15

Image Credit : colors kannada
ಬೆಂಕಿಗೆ ಇನ್ನಷ್ಟು ತುಪ್ಪ ಸುರಿದ ಹಾಗೆ..
ಮೊದಲ ವಾರದಿಂದ ಇಲ್ಲಿಯವರೆಗೆ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ಆಗುತ್ತಲೇ ಇದೆ. ಅಶ್ವಿನಿ ಜೊತೆ ಬೇರೆಯವರಿಗೆ ಜಗಳ ಆದಾದಗಲೂ ಕೂಡ ಗಿಲ್ಲಿ ನಟ ಎಂಟ್ರಿ ಕೊಟ್ಟು ಮಾತನಾಡಿದ್ದುಂಟು. ಹೀಗಾಗಿ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದ ಹಾಗೆ ಆಗಿತ್ತು. ಆದರೆ ಈಗ ಸೀಸನ್ 11 ಸ್ಪರ್ಧಿಗಳು ಬಂದಮೇಲೆ ಇವರಿಬ್ಬರು ಸಮಾಧಾನದಿಂದ ಕೂತುಕೊಂಡು ಮಾತನಾಡಿದ್ದಾರೆ.
25
Image Credit : colors kannada
ಗಿಲ್ಲಿ ನಟನ ಕಾಮಿಡಿ, ವರ್ತನೆ ಜಾಸ್ತಿ ಆಯ್ತು
ಕಳೆದ ವಾರ ಗಿಲ್ಲಿ ನಟನ ಕಾಮಿಡಿ, ವರ್ತನೆ ಜಾಸ್ತಿ ಆಯ್ತು ಎಂದು ಅಶ್ವಿನಿ ಗೌಡ ಕೂಗಾಡಿದ್ದರು, ಊಟವನ್ನು ಬಿಟ್ಟಿದ್ದರು. ಆಮೇಲೆ ವೀಕೆಂಡ್ ಎಪಿಸೋಡ್‌ನಲ್ಲಿ ಅಶ್ವಿನಿ ಮೇಡಂ ಉಳಿಯಬೇಕು, ಅಶ್ವಿನಿ ಮೇಡಂ ಕಂಡರೆ ನನಗೆ ಇಷ್ಟ ಎಂದು ಗಿಲ್ಲಿ ನಟ ಹೇಳಿದ್ದು, ಕಿಚ್ಚ ಸುದೀಪ್ ಅವರಿಗೆ ಅಚ್ಚರಿ ತಂದಿತ್ತು.
35
Image Credit : colors kannada
ಅಶ್ವಿನಿ ಗೌಡ, ಗಿಲ್ಲಿ ನಟ ಮಾತು
ಕಿಚನ್ ಏರಿಯಾದಲ್ಲಿರುವ ಸೋಫಾ ಮೇಲೆ ಕೂತು, ಅಶ್ವಿನಿ, ಗಿಲ್ಲಿ ಮಾತನಾಡಿಕೊಂಡಿದ್ದಾರೆ.
“ಅವರು ಮಾತನಾಡಿದರು, ಇವರು ಮಾತನಾಡಿದರು. ಅದಿಕ್ಕೆ ಸಪ್ಲೈಯರ್ ಕೆಲಸ ಕೊಟ್ಟಿದ್ದಾರೆ. ಟಾಸ್ಕ್ ಆಗಿಲ್ಲ ಅಂದ್ರೆ ಸರಿಯಾಗಿ ಕೌಂಟರ್ ಕೊಡುತ್ತಿದ್ದೆ. ರೂಮ್‌ನಲ್ಲಿ ನನಗೆ ಟ್ರಿಗರ್ ಆಯ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ.
“ನೀನು ಕೆಲಸ ಮಾಡಲ್ಲ ಎಂದು ಗೊತ್ತು. ಏನಾದರೂ ಮಾಡ್ತೀಯಾ ಅಂತ ಗೊತ್ತು, ನೀನು ಮಾಡಿದೆ. ನೀನು ದಬ್ಬಾಕಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
45
Image Credit : colors kannada
ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು?
ಅಶ್ವಿನಿ ಗೌಡ, ಗಿಲ್ಲಿ ನಟ ಒಂದಾಗಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಈ ಬಗ್ಗೆ ಸೀಸನ್ 4 ವಿಜೇತ ಒಳ್ಳೆ ಹುಡುಗ ಪ್ರಥಮ್ ಕೂಡ ಪೋಸ್ಟ್ ಮಾಡಿದ್ದು, “ನನಗೆ ವೈಯಕ್ತಿಕವಾಗಿ ಗಿಲ್ಲಿ ಗೊತ್ತು. ಇದೆಲ್ಲ ಸಣ್ಣ ಏರಿಳಿತ ಅಷ್ಟೇ. ಗಿಲ್ಲಿ ನಟ, ಅಶ್ವಿನಿ ಗೌಡ ಇಬ್ಬರೂ ಈ ಸೀಸನ್ ಆಸ್ತಿ. ನಿನ್ನೆ ಅವರಿಬ್ಬರು ಜೊತೆಯಾಗಿ ಇದ್ದಿದ್ದು ನನಗೆ ಖುಷಿ ಆಯ್ತು. ಇಬ್ಬರೂ ನಮ್ಮ ಕನ್ನಡದ ಮಕ್ಕಳೇ” ಎಂದಿದ್ದಾರೆ.
55
Image Credit : colors kannada
ಮುಂದೆ ಏನಾಗಬಹುದು?
ಅಂದಹಾಗೆ ಸೀಸನ್ 11 ಸ್ಪರ್ಧಿಗಳು ಈ ಮನೆಯಿಂದ ಹೊರಟ ಬಳಿಕ ಆಟದ ಸ್ವರೂಪ ಬದಲಾಗಬಹುದು, ಮತ್ತೆ ಸ್ಪರ್ಧಿಗಳ ನಡುವೆ ಸ್ಪರ್ಧೆ ಶುರುವಾಗಲಿದೆ. ಈಗ ಒಂದಾಗಿರುವ ಅಶ್ವಿನಿ ಗೌಡ, ಗಿಲ್ಲಿ ನಟನ ಮಧ್ಯೆ ಮನಸ್ತಾಪ ಬಂದರೂ ಕೂಡ ಆಶ್ಚರ್ಯವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.