ಮ್ಯೂಚುವಲ್ ಫಂಡ್ ಎಸ್ಐಪಿ, ಬ್ಯಾಂಕ್ ಆರ್ಡಿ ರೀತಿ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ (ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ) ಕೂಡ ಮಾಸಿಕವಾಗಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಉಳಿತಾಯ ಆವರ್ತನ ಠೇವಣಿ ಖಾತೆ ಎಂದು ಅಧಿಕೃತವಾಗಿ ಕರೆಯಲಾಗುವ ಈ ಯೋಜನೆಯು ಕೇಂದ್ರ ಹಣಕಾಸು ಸಚಿವಾಲಯದ ಬೆಂಬಲವನ್ನು ಹೊಂದಿದೆ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರದಿಂದ ಖಾತ್ರಿ ಇರುತ್ತದೆ.
ಅಂಚೆ ಕಚೇರಿಯ ಈ ಆರ್ಡಿ ಪ್ಲಾನ್ 5 ವರ್ಷದ ಅವಧಿಯದ್ದಾಗಿದ್ದು ಶೇ. 6.7ರಷ್ಟು ಬಡ್ಡಿ ಕೊಡುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ 100 ರೂ ಇದ್ದು, ಗರಿಷ್ಠ ಮಿತಿ ಇಲ್ಲ. 5 ವರ್ಷದ ಅವಧಿ ಇರುತ್ತದಾದರೂ ಅದಾದ ಮೇಲೆ ಇನ್ನೂ 5 ವರ್ಷ ವಿಸ್ತರಿಸಬಹುದು.
ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
ಪೋಸ್ಟ್ ಆಫೀಸ್ ಆರ್ಡಿಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡಿದ್ದೀರಾ?
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ನಲ್ಲಿ ನೀವು ತಿಂಗಳಿಗೆ 10,000 ರೂನಂತೆ 5 ವರ್ಷದವರೆಗೆ ಹೂಡಿಕೆ ಮಾಡುತ್ತಾ ಹೋದರೆ ಸುಮಾರು 7.11 ಲಕ್ಷ ರೂ ರಿಟರ್ನ್ ಸಿಗುವ ನಿರೀಕ್ಷೆಯಿದೆ.
ಇಲ್ಲಿ ಪ್ರತೀ ಕ್ವಾರ್ಟರ್ಗೆ ಚಕ್ರಬಡ್ಡಿ ಸೇರುತ್ತಾ ಹೋಗುತ್ತದೆ. ಅಂದರೆ, ಮೂರು ತಿಂಗಳಿಗೆ ಹಣ ಕಾಂಪೌಂಡಿಂಗ್ ಆಗುತ್ತಿರುತ್ತದೆ. ಐದು ವರ್ಷದಿಂದ ನಿಮ್ಮ ಹೂಡಿಕೆಯ 6 ಲಕ್ಷ ರೂ ಹಣಕ್ಕೆ ಒಂದು ಲಕ್ಷ ರೂಗೂ ಅಧಿಕ ಬಡ್ಡಿ ಹಣ ಜಮೆಯಾಗುತ್ತದೆ.
ಇದನ್ನೂ ಓದಿ: ಎನ್ ಪಿಎಸ್ ಟಯರ್-1, ಟಯರ್-2 ಅಕೌಂಟ್ಸ್; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್
ಐದು ವರ್ಷದ 10 ಲಕ್ಷ ರೂ ಗಳಿಸಲು ಎಷ್ಟು ಹೂಡಿಕೆ ಬೇಕು?
ನೀವು ಮಾಸಿಕ ಹೂಡಿಕೆಯಿಂದ ಐದು ವರ್ಷದವರೆಗೆ 10 ಲಕ್ಷ ರೂ ರಿಟರ್ನ್ ಪಡೆಯುವ ಸಲುವಾಗಿ ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ತಿಂಗಳಿಗೆ ಸುಮಾರು 14,500 ರೂ ಹೂಡಿಕೆ ಮಾಡಬೇಕಾಗಬಹುದು.
ಪೋಸ್ಟ್ ಆಫೀಸ್ ಸ್ಕಿಮ್ಗಳ ಪ್ರಮುಖ ತೊಡಕುಗಳು ಇಲ್ಲಿ ಬ್ಯಾಂಕ್ ಆರ್ಡಿಯಲ್ಲಿರುವಂತೆ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇರುವುದಿಲ್ಲ. ಖುದ್ದಾಗಿ ಅಂಚೆ ಕಚೇರಿಗೆ ಹೋಗಿ ಹಣ ಪಡೆದರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ