲ ಪ್ರಣಾಳಿಕೆಯಲ್ಲಿ ನಾವು ವಿವರಿಸಲಿದ್ದೇವೆ ಆದರೆ ಅದಕ್ಕೆ ಮುಂಚಿತವಾಗಿಯೇ ಕೆಲವು ವಿಷಯಗಳನ್ನು ನಾನು ಜನರ ಮುಂದಿಡಲು ಬಯಸುತ್ತೇನೆ. ನಾವು ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೂ ಇರಲು ಮನೆ ಹಾಗೂ ಆ ಮೋಟಾರ್ ಬೈಕ್ ಮನೆಯಲ್ಲಿರುವಂತೆ ಮಾಡುತ್ತೇವೆ. ಕಾರು ನೀಡುವ ಗುರಿಯನ್ನೂ ಸಹ ನಾವು ಹೊಂದಿದ್ದೇವೆ’ ವಿಜಯ್.

ಇದನ್ನೂ ಓದಿ:ನಟ, ರಾಜಕಾರಣಿ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ

ಮುಂದುವರೆದು, ‘ಪ್ರತಿ ಮಗುವು ಶಿಕ್ಷಿತರಾಗಬೇಕು, ಕನಿಷ್ಠ ಪದವಿಯವರೆಗೆ ಅವರು ಓದಬೇಕು, ಜೊತೆಗೆ ಪ್ರತಿ ಮನೆಯಲ್ಲಿ ವ್ಯಕ್ತಿಯಾದರೂ ಗ್ಯಾರೆಂಟಿ ಒಬ್ಬರಿಗೆ ಆದಾಯವನ್ನು ಹೊಂದಿರುತ್ತಾರೆ. ಉದ್ಯೋಗ ಸೃಷ್ಟಿ ನಡೆಯಲಿದೆ. ಸರ್ಕಾರಿ ಆಸ್ಪತ್ರೆಗಳ ಚಿತ್ರವನ್ನು ಬದಲಾಯಿಸುತ್ತೇವೆ. ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬುವಂತೆ’ ಎಂದು ವಿಜಯ್ ಭರವಸೆ ನೀಡಿದ್ದಾರೆ.

ವಿಜಯ್ ಅವರು ತಮಿಳುನಾಡು ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿದ್ದು, ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಆರಂಭಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ವಿಜಯ್ ಅವರು ಕರೂರಿನಲ್ಲಿ ಪ್ರಚಾರ ಮಾಡುವಾಗ ಕಾಲ್ತುಳಿತ ನಡೆದಿದ್ದು, ಸುಮಾರು 41 ಮಂದಿ ನಿಧನ ಹೊಂದಿದ್ದರು. ಇದು ವಿಜಯ್ ಅವರ ಪ್ರಚಾರಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *