‘ರೆಸಾರ್ಟ್​ನ ಲೋಕಲ್ ಬಾರ್ ಮಾಡಿದ್ರು’; ರಜತ್​ಗೆ ಸುದೀಪ್ ಕ್ಲಾಸ್​ ತೆಗೆದುಕೊಂಡ ವಿಡಿಯೋ ವೈರಲ್

‘ರೆಸಾರ್ಟ್​ನ ಲೋಕಲ್ ಬಾರ್ ಮಾಡಿದ್ರು’; ರಜತ್​ಗೆ ಸುದೀಪ್ ಕ್ಲಾಸ್​ ತೆಗೆದುಕೊಂಡ ವಿಡಿಯೋ ವೈರಲ್


ಬಾರಿಯೂ ಬಿಗ್ ಬಾಸ್‌ನಲ್ಲಿ ಸ್ಕೂಲ್ ಟಾಸ್ಕ್, ರೆಸಾರ್ಟ್ ಟಾಸ್ಕ್‌ಗಳು. ಈ ಬಾರಿಯೂ ಮುಂದುವರಿದಿದೆ. ರಜತ್ (ರಜತ್), ಮಂಜು, ಚೈತ್ರಾ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಅವರು ಶೋಗೆ ಅತಿಥಿಗಳಾಗಿ ಬಂದಿದ್ದಾರೆ. ಇದರಿಂದ ಇಡೀ ಮನೆಯ ವಾತಾವರಣ ಹಾಳಾಗಿದೆ. ಅತಿಥಿಗಳಾಗಿ ಬಂದವರು ಡಾಮಿನೇಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಕಳೆದ ಸೀಸನ್ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸುದೀಪ್ ಅವರು ರಜತ್ ಗೆ ಕ್ಲಾಸ್ ತೆಗೆದುಕೊಂಡಿದ್ದರು.

ಕಳೆದ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಯಿತು. ಸ್ಪರ್ಧಿಗಳಲ್ಲೇ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ಗುಂಪು ಆತಿಥ್ಯ ನೋಡಿಕೊಳ್ಳಬೇಕು, ಮತ್ತೊಂದು ಗುಂಪು ಅತಿಥಿಗಳಾಗಬೇಕು. ನಂತರ ಇದು ಉಲ್ಟಾ ಆಗುತ್ತದೆ. ಅಂದರೆ ಆತಿಥ್ಯ ಪಡೆದವರು ಅತಿಥಿಗಳಾಗಬೇಕು, ಅತಿಥಿಗಳಾಗಿ ಇದ್ದವರು ಆತಿಥ್ಯ ನೀಡಬೇಕು. ರಜತ್ ಅತಿಥಿಯಾದಾಗ ಯಾವ ರೀತಿ ನಡೆದುಕೊಂಡಿದ್ದರು ಎಂಬ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ಎಲ್ಲರೂ ಲೋಕಲ್ ಬಾರ್ ಅಲ್ಲಿ ಇರೋ ತರ ಇದ್ರಿ. ರಜತ್ ಎಂಟ್ರಿ ಕೊಟ್ಮೇಲೆ ಅದು ರೆಸಾರ್ಟ್ ಅಲ್ಲವೇ ಅಲ್ಲ. ರೆಸಾರ್ಟ್ ನ ಪಕ್ಕಾ ಲೋಕಲ್ ಬಾರ್ ಆಗಿ ಬದಲಾಯಿಸಿದ್ರು’ ಎಂದು ಸುದೀಪ್ ಅವರು ವೀಕೆಂಡ್ ನಲ್ಲಿ ಹೇಳಿದ್ದರು. ಈ ವಿಡಿಯೋನ ಗಿಲ್ಲಿ ಫ್ಯಾನ್ಸ್ ವೈರಲ್ ಆಗುತ್ತಿದೆ.

ರಜತ್ ಹಾಗೂ ಮಂಜು ಬಿಗ್ ಮನೆಯಲ್ಲಿ ಅತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಜತ್ ಹಾಗೂ ಮಂಜು ಕೆರಳಿಸಲೇ ಗಿಲ್ಲಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಅನೇಕರದ್ದು.

ಇದನ್ನೂ ಓದಿ: ಗಿಲ್ಲಿ ಅಭಿಮಾನಿಗಳ ಕಾಟಕ್ಕೆ ಹೆದರಿ ಕಮೆಂಟ್ಸ್ ಆಫ್ ಮಾಡಿದ ರಜತ್

ಇಂದು ಅಥವಾ ನಾಳೆ ಈ ಅತಿಥಿಗಳು ದೊಡ್ಡ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವೀಕೆಂಡ್‌ವರೆಗೆ ಈ ಅತಿಥಿಗಳು ಇರೋದು ಅನುಮಾನ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *