ಬೆಂಗಳೂರು, ನವೆಂಬರ್ 27: ಐಪಿಸಿ ಸೆಕ್ಷನ್ 498ಎ (ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ)ಯಲ್ಲಿ ಬಳಸಿರುವ ಗಂಡ ಎಂಬ ಪದವು ಕೇವಲ ಕಾನೂನುಬದ್ಧವಾಗಿ ಮಾನ್ಯವಾದ ವಿವಾಹಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಲಿವ್-ಇನ್ ರಿಲೇಷನ್ ಶಿಪ್‌ಗಳಿಗೆ ಅನ್ವಯಿಸುತ್ತದೆ ಎಂದು ಕರ್ನಾಟಕ ಅಧಿಕಅಭಿಪ್ರಾಯಪಟ್ಟಿದೆ. ಇತ್ತೀಚಿನ ದಿನಗಳಲ್ಲಿ -ಇನ್ ಸಂಬಂಧಗಳು ಹೆಚ್ಚಾಗುತ್ತಿರುವ ನಡುವೆ ಈ ಹೇಳಿಕೆಯು ಮಹತ್ವದ್ದಾಗಿದೆ.
ಪ್ರಕರಣವೊಂದರ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಅಂಶವನ್ನು ಉಲ್ಲೇಖಿಸಿದ್ದು, ವಿವಾಹದ ಸ್ವರೂಪದ ಸಂಬಂಧಗಳಿಗೆ ಕ್ರೌರ್ಯದ ವಿಚಾರದಲ್ಲಿ IPC ಸೆಕ್ಷನ್ 498ಎ ಅನ್ವಯದ ವಿಚಾರಣೆಯಲ್ಲಿದೆ. ಜೊತೆಗೆ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ವಜಾಗೊಳಿಸಿದ್ದಾರೆ. ದೂರುದಾರರಿಗೆ ಅರ್ಜಿದಾರನ ವಿವಾಹ ಕಾನೂನಾತ್ಮಕವಾಗಿ ಅಮಾನ್ಯವಾಗಲಿಲ್ಲ, 498ಎ ಅನ್ವಯಿಸದು ಎಂದು ಶಿವಮೊಗ್ಗ ಮೂಲದ ಅರ್ಜಿದಾರ ಪರ ವಕೀಲರು ವಾದಿಸಿದ್ದರು. ವಿವಾಹಿತನಾಗಿರುವ ಗಂಡನ ಅರ್ಜಿ, ಆತ ದೂರುದಾರಿಯ ಎಂದು ಪರಿಗಣಿಸಲಾಗದು. ಹೀಗಾಗಿ 498ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಇದನ್ನೂ ಓದಿ: ಆಧಾರ್ ಹೊಂದಿರುವ ಒಳನುಸುಳುಕೋರರನ್ನು ಮತದಾರರೆಂದು ಪರಿಗಣಿಸಬೇಕೆ?; ಸುಪ್ರೀಂ
ಆದರೆ ಅರ್ಜಿದಾರರ ಪರ ವಕೀಲರ ವಾದ ಒಪ್ಪದ ನ್ಯಾಯಾಲಯ, ತನ್ನ ಮೊದಲ ವಿವಾಹವನ್ನು ಮರೆಮಾಚಿ ದೂರುದಾರರ ಜೊತೆಗೆ ಮದುವೆಯ ರೂಪದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಮೊದಲೇ ಬೇರೊಬ್ಬಳ ಜೊತೆ ಮದುವೆಯಾಗಿ, ಒಂದು ಮಗುವನ್ನೂ ಸಹ. ಹೀಗಿದ್ದರೂ ಆ ವಿಷಯ ಮರೆಮಾಚಿ ದೂರುದಾರೆಯ ಜೊತೆ ಮದುವೆಯಾಗಿ ವಾಸ ಮಾಡಿದ್ದಾರೆ. ಆಕೆಯ ಕುಟುಂಬದಿಂದ ಚಿನ್ನ, ಬೆಳ್ಳಿ ಮತ್ತು ನಗದು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕವೂ ಹೆಚ್ಚಿನ ಬೇಡಿಕೆಗಳನ್ನು ಮಾಡಿ, ಹಿಂಸೆ ಹಾಗೂ ಕ್ರೌರ್ಯ ನಡೆಸಲಾಗಿದೆ. ಆಕೆ ಪ್ರಾಣ ತೆಗೆಯಲೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ. ಈ ಸಂಬಂಧ ಕಾನೂನಾತ್ಮಕವಾಗಿಲ್ಲ ಎಂಬ ನೆಪದಲ್ಲಿ 498ಎಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಎಂಬ ಸಂದೇಶ ಇದರಿಂದ ಹೊರಬರುತ್ತದೆ. ಅದು ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.