Headlines

ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು

ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು


ಕಳೆದ ಸೀಸನ್ ನಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಡೀ ಶೋ ದಿಕ್ಕನ್ನು ಬದಲಿಸಿದ್ದರು. ಹಲವು ತಿಂಗಳ ಕಾಲ ಅವರು ಭರ್ಜರಿ ಮನರಂಜನೆ ನೀಡಿದ್ದರು. ಯಾರೇ ನಾಮಿನೇಷನ್ ಮಾಡಿದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಆ ಬಳಿಕ ಕೋಟಿ ಮತಗಳ ಅಂತರದಲ್ಲಿ ಅವರು ಗೆಲುವು ಕಂಡರು. ಈ ಸೀಸನ್ ಅಲ್ಲಿ ಗಿಲ್ಲಿ ಕೂಡ ರೇಸ್ ನಲ್ಲಿ ಮುಂದಿದ್ದಾರೆ. ಆದರೆ, ಹನುಮಂತನ 10 ಪರ್ಸೆಂಟ್ ಕೂಡ ಗಿಲ್ಲಿ ಇಲ್ಲ ಎಂದು ಬಿಗ್ ಬಾಸ್ (ಬಿಗ್ ಬಾಸ್) ಮನೆಗೆ ಬಂದ ಅತಿಥಿಗಳು ಹೇಳಿಕೆ.

ಬಿಗ್ ಬಾಸ್ ಈಗ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಉಗ್ರಂ ಮಂಜು ಅವರು ಬ್ಯಾಚುಲರ್ ಪಾರ್ಟಿ ಮಾಡೋದಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಜೊತೆಗಿದ್ದಾರೆ. ಅವರು ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ವೇಳೆ ಗಿಲ್ಲಿಯನ್ನು ಅವರು ಹನುಮಂತನ ಜೊತೆ ಹೋಲಿಕೆ ಮಾಡಿ ನೋಡಿದ್ದಾರೆ.

ಅತಿಥಿಗಳ ಆತಿಥ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದು ಬಿಗ್ ಬಾಸ್ ಆದೇಶವಾಗಿದೆ. ಆದರೆ, ಇದನ್ನು ಗಿಲ್ಲಿ ಅವರು ಗಂಭೀರವಾಗಿ ಸ್ವೀಕರಿಸಿಲ್ಲ. ಅತಿಥಿಗಳ ಕಾಲೆಳೆಯುವ ಪ್ರಯತ್ನವನ್ನು ಗಿಲ್ಲಿ ಮಾಡಿದ್ದಾರೆ. ಇದು ಅತಿಥಿಗಳ ಕೋಪಕ್ಕೆ ಕಾರಣವಾಗಿದೆ. ರಜತ್ ಹಾಗೂ ಮಂಜು ಕರೆದು ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಈ ವಾರ್ನಿಂಗ್ ಗೆ ಎಲ್ಲ ಗಿಲ್ಲಿ ಜಗ್ಗುವವರೇ ಅಲ್ಲ. ಅವರು ತಮ್ಮ ಕೀಟಲೆ ಮುಂದುವರಿಸಿದ್ದಾರೆ. ಎಲ್ಲ ಸಂದರ್ಭದಲ್ಲೂ ಹಾಸ್ಯವಿದೆ.

ಇದನ್ನೂ ಓದಿ: ಅತಿಥಿಗಳಿಗೆ ಅವಮಾನ, ಗಿಲ್ಲಿಗೆ ಎಚ್ಚರಿಕೆ ನೀಡಿದ ಉಗ್ರಂ ಮಂಜು, ರಜತ್

ಈ ವಿಚಾರದ ಬಗ್ಗೆ ರಜತ್, ತ್ರಿವಿಕ್ರಂ ಮಂಜು ಮೊದಲಾದವರು ಚರ್ಚೆ ನಡೆಸಿದ್ದಾರೆ. ‘ಇವನು ನಮ್ಮವನ (ಹನುಮಂತ) ರೀತಿಯೇ. ನಮ್ಮವನು ಶಾಂತವಾಗಿ ಇರ್ತಿದ್ದ. ಅಲ್ಲಿ ಬೇಕೋ ಅಲ್ಲಿ ಮಾತ್ರ ಮಾತನಾಡುತ್ತಿದ್ದ. ಇವನು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ’ ಎಂದು ರಜತ್ ಹೇಳಿದ್ದಾರೆ. ‘ಅವನ 10 ಪರ್ಸೆಂಟ್ ಕೂಡ ಇವನಿಲ್ಲ ಬಿಡಿ’ ಎಂದು ತ್ರಿವಿಕ್ರಂ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *