Family Man Season 3: ಪ್ರಿಯಾಮಣಿಗೆ 7 ಕೋಟಿ, ಮನೋಜ್ ಬಾಜಪೇಯಿ ಸಂಭಾವನೆ ಇಷ್ಟೊಂದಾ?

Family Man Season 3: ಪ್ರಿಯಾಮಣಿಗೆ 7 ಕೋಟಿ, ಮನೋಜ್ ಬಾಜಪೇಯಿ ಸಂಭಾವನೆ ಇಷ್ಟೊಂದಾ?

Family Man Season 3: ಪ್ರಿಯಾಮಣಿಗೆ 7 ಕೋಟಿ, ಮನೋಜ್ ಬಾಜಪೇಯಿ ಸಂಭಾವನೆ ಇಷ್ಟೊಂದಾ?

Family Man Season 3: ‘ದಿ ಫ್ಯಾಮಿಲಿ ಮ್ಯಾನ್ 3’ ನವೆಂಬರ್ 21ರಂದು ಬಿಡುಗಡೆಯಾಗಿದ್ದು, ಈಗಾಗಲೇ ಜನರು ಇದನ್ನು ಇಷ್ಟಪಟ್ಟಿದ್ದಾರೆ. ಈ 3ನೇ ಸೀಸನ್ ಗಾಗಿ ನಟ-ನಟಿಯರು ಪಡೆಯುತ್ತಿರುವ ಸಂಭಾವನೆಯ ಬಗ್ಗೆ ಮಾಹಿತಿ ಇಲ್ಲಿದೆ. ಇದರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಮನೋಜ್ ಬಾಜಪೇಯಿ.

ರಾಜ್ & ಡಿಕೆ ಅವರ ಬಹು ನಿರೀಕ್ಷಿತ ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ನವೆಂಬರ್ 21, 2025 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಮನೋಜ್ ಬಾಜಪಯಿ ಅಲ್ಲದೇ ಜೈದೀಪ್ ಅಹ್ಲಾವತ್ ಮತ್ತು ನಿಮ್ರತ್ ಕೌರ್ ಸೀಸನ್ 3 ರಲ್ಲಿ ನಟಿಸಿದ್ದಾರೆ. ಈ ಸೀರೀಸ್ ಗಾಗಿ ನಟರು ಪಡೆದ ಸಂಭಾವನೆ ಎಷ್ಟು ಇಲ್ಲಿದೆ ಮಾಹಿತಿ.

‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಯ ನಾಯಕ ಮನೋಜ್ ಬಾಜಪೇಯಿ ಅವರ ಸಂಭಾವನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಬಿಗ್ ಟಿವಿ ವರದಿಯ ಪ್ರಕಾರ, ದಿ ಫ್ಯಾಮಿಲಿ ಮ್ಯಾನ್‌ಗಾಗಿ ಮನೋಜ್ ಪ್ರತಿ ಸಂಚಿಕೆಗೆ ₹2.25 ಕೋಟಿ ಗಳಿಸಿದ್ದಾರೆ. ಬಾಲಿವುಡ್ ಲೈಫ್ ವರದಿಯ ಪ್ರಕಾರ, ಪೂರ್ತೀ ಸೀರಿಸ್ ಗಾಗಿ ಮನೋಜ್ ₹20.25 ಕೋಟಿಯಿಂದ ₹22.50 ಕೋಟಿಯವರೆಗೆ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಿಯಾಮಣಿ ದಿ ಫ್ಯಾಮಿಲಿ ಮ್ಯಾನ್ ಸೀಸನ್ 1 ರಿಂದ ಮನೋಜ್ ಬಾಜಪೇಯಿ ಅವರ ಪತ್ನಿಯಾಗಿ ನಟಿಸುತ್ತಿದ್ದಾರೆ. ಮನೋಜ್ ಜೊತೆಗೆ, ಪ್ರಿಯಾಮಣಿ ಅವರು ಸುಚಿತ್ರ ತಿವಾರಿ ಪಾತ್ರದಲ್ಲಿ ನಟಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಗಾಗಿ ₹7 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿ, ಜೈದೀಪ್ ಅಹ್ಲಾವತ್ ಕೂಡ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದು, ತಮ್ಮ ಪಾತ್ರಕ್ಕಾಗಿ ಸುಮಾರು 9 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ನಿಮ್ರತ್ ‘ಮೀರಾ ಆಸ್ಟನ್’ ಎಂಬ ಮಹಿಳಾ ಪ್ರತಿಸ್ಪರ್ಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವೆಬ್ ಸೀರೀಸ್ ಗಾಗಿ ನಿಮ್ರತ್ ₹8 ರಿಂದ 9 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

’ಮೇಜರ್ ಸಮೀರ್’ ಎಂಬ ಖಳನಾಯಕನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುವ ದರ್ಶನ್, ನಿಮ್ರತ್ ಗಳಿಸಿದಷ್ಟೇ ಸಂಭಾವನೆ ಪಡೆದಿದ್ದಾರೆಂದು ವರದಿಯಾಗಿದೆ. ಅಂದರೆ ಸುಮಾರು 9 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳ ನೆಚ್ಚಿನ ‘ಜೆಕೆ ತಲ್ಪಡೆ’ ಪಾತ್ರವನ್ನು ಶರೀಬ್ ಹಶ್ಮಿ ನಿರ್ವಹಿಸಿದ್ದಾರೆ, ಇದಕ್ಕಾಗಿ ಶರೀಬ್ ₹5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರು ನಾಲ್ಕನೇ ಸೀಸನ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಸೀಸನ್ 1 ರಿಂದ ಮನೋಜ್ ಮತ್ತು ಪ್ರಿಯಾಮಣಿ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿರುವ ಆಶ್ಲೇಷಾ ಠಾಕೂರ್, 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ‘ಧೃತಿ ತಿವಾರಿ’ ಪಾತ್ರವನ್ನು ಮತ್ತೆ ನಿರ್ವಹಿಸಿದ್ದಾರೆ..

Source link

Leave a Reply

Your email address will not be published. Required fields are marked *