ಥೈಲ್ಯಾಂಡ್ನಲ್ಲಿ (ಮಹಿಳೆ ಶವಪೆಟ್ಟಿಗೆಯನ್ನು ಎಚ್ಚರಗೊಳಿಸುತ್ತಾಳೆ) ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳಲ್ಲಿ ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿವೆ. ಈ ಘಟನೆ ಬ್ಯಾಂಕಾಕ್ನ ಹೊರವಲಯದಲ್ಲಿರುವ ನೊಂಥಬುರಿ ಪ್ರಾಂತ್ಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್ನಲ್ಲಿ ನಡೆದಿದೆ. ಪಿಕಾಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿರುವ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಮಹಿಳೆಯ ತೋಳುಗಳು ಮತ್ತು ತಲೆ ಸ್ವಲ್ಪ ಅಲುಗಾಡಿದೆ ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ.
ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್ಥೂಪ್ ಸೋಮವಾರ ಎಪಿಪಿ ನೀಡಿದ ಮಾಹಿತಿ ಪ್ರಕಾರ, “ಅರವತ್ತೈದು ವರ್ಷದ ಮಹಿಳೆಯ ಸಹೋದರಿ ಫಿಟ್ಸಾನುಲೋಕ ಪ್ರಾಂತ್ಯದಿಂದ ಅಂತ್ಯಕ್ರಿಯೆಗಾಗಿ ಕರೆತಂದಿದ್ದಾರೆ. ಸಿಬ್ಬಂದಿಗಳು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಶವಪೆಟ್ಟಿಗೆಯಿಂದ ಶಬ್ದ ಬಂದಿದೆ.
ಈ ಮಹಿಳೆ ಸಹೋದರ ಪೈರತ್ ಸೂದ್‌ಥೂಪ್‌ಗೆ ಹೇಳಿರುವ ಪ್ರಕಾರ, ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು, ಮತ್ತು ಎರಡು ದಿನಗಳ ಹಿಂದೆ , ಒಂದು ಪೋಸ್ಟ್ ಇರುವುದನ್ನು ಕಂಡು ಸತ್ತಿದ್ದಾರೆ ಎಂದುಕೊಂಡಿದ್ದರು. ನಂತರ ಮನೆಯಲ್ಲಿ ಕಾರ್ಯ ಎಲ್ಲ ಮಾಡಿ, ಶವಪೆಟ್ಟಿಗೆಯಲ್ಲಿ ತುಂಬಿಸಿಕೊಂಡು ಐದು ನೂರು ಕಿಲೋಮೀಟರ್ ದೂರದಿಂದ ಬ್ಯಾಂಕಾಕ್‌ಗೆ ಕರೆದೊಯ್ದರು. ಇದಕ್ಕೂ ಮೊದಲು ಅಂಗಾಂಗಗಳನ್ನು ದಾನ ಮಾಡಬೇಕು ಎಂಬ ಬಯಕೆ ಕೂಡ ಇತ್ತು.ಆದರೆ ಅವರ ಸಹೋದರನ ಬಳಿ ಅಧಿಕೃತ ಮರಣ ಪ್ರಮಾಣಪತ್ರವಿಲ್ಲದ ಕಾರಣ ಆಸ್ಪತ್ರೆಯ ದೇಹವನ್ನು ಸ್ವೀಕರಿಸಲು ನಿರಾಕರಿಸಿತು. ನಂತರ ಅಂತ್ಯಸಂಸ್ಕರಕ್ಕೆ ದೇವಾಲಯಕ್ಕೆ ತಂದಿದ್ದಾರೆ. ಆದರೆ ಅಲ್ಲಿ ಉಚಿತ ಅಂತ್ಯಕ್ರಿಯೆಗೆ ದಾಖಲೆಗಳು ಬೇಕಾಗಿದ್ದವು. ಅಲ್ಲಲ್ಲೂ ಮಹಿಳೆಯ ಅಂತ್ಯಕ್ರಿಯೆಗೆ ನಿರಾಕರಣೆಯಾಗಿತ್ತು. ಕೊನೆಗೆ ದೇವಾಲಯದಲ್ಲಿ ಆಡಳಿತ ಮಂಡಳಿಯಲ್ಲಿ ಮಾತನಾಡಿ, ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವೇಳೆ ಮಹಿಳೆ ಇದ್ದ ಶವಪೆಟ್ಟಿಗೆಯಿಂದ ಶಬ್ದ ಕೇಳಿ ಬಂದಿದೆ.
ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬೇಸತ್ತು ದಯಾಮರಣಕ್ಕೆ ಮುಂದಾದ 25 ವರ್ಷದ ಯುವತಿ
ನಂತರ ದೇವಾಲಯದ ಸಹಾಯದಿಂದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಅತ್ಯಂತ ಬಡವರಾಗಿದ್ದರೆ, ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದೇವಾಲಯವು ಭರಿಸುವುದಾಗಿ ದೇವಾಲಯದ ಮಠಾಧೀಶರು ಭರವಸೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ