ಬಿಗ್ ಬಾಸ್ ಮನೆ ಗಿಲ್ಲಿ ನಟ (ಗಿಲ್ಲಿ ನಟ) ಮತ್ತು ಅಶ್ವಿನಿ ಗೌಡ ನಡುವೆ ಜಗಳ ಆಗುತ್ತಿದೆ. ಅದರಿಂದ ಗಿಲ್ಲಿಗೆ ಲಾಭ ಆಗಿದ್ದೇ ಹೆಚ್ಚು. ಅಶ್ವಿನಿ ಗೌಡ ಅವರು ವುಮನ್ ಕಾರ್ಡ್ ಪ್ಲೇ ಮಾಡಲು ಹೋಗಿ ವಿಫಲರಾದರು. ವಾರಾಂತ್ಯದಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಅದರ ಪರಿಣಾಮವಾಗಿ ಅಶ್ವಿನಿ ಗೌಡ (ಎಶ್ವಿನಿ ಗೌಡ) ಅವರು ಈಗ ಸೈಲೆಂಟ್ ಆಗಿದ್ದಾರೆ. ಈಗ ಅವರು ಸೈಲೆಂಟ್ ಆಗಿರುವುದರಿಂದ ಗಿಲ್ಲಿಗೆ ತೊಂದರೆಯಾಗಿದೆ ಎಂದು ಧನುಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಕಾವ್ಯ ಜೊತೆ ಕುಳಿತು ಮಾತನಾಡಿದ್ದಾರೆ. ‘ಗಿಲ್ಲಿಗೆ ಈಗ ಕಂಟೆಂಟ್ ಸಿಗುತ್ತಿಲ್ಲ. ಅವನಿಗೆ ಕಡಿಯಲು ಏನಾದರೂ ಬೇಕು. ಅಶ್ವಿನಿ ಮೇಡಂ ಸೈಲೆಂಟ್ ಆಗಿರುವುದರಿಂದ ಗಿಲ್ಲಿಗೆ ಸಮಸ್ಯೆಯಾಗಿದೆ. ಅದು ನನ್ನ ಕಣ್ಣಿಗೆ ಎದ್ದು ಕಾಣುತ್ತಿದೆ. ಅಶ್ವಿನಿ ಮೇಡಂ ಇದ್ದರೆ ಗಿಲ್ಲಿಗೆ ಮೈಲೇಜ್’ ಎಂದು ಧನುಷ್ ಹೇಳಿದ್ದಾರೆ. ಈ ಮಾತಿಗೆ ಕಾವ್ಯ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆಂದು ತಿಳಿಯಲು ನವೆಂಬರ್ 25 ರ ಸಂಚಿಕೆ ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.