ಬೆಂಗಳೂರು, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಭೇಟಿ ನೀಡಿದ್ದು, ಉಡುಪಿ ಕಡಲತೀರದಲ್ಲಿ ಸ್ಯಾಂಡ್ ಟೀಂ ವತಿಯಿಂದ ವಿಶೇಷ ಮರಳು ಕಲಾಕೃತಿಯನ್ನು ರಚಿಸಲಾಗಿದೆ. “ವೆಲ್ಕಮ್ ಟು ಉಡುಪಿ” ಎಂಬ ವಿಷಯದ ಅಡಿಯಲ್ಲಿ ರೂಪುಗೊಂಡಿರುವ ಈ ಕಲಾಕೃತಿಯು, ಶ್ರೀಕೃಷ್ಣನ ಅವತಾರ ಹಾಗೂ ಪ್ರಧಾನಿ ಮೋದಿ ಅವರ ಶಿಲ್ಪವನ್ನು ಒಳಗೊಂಡಿದ್ದು, ಮಠದ ಹಿನ್ನೆಲೆ ಮತ್ತು ಗೀತಾ ಸಾರವನ್ನು ಹೊಂದಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಆಲಾಡಿ, ಮತ್ತು ಉಜ್ವಲ್ ನಿಟ್ಟೆ ಅವರನ್ನೊಳಗೊಂಡ ತಂಡವು ಸತತ ಐದು ಗಂಟೆಗಳ ಕಾಲ ಶ್ರಮವಹಿಸಿ ಈ ಕಲಾಕೃತಿಯನ್ನು ಪೂರ್ಣಗೊಳಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.