Headlines

Chitradurga Murugha Swamiji: ಮುರುಘಾ ಸ್ವಾಮಿ ಪೋಕ್ಸೋ ಪ್ರಕರಣ: ಹೊರಬಿತ್ತು ಅಂತಿಮ ತೀರ್ಪು | Chitradurga S Murugha Mutt Sri Pocso Case Final Verdict Out Mrq

Chitradurga Murugha Swamiji: ಮುರುಘಾ ಸ್ವಾಮಿ ಪೋಕ್ಸೋ ಪ್ರಕರಣ: ಹೊರಬಿತ್ತು ಅಂತಿಮ ತೀರ್ಪು | Chitradurga S Murugha Mutt Sri Pocso Case Final Verdict Out Mrq



Chitradurga Murugha Swamiji: ಮುರುಘಾ ಸ್ವಾಮಿ ಪೋಕ್ಸೋ ಪ್ರಕರಣ: ಹೊರಬಿತ್ತು ಅಂತಿಮ ತೀರ್ಪು | Chitradurga S Murugha Mutt Sri Pocso Case Final Verdict Out Mrq

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ವಾಮೀಜಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. 

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟವಾಗಿದೆ. 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ಮುರುಘಾ ಮಠದ ಶಿವಮೂರ್ತಿ ಸ್ವಾಮಿಯನ್ನು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ತೀರ್ಪು ಪ್ರಕಟ ಹಿನ್ನೆಲೆ ದಾವಣಗೆರೆಯಲ್ಲಿದ್ದ ಶಿವಮೂರ್ತಿ ಸ್ವಾಮೀಜಿ ಚಿತ್ರದುರ್ಗಕ್ಕೆ ಬಂದಿದ್ದು, ಪ್ರಕರಣದ ಎ1 ಆರೋಪಿ ಇದೀಗ ಅಪರಾಧಿ.

ದಾವಣಗೆರೆಯ ವಿರಕ್ತ ಮಠದಿಂದ ಬಂದಿರುವ ಶಿವಮೂರ್ತಿ ಸ್ವಾಮೀಜಿ

ಶಿವಮೂರ್ತಿ ಸ್ವಾಮಿ ವಿರುದ್ಧ ದಾಖಲಾದ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣ ಸಂಬಂಧ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ಸುದೀರ್ಘ ವಿಚಾರಣೆ ನಡೆಸಿದೆ. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲ ಜಗದೀಶ್ ವಾದ ಮಂಡಿಸಿದ್ದರು. ನವೆಂಬರ್ 18ರಂದು ವಕೀಲ ಜಗದೀಶ್ ಅವರ ವಾದ ಮುಕ್ತಾಯವಾಗಿದೆ. ದಾಖಲಾಗಿರುವ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ಸ್ವಾಮೀಜಿ, ದಾವಣಗೆರೆಯ ವಿರಕ್ತ ಮಠದಿಂದ ಇಂದು ಚಿತ್ರದುರ್ಗ ಬಂದಿದ್ದರು.

ಏನಿದು ಪ್ರಕರಣ?

ಚಿತ್ರದುರ್ಗದಲ್ಲಿರುವ ಮುರುಘಾ ಮಠದ ಪೀಠಾಧಿಪತಿಯಾಗಿದ್ದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪೋಕ್ಸ್ ಪ್ರಕರಣ ದಾಖಲಾಗಿತ್ತು. 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಮಠದ ವಸತಿ ನಿಲಯದಲ್ಲಿದ್ದ ಇಬ್ಬರು ಅಪ್ರಾಪ್ತೆಯರ ಹೇಳಿಕೆಯನ್ನಾಧರಿಸಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು. ನಂತರ ಆಗಸ್ಟ್ 26ರಂದು ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಇನ್ನು ರಾಷ್ಟ್ರೀಯ ಪಕ್ಷವಾಗಿ ಉಳಿದುಕೊಂಡಿದೆಯೇ : ನಿಖಿಲ್ ಕುಮಾರಸ್ವಾಮಿ

2022ರ ಸೆಪ್ಟೆಂಬರ್‌ 1ರಂದು ಮುರುಘಾ ಶ್ರೀ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದರು. ಸ್ವಾಮೀಜಿ ಬಂಧನದ ಬಳಿಕ ಇಡೀ ದೇಶದಾದ್ಯಂತ ಪ್ರಕರಣ ಸದ್ದು ಮಾಡಿತ್ತು.

ಇದನ್ನೂ ಓದಿ: ಪಕ್ಕಾ ಆರಾಮ ಮಸ್ತ್ ಇದ್ದೀನಿ, ಸುಳ್ಳು ಸುದ್ದಿ ನಂಬಬೇಡಿ: ವೈರಲ್ ಆಯ್ತು ಮಹಾಂತೇಶ್ ಬೀಳಗಿ ಹಳೆ ವಿಡಿಯೋ

ಮುರುಘಾ ಪೋಕ್ಸೋ ಕೇಸ್ ಹಿಸ್ಟರಿ

ಆಗಸ್ಟ್ 26, 2022: ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಕೇಸ್ ದಾಖಲು

ಆಗಸ್ಟ್ 27, 2022: ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ

ಸೆಪ್ಟೆಂಬರ್ 01, 2022: ಎ1 ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ ಬಂಧನ

ಅಕ್ಟೋಬರ್ 13, 2022: ಅಡುಗೆ ಸಹಾಯಕಿಯಿಂದ ಮತ್ತೊಂದು ಕೇಸ್

ಅಕ್ಟೋಬರ್ 13, 2022: ಮುರುಘಾ ಸ್ವಾಮಿ, ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮಹಾಲಿಂಗ, ಕರಿಬಸಪ್ಪ ವಿರುದ್ಧ ಕೇಸ್

ಅಕ್ಟೋಬರ್ 27, 2022: ಮೊದಲ ಕೇಸ್ನಲ್ಲಿ 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಜನವರಿ 10, 2023: 2ನೇ ಫೋಕ್ಸೋ ಪ್ರಕರಣದಲ್ಲಿ 761 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ನವೆಂಬರ್ 8, 2023: ಹೈಕೋರ್ಟ್‌ನಿಂದ ಮುರುಘಾಗೆ ಷರತ್ತುಬದ್ಧ ಜಾಮೀನು

ನವೆಂಬರ್ 16, 2023: ಜಿಲ್ಲಾ ಕಾರಾಗೃಹದಿಂದ ಮುರುಘಾ ಶ್ರೀ ಬಿಡುಗಡೆ

ನವೆಂಬರ್ 20, 2023: 2ನೇ ಫೋಕ್ಸೋ ಕೇಸಲ್ಲಿ ಜಾಮೀನು ಪಡೆಯದ ಕಾರಣ ಬಂಧನ

ನವೆಂಬರ್ 20, 2023: ಸಂಜೆ ವೇಳೆಗೆ ಜಮೀನಿನ ಮೇಲೆ ಬಿಡುಗಡೆ

ಮೇ 27, 2024: ಮತ್ತೆ ಮುರುಘಾ ಸ್ವಾಮಿಗೆ ನ್ಯಾಯಾಂಗ ಬಂಧನ

ಅಕ್ಟೋಬರ್ 07, 2024: ಜಾಮೀನಿನ ಮೇಲೆ ಮುರುಘಾ ಸ್ವಾಮಿ ಬಿಡುಗಡೆ

Scroll to load tweet…



Source link

Leave a Reply

Your email address will not be published. Required fields are marked *