ಮಲಮಗನ ಪತ್ನಿ ಶೋಭಿತಾ ಜೊತೆ ಹೇಗಿದೆ ಸಂಬಂಧ? ವಿವರಿಸಿದ ಅಕ್ಕಿನೇನಿ ಹೆಂಡತಿ

ಮಲಮಗನ ಪತ್ನಿ ಶೋಭಿತಾ ಜೊತೆ ಹೇಗಿದೆ ಸಂಬಂಧ? ವಿವರಿಸಿದ ಅಕ್ಕಿನೇನಿ ಹೆಂಡತಿ


ಅಕ್ಕಿನೇನಿ ನಾಗಾರ್ಜುನ (ಅಕ್ಕಿನೇನಿ ನಾಗಾರ್ಜುನ) ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ. ಅವರ ಮಗ ನಾಗ ಚೈತನ್ಯ ಕಳೆದ ವರ್ಷ ವಿವಾಹ ಆದರು. ಈಗ ನಾಗ ಚೈತನ್ಯ ಸಹೋದರ ಅಖಿಲ್ ಮದುವೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸೊಸೆಯನ್ನು ಅವರು ಹಾಡಿ ಹೊಗಳಿದ್ದಾರೆ.

ನಾಗ ಚೈತನ್ಯ ಅವರು ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಜೊತೆ ಸುತ್ತಾಟ ಆರಂಭಿಸಿದರು. 2024ರಲ್ಲಿ ಮದುವೆ ಆಗಿದ್ದಾರೆ. ಸೊಸೆಯನ್ನು ನಾಗಾರ್ಜುನ ಅವರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಶೋಭಿತಾ ಹಾಗೂ ಮಗ ನಾಗ ಚೈತನ್ಯ ಜೊತೆ ಇರೋ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಅಮಲಾ ಶೋಭಿತಾ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.

‘ಅತ್ತೆ ಆಗಿರೋದಕ್ಕೆ ಖುಷಿ ಇದೆ. ನನಗೆ ಇಬ್ಬರು ಮುದ್ದಿನ ಸೊಸೆಯರು’ ಎಂದು ಅಮಲಾ ಮಾತು ಆರಂಭಿಸಿದ್ದಾರೆ. ‘ಶೋಭಿತಾ ತುಂಬಾನೇ ಟ್ಯಾಲೆಂಟೆಡ್. ಎಲ್ಲ ಕೆಲಸವನ್ನು ಅವಳೇ ಮಾಡಿಕೊಳ್ಳುತ್ತಾಳೆ. ಅವರ ಬಗ್ಗೆ ತುಂಬಾನೇ ಪ್ರೀತಿ ಇದೆ. ಅವಳ ಜೊತೆ ಸಮಯ ಕಳೆಯಲು ಖುಷಿಯಾಗುತ್ತದೆ’ ಎಂದು ಅಮಲಾ ಹೇಳಿದ್ದಾರೆ.

ಅಖಿಲ್ ವಿವಾಹ ಆಗುತ್ತಿರುವುದು ಮುಸ್ಲಿಂ ಹುಡುಗಿಯನ್ನು. ಈ ಬಗ್ಗೆ ಅಮಲಾಗೆ ಖುಷಿ ಇದೆ. ‘ನನ್ನ ತಾಯಿ ಕ್ಯಾಥೋಲಿಕ್ ಆಗಿ ಜನಿಸಿದರು. ನಂತರ ಸೂಫಿ ಧರ್ಮವನ್ನು ಅಳವಡಿಸಿಕೊಂಡರು. ನನ್ನ ತಂದೆ ಹಿಂದೂ. ನನ್ನ ಮಾವ ನಾಗೇಶ್ವರ ರಾವ್ ಅವರಿಗೆ ಯಾರೂ ಧರ್ಮವಿರಲಿಲ್ಲ. ನೀವು ಅವರನ್ನು ನಾಸ್ತಿಕ ಎಂದು ಕರೆಯಲು ಸಾಧ್ಯವಿಲ್ಲ. ಅವರು ‘ಕೆಲಸವೇ ನನ್ನ ಪೂಜೆ’ ಎಂದು ಹೇಳಿದರು. ಅವರು ಯಾವಾಗಲೂ ಪೂಜೆ ಮಾಡಲಿಲ್ಲ. ಅವರು ತುಂಬಾ ಮೌಲ್ಯಾಧಾರಿತ, ಧಾರ್ಮಿಕರಲ್ಲ’ ಅಮಲಾ.

ಇದನ್ನೂ ಓದಿ: ಅಕ್ಕಿನೇನಿ ನಾಗಾರ್ಜುನ ಬಳಿ ಖಾಸಗಿ ವಿಮಾನ; ಇನ್ನೂ ಯಾರೆಲ್ಲ ಇದರ ಒಡೆಯರು?

ಅಕ್ಕಿನೇನಿ ನಾಗಾರ್ಜುನ ಅವರು ಈ ಮೊದಲು ಲಕ್ಷ್ಮೀ ದಗ್ಗುಬಾಟಿಯನ್ನು ವಿವಾಹ ಆದರು. ಈ ದಂಪತಿಗೆ ಜನಿಸಿದ್ದು ನಾಗ ಚೈತನ್ಯ. ಲಕ್ಷ್ಮೀಗೆ ಡಿವೋರ್ಸ್ ಕೊಟ್ಟ ನಂತರ ಅಮಲಾ ಅವರಿಗೆ ನಾಗಾರ್ಜುನ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *