15

Image Credit : Getty
ರೋಹಿತ್ ಶರ್ಮಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ರಾಯಬಾರಿ
ಭಾರತೀಯ ಕ್ರಿಕೆಟ್‌ನ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ, 2026ರ ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 2024ರ ವಿಶ್ವಕಪ್ ಗೆದ್ದಿತ್ತು. ಈಗ ಟೂರ್ನಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿದೆ.
25
Image Credit : Getty
ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 4,231 ರನ್ ಗಳಿಸಿದ್ದಾರೆ. ಅವರ ಸರಾಸರಿ 32.01 ಮತ್ತು ಸ್ಟ್ರೈಕ್ ರೇಟ್ 140.89. ಅವರು ಎರಡು ಟಿ20 ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು.
35
Image Credit : Getty
ಚೊಚ್ಚಲ ವಿಶ್ವಕಪ್‌ನಿಂದ 2024ರ ವರೆಗೆ ರೋಹಿತ್ ಪಯಣ
2007ರ ವಿಶ್ವಕಪ್‌ನಲ್ಲಿ ಪಾದಾರ್ಪಣೆ ಮಾಡಿದ ರೋಹಿತ್, 2024ರಲ್ಲಿ ನಾಯಕನಾಗಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ ವಿರುದ್ಧ 92 ಮತ್ತು ಇಂಗ್ಲೆಂಡ್ ವಿರುದ್ಧ 57 ರನ್ ಗಳಿಸಿ ಮಿಂಚಿದ್ದರು. ನಂತರ ಟಿ20ಗೆ ನಿವೃತ್ತಿ ಘೋಷಿಸಿದರು.
45
Image Credit : Getty
ಸಂತಸ ವ್ಯಕ್ತಪಡಿಸಿದ ಹಿಟ್‌ಮ್ಯಾನ್
ರಾಯಭಾರಿಯಾಗಿ ಆಯ್ಕೆಯಾದ ಬಗ್ಗೆ ರೋಹಿತ್ ಶರ್ಮಾ, “ಈ ಟೂರ್ನಿ ಮತ್ತೆ ಭಾರತದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ರಾಯಭಾರಿಯಾಗಿರುವುದು ವಿಶೇಷ ಅನುಭವ. ಎಲ್ಲಾ ತಂಡಗಳಿಗೂ ನನ್ನ ಶುಭಾಶಯಗಳು” ಎಂದು ಹೇಳಿದರು.
55
Image Credit : ANI
ಮುಂಬರುವ ಫೆಬ್ರವರಿ 07ರಿಂದ ಟೂರ್ನಿ ಆರಂಭ
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಬಾರಿ ಹೊಸ ಮೈದಾನಗಳು ಮತ್ತು ತಂತ್ರಜ್ಞಾನದೊಂದಿಗೆ ಐಸಿಸಿ ಭಾರಿ ಸಿದ್ಧತೆ ನಡೆಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.