16

Image Credit : Instagram
ರಿಯಾಲಿಟಿ ಷೋ ಜೋಡಿ
ಸಿನಿಮಾ ಮಾತ್ರವಲ್ಲದೇ ಸೀರಿಯಲ್, ರಿಯಾಲಿಟಿ ಷೋಗಳ ಜೋಡಿಗಳು ಮದುವೆಯಾಗುವುದು ಹೊಸ ವಿಷಯವೇನಲ್ಲ. ಇದಾಗಲೇ ಗಿಚ್ಚಿ ಗಿಲಿಗಿಲಿ ಷೋ, ಮಜಾಭಾರತ ರಿಯಾಲಿಟಿ ಷೋಗಳ ಜೋಡಿ ಜಗಪ್ಪ, ಸುಷ್ಮಿತಾ ಗೌಡ ಅವರ ಮದುವೆಯಾಗಿದೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್, ಅಭಿಷೇಕ್… ಹೀಗೆ ಕೆಲವು ಜೋಡಿಗಳು ಮದುವೆಯಾಗಿದ್ದಿವೆ.
26
Image Credit : Instagram
ಸದ್ದಿಲ್ಲದೇ ಎಂಗೇಜ್ಮೆಂಟ್
ಇದೀಗ ಗಿಚ್ಚಿಗಿಲಿಗಿಲಿ ಹಾಗೂ ಮಜಾಭಾರತ್ ಷೋನ ಇನ್ನೊಂದು ಜೋಡಿ ಸದ್ದಿಲ್ಲದೇ ಎಂಗೇಜ್ಮೆಂಟ್ ಆಗಿದೆ. ಅವರೇ ಹಾಸ್ಯ ಕಲಾವಿದ ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ (Gicchi Giligili pair engagement) ಜೋಡಿ.
36
Image Credit : Instagram
ಗಪ್ಚುಪ್ ಜೋಡಿ
ಇದಾಗಲೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರೂ, ಇಬ್ಬರೂ ಗಪ್ಚುಪ್ ಇದ್ದರು. ಅದರ ಬಗ್ಗೆ ಏನೂ ಹೇಳಿರಲಿಲ್ಲ.
46
Image Credit : Instagram
ಫೋಟೋ ವೈರಲ್
ಅವರ ಎಂಗೇಜ್ಮೆಂಟ್ ಎನ್ನಲಾದ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದು ಹೇಳಿ-ಕೇಳಿ ಎಐ ಯುಗ. ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿಯುವುದೇ ಕಷ್ಟ. ಆದ್ದರಿಂದ ಇದು ಕೂಡ ಕನ್ಫರ್ಮ್ ಇರಲಿಲ್ಲ. ಆದರೆ ಅದು ನಿಜವಾಗಿದೆ.
56
Image Credit : Instagram
ಸೀರಿಯಲ್ನಲ್ಲಿ ನಟನೆ
ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ಮಾನಸಾ ಗುರುಸ್ವಾಮಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಇವರು ಕೂಡ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿದ್ದರು. ಕಾಮಿಡಿ ಶೋನಲ್ಲಿಯೇ ಭಾಗವಹಿಸಿ ಹೆಸರು ಗಳಿಸಿದ್ದಾರೆ.
66
Image Credit : Instagram
ಸೆಲೆಬ್ರಿಟಿಗಳ ಆಗಮನ
ಅಂದಹಾಗೆ ಇವರಿಬ್ಬರ ನಿಶ್ಚಿತಾರ್ಥ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಆಶೀರ್ವದಿಸಿದ್ದಾರೆ. ನ್ಯೂಸ್ಬೀಟ್ ಕನ್ನಡ ಇವರ ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.