‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ರಿಯಾಲಿಟಿ ಶೋನಲ್ಲಿ ಕಳೆದ ವಾರ ರಿಷಾ ಅವರು ಎಲಿಮಿನೇಟ್ ಆದರು. ಈ ವಾರದ ನಾಮನಿರ್ದೇಶನ (ನಾಮನಿರ್ದೇಶನ) ಪ್ರಕ್ರಿಯೆ ಮುಗಿದಿದೆ. ಧ್ರುವಂತ್, ಅಶ್ವಿನಿ ಗೌಡ, ಜಾಹ್ನವಿ, ಮಾಳು ನಿಪನಾಳ, ಕಾವ್ಯ, ಗಿಲ್ಲಿ ನಟ (ಗಿಲ್ಲಿ ನಟ)ರಘು ಅವರು ನಾಮಿನೇಟ್ ಆಗಿದ್ದಾರೆ. ಹಲವು ಕಾರಣಗಳನ್ನು ನೀಡಿ ಈ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ. ಈ 7 ಜನರ ಮೇಲೆ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ತಿಳಿಯುವ ಕೌತುಕ ಮೂಡಿದೆ. ಜನರಿಂದ ಕಡಿಮೆ ವೋಟ್ ಪಡೆಯುವ ಸ್ಪರ್ಧಿಗೆ ಗೇಟ್ ಪಾಸ್ ಅಗತ್ಯವಿದೆ. ಬಿಗ್ ಬಾಸ್ ಆಟದಲ್ಲಿ 58 ದಿನ ಕಳೆದಿದ್ದು, ಆಟದಲ್ಲಿ ಪೈಪೋಟಿ ಜಾಸ್ತಿ ಆಗಿದೆ.
ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಆ ಕಾರಣದಿಂದ ಅವರು ನಾಮಿನೇಟ್ ಆಗಿದ್ದಾರೆ. ಕಳೆದ ವಾರವೆಲ್ಲ ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡರು. ಹೀಗೆ ಹಲವು ಕಾರಣಗಳನ್ನು ನೀಡಿ ಅವರನ್ನು ಕೂಡ ನಾಮಿನೇಟ್ ಮಾಡಲಾಗಿದೆ. ಕ್ಯಾಪ್ಟನ್ ಅಭಿಷೇಕ್ ಅವರಿಂದ ರಘು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ ಆಟದಲ್ಲಿ ಸಿಕ್ಕಾಪಟ್ಟೆ ಆತ್ವವಿಶ್ವಾಸ ಇದೆ. ಕಾಮಿಡಿ ಮೂಲಕ ವೀಕ್ಷಕರ ಮನ ಗೆಲ್ಲುತ್ತಿರುವ ಅವರಿಗೆ ನಾಮನಿರ್ದೇಶನ ಭಯ ಕಾಡುತ್ತಿಲ್ಲ. ಇತರ ಸ್ಪರ್ಧಿಗಳು ನಾಮಿನೇಟ್ ಆದಾಗ ಬೇಸರ. ಆದರೆ ಗಿಲ್ಲಿ ನಟ ಅವರು ನಗುನಗುತ್ತಲೇ ಈ ಸವಾಲನ್ನು ಸ್ವೀಕರಿಸಿದರು. ಅವರ ಜೊತೆ ಕಾವ್ಯ ಕೂಡ ನಾಮಿನೇಟ್ ಆಗಿದ್ದಾರೆ.
ಮಾಳು ನಿಪನಾಳ ಅವರು ಕ್ಯಾಪ್ಟನ್ ಆಗಿದ್ದಾಗ ಮಾತ್ರ ಆಯಕ್ಟೀವ್ ಆಗಿದ್ದರು. ಇನ್ನುಳಿದ ಸಮಯದಲ್ಲಿ ಅವರು ಎಂದಿನಂತೆ ಸೈಲೆಂಟ್ ಆಗಿದ್ದಾರೆ. ಅವರನ್ನು ಕೂಡ ನಾಮಿನೇಟ್ ಮಾಡಲಾಗಿದೆ. ಇಷ್ಟು ಜನರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಗೌಡ ಅವರು ಆಟದ ಶೈಲಿಯನ್ನು ಬದಲಾಯಿಸಿದ್ದಾರೆ.
ಇದನ್ನೂ ಓದಿ: ಏಕವಚನದಲ್ಲೇ ಮಾತನಾಡಿ ಅಶ್ವಿನಿ ಗೌಡಗೆ ಪಾಠ ಕಲಿಸಿದ ಗಿಲ್ಲಿ ನಟ
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಬಿಬಿ ಪ್ಯಾಲೇಸ್ ಹೋಟೆಲ್ ರೀತಿ ಬಿಗ್ ಬಾಸ್ ಮನೆ ಬದಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳಾದ ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ರಜತ್ ಅವರು ಅತಿಥಿಗಳಾಗಿ ಬಂದಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು 12ನೇ ಸೀಸನ್ ಸ್ಪರ್ಧಿಗಳ ಟಾಸ್ಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.