ರಸ್ತೆಗುಂಡಿ ತಪ್ಪಿಸಲು ಹೋಗಿ ಆನೇಕಲ್​​ ಬಳಿ ಕೆರೆಗೆ ಬಿದ್ದ ಲಾರಿ: ಮುಂದಾಗಿದ್ದು ದುರಂತ

ರಸ್ತೆಗುಂಡಿ ತಪ್ಪಿಸಲು ಹೋಗಿ ಆನೇಕಲ್​​ ಬಳಿ ಕೆರೆಗೆ ಬಿದ್ದ ಲಾರಿ: ಮುಂದಾಗಿದ್ದು ದುರಂತ


ಆನೇಕಲ್, ನವೆಂಬರ್ 25: ರಸ್ತೆ ಗುಂಡಿ ತಡೆ ಹೋದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕೆರೆಗೆ ಬಿದ್ದ ಘಟನೆ ಆನೇಕಲ್ ಅತ್ತಿಬೆಲೆ-ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆ ಬಳಿ ನಡೆದಿದೆ. ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಮೃತಪಟ್ಟಿದ್ದಾರೆ. ಕ್ರೇನ್ ಸಹಾಯದಿಂದ ಲಾರಿ ಮತ್ತು ಚಾಲಕನ ಮೃತ ದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.

ಜಲ್ಲಿ ತುಂಬಿಕೊಂಡು ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ 12 ಚಕ್ರದ ಲಾರಿ ತೆರಳುತ್ತಿರುವ ವೇಳೆ ಚಾಲಕ ಮಹೇಶ್ ರಸ್ತೆಗುಂಡಿ ತಪ್ಪಿಸಿದ್ದಾರೆ. ಈ ವೇಳೆ ಲಾರಿ ನಿಯಂತ್ರಣ ಕಳೆದುಕೊಂಡಿದ್ದು, ಚಾಲಕನ ಸಮೇತ ರಸ್ತೆ ಪಕ್ಕದ ಕೆರೆಗೆ ಉರುಳಿದೆ. ಕೆರೆ ಏರಿಮೇಲಿರುವ ರಸ್ತೆ ಬಹಳ ಕಿರಿದಾಗಿರುವ ಜೊತೆಗೆ, ರಸ್ತೆಯ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. RNS ಕಂಪನಿಗೆ ರಸ್ತೆ ಅಭಿವೃದ್ಧಿಯ ಟೆಂಡರ್ ನೀಡುತ್ತಿದೆ, ಕಂಪನಿ ಕೆರೆ ಏರಿ ಮೇಲಿನ ರಸ್ತೆ ವಿಸ್ತರಣೆ ಮಾಡದೆ ಹಾಗೆಯೇ ಬಿಟ್ಟಿದೆ. ಜೊತೆಗೆ ಇರುವ ಕಿರಿದಾದ ರಸ್ತೆಯೂ ಹೊಂಡಗಳಿಂದ ಕೂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ಎರಡು ಕ್ರೇನ್‌ಗಳನ್ನು ಬಳಸಿ ಕೆರೆಯಲ್ಲಿ ಮುಳುಗಿದ್ದ ಲಾರಿ ಮತ್ತು ಚಾಲಕನ ಮೃತ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡ, ಪೊಲೀಸರ ಕಾರ್ಯಾಚರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು, ಮೃತರನ್ನು ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ತಲ್ವಾರ್ ದಾಳಿ ಮಾಡಿ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ ನೋಡಿ! ಇಲ್ಲಿದೆ ವಿಡಿಯೋ

ಕಳೆದ ವರ್ಷ ನಡೆದಿತ್ತು ಬಸ್ ಅಪಘಾತ

ಅತ್ತಿಬೆಲೆ-ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆಯ ಕೆರೆ ಏರಿ ಬಳಿ ಕಿರಿದಾದ ರಸ್ತೆಯಿಂದಾಗಿ ಅಪಘಾತಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಕಳೆದ ಒಂದು ವರ್ಷದ ಹಿಂದೆಯೂ ಇಲ್ಲಿ ಅಪಘಾತ ನಡೆದಿತ್ತು. ಕೆರೆಯ ಏರಿಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದು, 18 ಜನ ಶಕ್ತಿ ಮಾಲಾಧಾರಿಗಳು ಸಂಭವಿಸಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಈಗ ಮತ್ತೊಂದು ಅವಘಡ ಸಂಭವಿಸಿದ್ದು ಮತ್ತೊಂದು ಮಾತುನ ಸಾವಾಗಿದೆ ಎಂಬುದು ಸ್ಥಳೀಯರ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *