ಎಂ ಎಸ್ ಧೋನಿ: ರೈಲ್ವೇ ಟಿಟಿಇಯಿಂದ ಕೋಟ್ಯಾಧಿಪತಿಗೆ! ಕ್ಯಾಪ್ಟನ್ ಕೂಲ್ ಹೆಜ್ಜೆಗುರುತು

ಎಂ ಎಸ್ ಧೋನಿ: ರೈಲ್ವೇ ಟಿಟಿಇಯಿಂದ ಕೋಟ್ಯಾಧಿಪತಿಗೆ! ಕ್ಯಾಪ್ಟನ್ ಕೂಲ್ ಹೆಜ್ಜೆಗುರುತು

ಮಹೇಂದ್ರ ಸಿಂಗ್ ಧೋನಿ. ಈ ಹೆಸರೇ ಒಂದು ಅದ್ಭುತ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಧೋನಿ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಒಂದು ಆಸಕ್ತಿಕರ ಲೇಖನ ನಿಮಗಾಗಿ.

ಧೋನಿ ಟೀಂ ಇಂಡಿಯಾ ಕ್ರಿಕೆಟಿಗನಾಗು  ಮೊದಲು ಭಾರತೀಯ ರೈಲ್ವೇಯಲ್ಲಿ ಟ್ರೈನ್ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಧೋನಿ ಭಾರತದ ಮನೆ ಮಾತಾಗಿದ್ದಾರೆ.

ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್‌ಗಳಿಂದ ರಂಜಿಸುವ ಧೋನಿಗೆ ಕಾರು, ಬೈಕುಗಳೆಂದರೆ ಪಂಚಪ್ರಾಣ. ಇವುಗಳಿಗಾಗಿ ಪ್ರತ್ಯೇಕ ಗ್ಯಾರೇಜನ್ನೇ ನಿರ್ಮಿಸಿಕೊಂಡಿದ್ದಾರೆಂದರೆ ಧೋನಿಯವರ ಆಸಕ್ತಿ ಎಷ್ಟೆಂದು ಅರ್ಥ ಮಾಡಿಕೊಳ್ಳಬಹುದು.

ಅವರ ಬಳಿ ಸುಮಾರು 70ಕ್ಕೂ ಹೆಚ್ಚು ಬೈಕುಗಳು, 15 ಐಷಾರಾಮಿ ಕಾರುಗಳಿವೆ. ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ.ಗಳಿಗೂ ಹೆಚ್ಚು. ಧೋನಿ ಸಂಗ್ರಹದಲ್ಲಿ ಸೂಪರ್ ಕಾರುಗಳಿಂದ ಹಿಡಿದು ಅಪರೂಪದ ಬೈಕುಗಳವರೆಗೆ ಎಲ್ಲವೂ ಇವೆ.
ಅಮೇರಿಕನ್ ಕ್ಲಾಸಿಕ್ ಬೈಕ್ ಆದ ಫ್ಯಾಟ್ ಬಾಬ್, ಧೋನಿ ಅಚ್ಚುಮೆಚ್ಚಿನ ಬೈಕುಗಳಲ್ಲಿ ಒಂದು. ಬೆಲೆ ಸುಮಾರು 14 ಲಕ್ಷ ರೂ.ಧೋನಿ ಗ್ಯಾರೇಜ್‌ನಲ್ಲಿರುವ ಮತ್ತೊಂದು ಸೂಪರ್ ಕಾರು ಹಮ್ಮರ್ H2. ಈ ಕಾರಿನ ಬೆಲೆ ಸುಮಾರು 70 ಲಕ್ಷ ರೂ.ಈ ಹೈಪರ್ ಬೈಕ್ 300 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಈ ಬೈಕ್ ಬೆಲೆ ಸುಮಾರು 23 ಲಕ್ಷ ರೂ.ಪ್ರಪಂಚದ ಅಪರೂಪದ ಬೈಕುಗಳಲ್ಲಿ ಇದೂ ಒಂದು. ಬೆಲೆ ಸುಮಾರು 50 ಲಕ್ಷ ರೂ.ಇಟಲಿಯ ಈ ಸ್ಪೋರ್ಟ್ಸ್ ಕಾರು ಧೋನಿ ಗ್ಯಾರೇಜ್‌ನಲ್ಲಿ ವಿಶೇಷ ಸ್ಥಾನ ಪಡೆದಿದೆ. ಬೆಲೆ ಸುಮಾರು 6 ಕೋಟಿ ರೂ.

Source link

Leave a Reply

Your email address will not be published. Required fields are marked *