ಬೆಳ್ಳಂಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 81 ವಿಮಾನಗಳು ವಿಳಂಬವಾಗಿದೆ
ಬೆಂಗಳೂರು, ನವೆಂಬರ್ 27: ಬೆಂಗಳೂರಿನಲ್ಲಿಂದು (ಬೆಂಗಳೂರು) ಬೆಳ್ಳಂಬೆಳಗ್ಗೆ ವಿಪರೀತ ಚಳಿ ಕಾಣಿಸಿಕೊಂಡಿದ್ದು, ವಾತಾವರಣ ಮಂಜಿನಿಂದ ಕೂಡಿತ್ತು. ಇದೇ ಕಾರಣಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 81 ವಿಮಾನಗಳ ಹಾರಾಟ ವಿಳಂಬವಾಗಿದೆ (ಬೆಂಗಳೂರು ವಿಮಾನ ವಿಳಂಬ)ಮಂಗಳೂರು ಮತ್ತು ದೆಹಲಿಯಿಂದ ಬರುತ್ತಿದ್ದ ವಿಮಾನ ಸಂಚಾರ ಮಾರ್ಗ ಬದಲಾವಣೆಯಾಗಿದೆ. ವಿಮಾನ ಹಾರಾಟ ಪ್ರಸ್ತುತ ಸಹಜ ಸ್ಥಿತಿಗೆ ಮರಳಿದೆ.
ಎರಡು ವಿಮಾನಗಳ ಮಾರ್ಗ ಬದಲಾವಣೆ
ಇಂದು (ನ.27) ಬೆಳಗ್ಗೆ 4.44 ರಿಂದ 8 ಗಂಟೆಯವರೆಗೆ ಕವಿದ ವಾತಾವರಣದಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 81 ವಿಮಾನಗಳು ಹಾರಾಟದಲ್ಲಿ ವಿಳಂಬವಾಗಿತ್ತು. ಕೆಲವು ವಿಮಾನಗಳು ಕಡಿಮೆ ಅವಧಿಯಷ್ಟು ವಿಳಂಬವಾದರೆ ಈ ಕೆಲವು ವಿಮಾನಗಳು ಗರಿಷ್ಠ 69 ನಿಮಿಷಗಳ ಕಾಲ ವಿಳಂಬವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ(DGCA) ಪ್ರಕಾರ ವಿಮಾನ ವಿಳಂಬಕ್ಕೆ 15 ನಿಮಿಷಗಳ ಮಿತಿಯಿದ್ದು, 81ರಲ್ಲಿ 33 ವಿಮಾನಗಳು ಈ ಮಿತಿಯನ್ನು ದಾಟಿವೆ.
ಇದನ್ನೂ ಓದಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; 8 ಬಗೆಯ ಅಪರೂಪದ ಪ್ರಾಣಿಗಳನ್ನು ವಶಕ್ಕೆ
ಈ ವೇಳೆ ಎರಡು ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ, ಬೆಳಗ್ಗೆ 7.21ಕ್ಕೆ ಬೆಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು (IX 2923) ಚೆನ್ನೈಗೆ ಕಳುಹಿಸಲಾಗಿದೆ. ಬೆಳಗ್ಗೆ 7.47ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು (AI 2653) ಕೊಚ್ಚಿ ಕಡೆಗೆ ಕಳುಹಿಸಲಾಗಿದೆ. ಪ್ರಸ್ತುತ ವಿಮಾನಗಳ ಹಾರಾಟ ಸಹಜ ಸ್ಥಿತಿಗೆ ಮರಳಿದರೂ, ಬೆಳಗಿನ ಜಾವದ ವಿಳಂಬದ ಪರಿಣಾಮ ಉಳಿದ ಯಾತ್ರೆಗಳ ಮೇಲೆಯೂ ಪರಿಣಾಮ ಬೀರಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:06 pm, ಗುರುವಾರ, 27 ನವೆಂಬರ್ 25