Headlines

Varanasi: ಪೃಥ್ವಿರಾಜ್ ಅಲ್ವಂತೆ! ‘ಕುಂಭ’ ಪಾತ್ರಕ್ಕೆ ಮೊದಲ ಆಯ್ಕೆ ಆ ನಟನಂತೆ.. ಯಾರು ಅಂತ ಗೊತ್ತಾದ್ರೆ ಬೆರಗಾಗ್ತೀರಾ | Gopichand Was Rajamoulis First Choice For Kumbha Role Not Prithviraj Gvd

Varanasi: ಪೃಥ್ವಿರಾಜ್ ಅಲ್ವಂತೆ! ‘ಕುಂಭ’ ಪಾತ್ರಕ್ಕೆ ಮೊದಲ ಆಯ್ಕೆ ಆ ನಟನಂತೆ.. ಯಾರು ಅಂತ ಗೊತ್ತಾದ್ರೆ ಬೆರಗಾಗ್ತೀರಾ | Gopichand Was Rajamoulis First Choice For Kumbha Role Not Prithviraj Gvd


15

ಭರ್ಜರಿ ಕಲೆಕ್ಷನ್

Image Credit : Social Media

ಭರ್ಜರಿ ಕಲೆಕ್ಷನ್

ಟಾಲಿವುಡ್ ಖ್ಯಾತಿಯನ್ನು ಜಗತ್ತಿಗೆ ತೋರಿಸಿದ ನಿರ್ದೇಶಕ ಎಸ್.ಎಸ್.ರಾಜಮೌಳಿ. ಬಜೆಟ್ ದೊಡ್ಡದಾಗಲಿ, ಸಮಯ ಹೆಚ್ಚಾಗಲಿ, ತನ್ನ ಸಿನಿಮಾಗಳಿಂದ ಭರ್ಜರಿ ಕಲೆಕ್ಷನ್ ಮಾಡುತ್ತಾರೆ ಜಕ್ಕಣ್ಣ. ಅಂತಹ ನಿರ್ದೇಶಕರ ಸಿನಿಮಾದಲ್ಲಿ ಒಂದೇ ಒಂದು ಸೀನ್ ಆದರೂ ಸರಿ, ಸಂಭಾವನೆ ಕಡಿಮೆ ಇದ್ದರೂ ನಟಿಸಲು ರೆಡಿಯಾಗುತ್ತಾರೆ ನಟ-ನಟಿಯರು.

25

ವಿಲನ್ ಪಾತ್ರದ ಹೆಸರು 'ಕುಂಭ'

Image Credit : X

ವಿಲನ್ ಪಾತ್ರದ ಹೆಸರು ‘ಕುಂಭ’

ಮಗಧೀರ, ಈಗ, ಬಾಹುಬಲಿ, RRR.. ಹೀಗೆ ಜಕ್ಕಣ್ಣನ ಯಾವುದೇ ಸಿನಿಮಾ ಆದರೂ ವಿಲನ್ ಪಾತ್ರಗಳು ಪವರ್‌ಫುಲ್ ಆಗಿರುತ್ತವೆ. ಹೀರೋಗಳಿಗಿಂತ ವಿಲನ್ ಪಾತ್ರಕ್ಕೇ ಹೆಚ್ಚು ಇಂಪ್ಯಾಕ್ಟ್ ಇರುತ್ತದೆ. ಈಗ ರಾಜಮೌಳಿ ನಿರ್ದೇಶಿಸುತ್ತಿರುವ ‘ವಾರಣಾಸಿ’ ಚಿತ್ರದಲ್ಲೂ ಅದೇ ಪುನರಾವರ್ತನೆಯಾಗಲಿದೆ. ಈ ಸಿನಿಮಾದಲ್ಲಿನ ವಿಲನ್ ಪಾತ್ರದ ಹೆಸರು ‘ಕುಂಭ’. ಈ ಪಾತ್ರಕ್ಕೆ ರಾಜಮೌಳಿ ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಇಂಡಸ್ಟ್ರಿ ಮಾತು.

35

ಸೂಟ್ ಆಗ್ತಾರಾ ಇಲ್ವಾ ಅನ್ನೋ ಮಾತಿತ್ತು

Image Credit : Youtube

ಸೂಟ್ ಆಗ್ತಾರಾ ಇಲ್ವಾ ಅನ್ನೋ ಮಾತಿತ್ತು

ಮೊದಲಿಗೆ ಈ ಪಾತ್ರಕ್ಕೆ ಪೃಥ್ವಿರಾಜ್ ಸೂಟ್ ಆಗ್ತಾರಾ ಇಲ್ವಾ ಅನ್ನೋ ಮಾತಿತ್ತು. ಆದರೆ ಫಸ್ಟ್ ಲುಕ್ ರಿಲೀಸ್ ಆದ್ಮೇಲೆ ಆ ಅನುಮಾನಗಳೆಲ್ಲಾ ದೂರವಾದವು. ಆ ಲುಕ್ ನೋಡಿ ‘ಈ ಸಿನಿಮಾದಲ್ಲಿ ವಿಲನ್ ಹೀರೋನನ್ನೇ ಮೀರಿಸಿದ್ದಾನೆ’ ಅಂದ್ಕೊಂಡ್ರು. ಆದರೆ, ಇಲ್ಲೊಂದು ಇಂಟರೆಸ್ಟಿಂಗ್ ಮಾತು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.

45

'ಕುಂಭ' ಪಾತ್ರಕ್ಕೆ ಗೋಪಿಚಂದ್

Image Credit : gopichand instagram

‘ಕುಂಭ’ ಪಾತ್ರಕ್ಕೆ ಗೋಪಿಚಂದ್

ಪೃಥ್ವಿರಾಜ್ ಅಲ್ವಂತೆ.. ಮೊದಲಿಗೆ ‘ಕುಂಭ’ ಪಾತ್ರಕ್ಕೆ ಈ ಮಲಯಾಳಂ ನಟನನ್ನು ಅಂದ್ಕೊಂಡಿರಲಿಲ್ವಂತೆ. ಆ ಪಾತ್ರಕ್ಕೆ ಮೊದಲ ಆಯ್ಕೆಯಾಗಿ ಗೋಪಿಚಂದ್ ಅವರನ್ನು ರಾಜಮೌಳಿ ಅಂದುಕೊಂಡಿದ್ದರಂತೆ. ವಿಲನ್ ಆಗಿ ಗೋಪಿಚಂದ್ ನಟಿಸಿದ್ದರೆ ಆ ಪಾತ್ರಕ್ಕೆ ದೊಡ್ಡ ಮಟ್ಟದ ಇಂಪ್ಯಾಕ್ಟ್ ಇರುತ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ಆದರೆ ಕಾರಣವೇನೆಂದು ತಿಳಿದಿಲ್ಲ, ಗೋಪಿಚಂದ್ ಕೈಯಿಂದ ಆ ಪಾತ್ರ ಜಾರಿ ಪೃಥ್ವಿರಾಜ್ ಸುಕುಮಾರನ್ ಪಾಲಾಗಿದೆ.

55

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲಿಂಪ್ಸ್ ಬಿಡುಗಡೆ

Image Credit : Asianet News

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲಿಂಪ್ಸ್ ಬಿಡುಗಡೆ

ನವೆಂಬರ್ 15 ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ವಾರಣಾಸಿ’ ಟೈಟಲ್ ಗ್ಲಿಂಪ್ಸ್ ಅನ್ನು ರಾಜಮೌಳಿ ಬಿಡುಗಡೆ ಮಾಡಿದರು. ‘ಗ್ಲೋಬ್ ಟ್ರಾಟರ್.. ಟೈಮ್ ಟ್ರಾಟರ್’ ಎನ್ನುವ ಮೂಲಕ ರಾಜಮೌಳಿ ಸಿನಿಮಾ ಮೇಲಿನ ಹೈಪ್ ಹೆಚ್ಚಿಸಿದ್ದಾರೆ. ಇತ್ತ ಮಹೇಶ್ ಬಾಬು ಕೂಡ ತಮ್ಮ ಅಭಿಮಾನಿಗಳಿಗೆ ಇನ್ನೂ ಸಾಕಷ್ಟು ಸರ್‌ಪ್ರೈಸ್‌ಗಳಿವೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *