ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ ಸಿಕ್ತು ಫಾರಿನ್ ಕರೆನ್ಸಿ ಸೇರಿ 3 ಕೋಟಿ ರೂ.ಗೂ ಹೆಚ್ಚು ಹಣ!

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ ಸಿಕ್ತು ಫಾರಿನ್ ಕರೆನ್ಸಿ ಸೇರಿ 3 ಕೋಟಿ ರೂ.ಗೂ ಹೆಚ್ಚು ಹಣ!


ಮೈಸೂರು, ನವೆಂಬರ್ 27: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಕಾರ್ಯಕ್ರಮದಿಂದಾಗಿ ದಾಖಲೆಯ ಹುಂಡಿ ಸಂಗ್ರಹವಾಗಿದೆ. ನಂಜನಗೂಡಿನ ಪ್ರಸಿದ್ಧ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ ಕಾರ್ತಿಕ ಮಾಸದ ವಿಶೇಷ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಹುಂಡಿ ಸಂಗ್ರಹಣೆಯಲ್ಲಿ ದಾಖಲೆಯ ಹೆಚ್ಚಿದೆ. ದೇವಾಲಯದಲ್ಲಿ ನಡೆದ ಇತ್ತೀಚಿನ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 3,02,63,795 ರೂ ಹಣ ಸಂಗ್ರಹವಾಗಿದೆ. ಜೊತೆಗೆ 82 ಗ್ರಾಂ 800 ಮಿಲಿಗ್ರಾಂ ಚಿನ್ನ, 2 ಕೆಜಿ 680 ಗ್ರಾಂ ಬೆಳ್ಳಿ ಮತ್ತು 34 ವಿಧದ ವಿದೇಶಿ ಕರೆನ್ಸಿಗಳೂ ಸೇರಿವೆ. ಎಣಿಕೆ ಕಾರ್ಯವನ್ನು ದಾಸೋಹ ಭವನದಲ್ಲಿ ನಡೆಸಲಾಯಿತು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ಕಾಣಿಸಿಕೊಂಡಿದ್ದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *